ಹಳೇ ಪಾತ್ರೆ..... ಹಳೇ ಕಬ್ಬುಣ..... ಹಳೇ ಪೇಪರ್ .....

ಹಳೇ ಪಾತ್ರೆ..... ಹಳೇ ಕಬ್ಬುಣ..... ಹಳೇ ಪೇಪರ್ .....

ಹಳೇ ಪಾತ್ರೆ..... ಹಳೇ ಕಬ್ಬುಣ..... ಹಳೇ ಪೇಪರ್ ತರ ಹೋಯಿ...
ಈ ಪ್ರೀತೀ.... ಈ ಪ್ರೇಮಾ..... ಎಲ್ಲ ಬೇಜಾರ್‍ ಕಣ ಹೋಯಿ...
ಚಂದಿರನ ತೂಕಕೆ ಇಡು... ಸಂಜೇನ ಸೇಲಿಗೆ ಬಿಡು....
ಭೂಮಿನ ಬಾಡಿಗೆ ಕೊಡು..... ಸಾಕು..../ಹಳೇ ಪಾತ್ರೆ/......

ದುನಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ದೊರೆತ ಪ್ರತಿಭಾವಂತ ನಿರ್ದೇಶಕ ಸೂರಿ ನಿರ್ದೇಶನದ ವಿಜಿ ಅಭಿನಯದ ’ಜಂಗ್ಲಿ’ ಇಂದು ಬಿಡುಗಡೆಯಾಗಿದೆ, ಸೂರಿ ಯ ’ಇಂತಿ ನಿನ್ನ ಪ್ರೀತಿಯ ......’ ಜನರನ್ನು ತಲುಪುವಲ್ಲಿ ವಿಫಲವಾದರೂ.... ಇಂಪಾದ ಹಾಡುಗಳು ಜನಮಾನಸದಿಂದ ಇನ್ನು ಮಾಸಿಲ್ಲಾ.... ಸಂಗೀತಕ್ಕೆ ರಾಜ್ಯ ಪ್ರಶಸ್ತಿ ಪಡೆದ ಗರಿಮೆಯು ಈ ಚಿತ್ರಕ್ಕಿದೆ... ಆದರೆ ಆ ಒಂದು ಸೋಲು ಸೂರಿನಾ ’ಹೂ ಕನಸಾ ಜೋಕಾಲಿ’ಯಿಂದ ’ ಹಳೇ ಕಬ್ಬುಣ..’ ಮಾರುವ ತನಕ ತಂದು ನಿಲ್ಲಿಸಿದೆ.... ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದು ಮಾಡಿರುವ ಈ ಚಿತ್ರ ಯಶಸ್ವಿಯಾಗಲಿ.....
ಶುಭವಾಗಲಿ ಸೂರಿ......

Rating
No votes yet

Comments