ನಮ್ಮ ಅಂಕಲ್ ಇನ್ನಿಲ್ಲ

ನಮ್ಮ ಅಂಕಲ್ ಇನ್ನಿಲ್ಲ

ಊರೆಲ್ಲಾ ಬಣ ಬಣ ಎಂದೆನಿಸುತಿದೆ. ಅವರು ಕಟ್ಟಿಸಿದ ದೇವಸ್ಥಾನಕ್ಕೆ ಹೋದರೂ ಮನಸ್ಸು ಭಾರವಾಗಿ ಅಲ್ಲಿ ಹೆಚ್ಚು ಹೊತ್ತು ನಿಲ್ಲಲೂ ಆಗದೆ ಕಾಲೆಳೆದುಕೊಂಡು
ಬರುವಂತಾಗುತ್ತಿದೆ.
ಕಣ್ಣು ಮುಚ್ಚಿದರೆ ಅವರ ಮಾತು, ರೂಪ ಕಣ್ತುಂಬಿ ಅಂಕಲ್ ಬಂದು ಬಿಟ್ಟರೇನೋ ಎಂದು ಭಾಸವಾಗಿ ಕಣ್ತೆರೆಯುವಂತಹ ವ್ಯಕ್ತಿತ್ವ ಅವರದ್ದು.
ನಮ್ಮ ಊರಿನ ಗಣಪತಿ ದೇವಸ್ಥಾನದ ಸ್ಥಾಪಕ ವಿಜಯರೆಡ್ಡಿಯವರು ನಮ್ಮನ್ನು ಅಗಲಿ ಇಂದಿಗೆ ಐದು ದಿನಗಳಾಗಿವೆ.
ನಾವೆಲ್ಲಾ ಅವರನ್ನು ಪ್ರೀತಿಯಿಂದ ಅಂಕಲ್ ಎಂದೇ ಕರೆಯುತ್ತಿದ್ದೆವು.
ಶುಕ್ರವಾರಬೆಳಗ್ಗೆ ನಮ್ಮ ಅಕ್ಕನಿಂದ ಫೋನ್ ಬಂತು . ಅಂಕಲ್ ಹಾರ್ಟ್ ಅಟ್ಟಾಕ್ ಆಗಿ ಹೋದರು ಎಂದು. ಅವರದು ಸಾವು ಬರುವಂಥ ವಯಸ್ಸೇನಾಗಿರಲಿಲ್ಲ
ಈಗಷ್ಟೇ ಐವತ್ತು ದಾಟಿದ್ದರು. ಎಚ್ ವಿ ಆರ್ ಎಂದೇ ಎಲ್ಲ್ಡೆಡೆ ಪ್ರಸಿದ್ದಿ ಪಡೆದಿದ್ದರು
ಅವರು ಊರಿನ ಮುಖಂಡರು, ದೇವಸ್ಥಾನದ ಮುಖ್ಯಸ್ಥರು ಮಾತ್ರ ಆಗಿದ್ದರೆ ಅದನ್ನು ಇಲ್ಲಿ ಬರೆಯುವ ಅಗತ್ಯವಿರಲಿಲ್ಲ. ಅವರು ಕೇವಲ ವ್ಯಕ್ತಿಯಾಗಿರಲಿಲ್ಲ .
ಚೆನ್ನಾಗಿ ಓದುವ ಮಕ್ಕಳೆಂದರೆ ಅವರಿಗೇನೋ ಪ್ರೀತಿ . ಅವರ ಸಹಾಯದಿಂದ ವಿದ್ಯೆ ಪೂರ್ತಿಗೊಳಿಸಿದ ಎಷ್ಟೋ ಜನರಲ್ಲಿ ನಾನು ಒಬ್ಬಳು
ಪ್ರಾಯಶ: ಅವರು ಇಲ್ಲದೇ ಹೋಗಿದ್ದರೆ . ಪಿ.ಯುಸಿ ಮಾಡಿ ಯಾವುದಾದರೂ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಬೇಕಿತ್ತೇನೋ ನಾನು.ಕಾಲೇಜು ಸೇರಲು
ಹಣ ಹೊಂದಿಕೆಯಾಗದಿದ್ದಾಗ ತಮ್ಮ ಜೇಬಿನಿಂದ ಹಣ ನೀಡಿ ನನ್ನನ್ನು ಕಾಲೇಜಿಗೆ ಸೇರಿಸಿದ್ದರು. ಹಣ ತೀರಿಸಿರಬಹುದು ಆದರೆ ಆ ಕಷ್ಟ ಕಾಲದಲ್ಲಿ ಊರಿಗೆ
ಅಪರಿಚಿತರಾಗಿದ್ದ ನಮ್ಮನ್ನು ನಂಬಿ ಕೊಟ್ಟ ಉಪಕಾರ ಮಾತ್ರ ತೀರಿಸಲಾಗದ್ದು
ಇದು ಎಲ್ಲರಿಗೂ ಅವರು ಮಾಡುತ್ತಿದ್ದ ಸಹಾಯ.
