ಪ್ರೀತಿ ಬೇರೆಯಲ್ಲ!
ಸಖೀ,
ಪ್ರೀತಿ ಅಂದರೇನೆಂದು
ಕೇಳಿದರೆ ನೀನು,
ಬೇರೆ ಏನ
ಹೇಳಿಯೇನು ನಾನು?
ನಿನ್ನ ಕಂಗಳಲಿ ಸದಾ
ಮಿಂಚುತಿರುವ ಆ ಹೊಳಪು,
ನಿನ್ನ ಮಧುರವಾದ ನುಡಿಗಳು
ನನ್ನ ಕಿವಿಗಳಿಗೀವ ಇಂಪು,
ನೀನು ಮನಬಿಚ್ಚಿ ನಗುವಾಗ
ನನ್ನ ಕಣ್ತುಂಬುವ ನಿನ್ನ ಒನಪು,
ನಾ ಎಲ್ಲೇ ಇದ್ದರೂ ಕ್ಷಣ
ಕ್ಷಣವೂ ಕಾಡುವ ನಿನ್ನ ನೆನಪು,
ಜೀವನದ ಪ್ರತಿ ಗಳಿಗೆಯೂ
ನಿನ್ನೊಂದಿಗೆ ಕಳೆಯಬೇಕೆನ್ನುವ
ನನ್ನೊಳಗಿನ ಹುರುಪು,
ಸದಾ ಒಳಗೊಳಗೆ ನಿನ್ನೊಂದಿಗೆ
ಮಾತಾನಾಡುತ್ತಲೇ ಇರುವ
ನನ್ನ ಈ ಮನದ ಜೊಂಪು,
ಏನ ಕಂಡರೂ,
ಯಾರ ನೋಡಿದರೂ,
ಎಲ್ಲೆಲ್ಲೂ ಬಿಡದೆ
ಕಾಡುವ ನಿನ್ನ ರೂಪು,
ಇದನೆ ನಾ ಪ್ರೀತಿಯೆನ್ನುವೆ
ನೀ ಒಪ್ಪುವುದಾದರೆ ಒಪ್ಪು.
ನೀನು ಬೇರೆ,
ಪ್ರೀತಿ ಬೇರೆಯೆಂದರೆ
ಅದು ನಿನ್ನಾಣೆಗೂ ತಪ್ಪು!
*-*-*-*-*-*-*-*-*
Rating
Comments
ಉ: ಪ್ರೀತಿ ಬೇರೆಯಲ್ಲ!
In reply to ಉ: ಪ್ರೀತಿ ಬೇರೆಯಲ್ಲ! by Seetharmorab
ಉ: ಪ್ರೀತಿ ಬೇರೆಯಲ್ಲ!
In reply to ಉ: ಪ್ರೀತಿ ಬೇರೆಯಲ್ಲ! by asuhegde
ಉ: ಪ್ರೀತಿ ಬೇರೆಯಲ್ಲ!
In reply to ಉ: ಪ್ರೀತಿ ಬೇರೆಯಲ್ಲ! by inchara123
ಉ: ಪ್ರೀತಿ ಬೇರೆಯಲ್ಲ!