ಕೆಲಸ ಕಳೆದುಕೊಂಡಾಗ ಗೊಳೋ ಎನ್ನುತ್ತಿದ್ದ ನನ್ನನ್ನು ಸಂತೈಸಿ ಬಾಳಲ್ಲಿ ಧೈರ್ಯ ಹೇಳಿ, ಮುಂದೆ ದಿಟ್ಟೆಯಾಗಿ ನಡೆಯುವಂತೆ ಸ್ಪೂರ್ತಿ ತುಂಬಿದವರು
ಅವರೇ.
ಮುಂದೆ ಒಬ್ಬೊಂಟಿಯಾಗಿ ನಮ್ಮ ಸಂಸ್ತ್ಜೆಯೊಂದನ್ನು ಕಟ್ಟಲು ಹೊರಟಾಗ, ಜೊತೆಯಾಗಿ ಹೆಜ್ಜೆ ಹಾಕಿ ಪ್ರತಿ ಕೆಲಸವನ್ನು ಸುಸೂತ್ರವಾಗೆ ಮಾಡಿಕೊಟ್ಟರು
ಹಣ ಸಹಾಯ ಯಾರು ಬೇಕಾದರೂ ಮಾಡಬಹುದು. ಆದರೆ ಮಾರಲ್ ಸಪ್ಪೋರ್ಟ್ ಮಾತ್ರ ಯಾರು ಕೊಡಲಾಗುವುದಿಲ್ಲ. ಅಂತಹ ಸಹಕಾರ ಅವರು ನಮಗೆಲ್ಲಾ
ಕೊಡುತ್ತಿದ್ದರು.
ಅವರು ಹೋಗಿ ಐದು ದಿನಗಳಾದರೂ ಅದನ್ನು ಅರಗಿಸಿಕೊಳ್ಳಲು ಮನಸಿನ್ನೂ ಸಿದ್ದವಿಲ್ಲ. ಯಾವುದೇ ಕಷ್ಟಾ ಬಂದಾಗ ನಾನು ಕೂಡಲೆ ಅವರಿಗೆ ಫೋನ್ ಮಾಡುತ್ತಿದ್ದೆ
ಈಗ ಯಾರಿಗೆ ಹೇಳಲಿ?
ಈಗ ಇರುವ ಊರಿನ ಮುಖ್ಯಸ್ಥರ ಮೇಲೆ ನಂಬಿಕೆ ಇಲ್ಲ. ಈ ಊರಿನಲ್ಲಿ ಅಕ್ಷರಶ ನಾನು ತಬ್ಬಲಿ ಯಾದೆ ಎಂದೆನಿಸುತ್ತಿದೆ. ಇಲ್ಲಿಯವರೆಗೆ ಹೀಗೊಬ್ಬ ಆತ್ಮೀಯರನ್ನು
ಕಳೆದುಕೊಂಡು ಗೊತ್ತೇ ಇಲ್ಲ. ಅಥವ ನಾನು ಕಳೆದುಕೊಂಡವರೆಲ್ಲಾ ಆತ್ಮೀಯರಾಗೇನಿರಲಿಲ್ಲವೋ?
ಅವರು ಮಾಡಿದ ಸಹಾಯ ಚಿತ್ರಗಳಂತೆ ಇನ್ನೂ ಕಣ್ಣ ಮುಂದೆಯೇ ಬರುತ್ತಿದೆ, ಅವರ ಕೊನೆದಿನಗಳು ನೆಮ್ಮದಿಯಾಗಿರಲಿಲ್ಲ ಎಂದು ಕೇಳಿದೆ. ದೇವರೆ ಅವರ ಆತ್ಮಕ್ಕೆ
ಶಾಂತಿ ಕೊಡು.
ಅವರ ಋಣ ಈ ಜನ್ಮದಲ್ಲಿ ತೀರಿಸಲಾಗಲಿಲ್ಲ. ನಮ್ಮ ಸಂಸ್ಠೆಯ ಏಳನೇ ವರ್ಷದ ಆಚರಣೆಯ ದಿನ ಅವರನ್ನು ಸನ್ಮಾನಿಸಬೇಕು ಎಂದು ನಿರ್ಧಾರ ಮಾಡಿದ್ದೆವು
ಆ ದಿನ ಬರಲೇ ಇಲ
ಮುಂದಿನ ಜನ್ಮ ಅವರು ಎತ್ತುವುದಾದರೆ ಅದು ನನ್ನ ಮಡಿಲೇ ಆಗಿರಲಿ ದೇವರಲ್ಲಿ ಎಂಬುದು ನನ್ನ ಬೇಡಿಕೆ

ಬರೆಯುವುದು ತುಂಬಾ ಇದೆ ಆದರೆ ಬರಿಯಲಾಗುತ್ತಿಲ್ಲ ಹೃದಯವಿನ್ನೂ ಗದ್ಗದಿಸುತ್ತಿದೆ . ಕೈ ನಡುಗುತ್ತಿದ್ದೆ, ಕಣ್ಣಾಲಿ ತುಂಬಿ ಮಂಜಾಗುತ್ತಿದ್ದೆ.

[ಇದು ನಾನು ಅಂಕಲ್ ಅವರಿಗೆ ಸಮರ್ಪಿಸಿದ ಶ್ರದ್ದಾಂಜಲಿ. ಯಾರಿಗಾದರೂ ಇದು ವೈಯುಕ್ತಿಕ ಎನಿಸಿದರೆ ದಯವಿಟ್ಟು ಕ್ಷಮಿಸಿ]

Rating
No votes yet

Comments