ಪಬ್‌ಗೆ ಹೊರಟ ಚಲುವಿಯರೆ,

ಪಬ್‌ಗೆ ಹೊರಟ ಚಲುವಿಯರೆ,

ಪ್ರೇಮಿಗಳ ದಿನಕ್ಕೆ ಇನ್ನೆರಡೇ ದಿನ ಬಾಕಿ ಇದೆ. ಫೆ.೧೪ ಈ ವರ್ಷದಿಂದ ಪ್ರೇಮಿಗಳ ದಿನದ ಬದಲು ಪಬ್ ದಿನವಾಗಿ ಆಚರಿಸಲ್ಪಡುವುದು.
ಪಬ್ (ನಮಗೆ) + ವರಿ (ರಾಮಸೈನ್ಯಕ್ಕೆ)= ಪಬ್ರವರಿ.

ಹುಡುಗೀರೆ,
‘ಪಬ್‌ಗೆ ಹೋಗೋಣ ಬನ್ನಿರೇ
ರೇಣುಕಮ್ಮ ಹೇಳಿದಂತೆ ಮಾಡಿರೆ’
ಎಂದು ಹೊರಟ್ಟಿದ್ದೀರಿ ಸರಿ-
ಅಲ್ಲಿ ಹೋದಾಗ ಏನು ಕುಡಿಯುವುದು?
ಎಷ್ಟು ಕುಡಿಯುವುದು?
ಯಾವ ರೀತಿ ಕುಡಿಯುವುದು?
ಯಾವುದು ಎಷ್ಟು ಕುಡಿದರೆ ಅಮಲೇರುವುದು?
ಯಾವಾಗ ತಲೆತಿರುಗುವುದು? ವಾಂತಿಯಾಗುವುದು?
ಯಾವ ಲೆವೆಲ್‌ನಲ್ಲಿ ಹಳೇಪ್ರೇಮಿ ಬಗ್ಗೆ ನಿಮ್ಮ ಹೊಸ ಪ್ರೇಮಿಯ ಬಳಿ ತೊದಲುವಿರಿ ಗೊತ್ತಿದೆಯಾ?
..ಇಲ್ಲ್ಲಾ.. ..!!!???? ರಾಮ ರಾಮ..ಸ್ಸಾರೀ..ರಮ್ಮಾ ರಮ್ಮಾ..

ರಾಮಸೈನ್ಯವನ್ನು ‘ಕಪಿಸೈನ್ಯ’ವೆಂದಂತೆ, ನಿಮ್ಮನ್ನು ‘ಕುರಿಸೈನ್ಯ’(ರೇಣುಕಮ್ಮ ಹೇಳಿದರು-
ಹೊರಟರು ಕುರಿಗಳ ತರಹ) ಎನ್ನುವುದಿಲ್ಲವೇ? ಯೋಚಿಸಿ?

ಅದಕ್ಕೇ ಹೇಳಿದ್ದು-ನನ್ನ ಕೋಚಿಂಗ್ ಕ್ಲಾಸ್‌ಗೆ ಸೇರಿಕೊಳ್ಳಿ.
೨ ದಿನದ ಕ್ಲಾಸ್‌ಗೆ ೧೦,೦೦೦ ರೂ.
ಟೈಮಿಲ್ಲದವರಿಗೆ ಅರ್ಧ ಘಂಟೆ ಇಂಟೆನ್ಸ್ ಕ್ಲಾಸ್‌ಗೆ ೧೫೦೦೦ ರೂ.
ಇಲ್ಲಿ ನಿಮಗೆ ಪಬ್‌ಗೆ ಹೊರಡುವುದರಿಂದ, ಹೊರಗೆ ಬರುವವರೆಗೆ ಪ್ರತಿ ನಿಮಿಷದ
ಕೋಚಿಂಗ್ ಕೊಡಲಾಗುವುದು.

ನನ್ನ ಬಗ್ಗೆ ನನಗೇ ಹೊಗಳಿಕೊಳ್ಳಲು ಮನಸಿಲ್ಲ. ನಿಮಗೆ ನನ್ನ ಕ್ಲಾಸ್‌ಗಳ ಬಗ್ಗೆ ನಂಬಿಕೆ ಬರಲು ಕೆಲ ವಿಷಯಗಳನ್ನು ಹೇಳಲೇಬೇಕಾಗಿದೆ-
ಎಮ್.ಜಿ.ರೋಡ್‌ಗೆ ಹೋಗಿ ಮಹಾತ್ಮಾ ಗಾಂಧಿ ಬಗ್ಗೆ ಕೇಳಿ-ಗೊತ್ತಿಲ್ಲ.
ಟೈಟ್‌ಮಾಸ್ಟರ್ ಗಣೇಶ್ ಬಗ್ಗೆ ಕೇಳಿ- ಹೇಳದಿದ್ದರೆ ಅವನನ್ನ ಎಳಕೊಂಡು ಹೋಗಿ ಬನಶಂಕರಿಯಲ್ಲಿ ಇಳಿಸಿ }:) . ಅವನು ಎಮ್.ಜಿ.ರೋಡ್‌ಗೆ ಫಿಟ್ ಅಲ್ಲ.
ನಾನು ಹೋಗದಿದ್ದ ಪಬ್ ಇಲ್ಲ! ಕುಡಿಯದಿದ್ದ ಬ್ರಾಂಡ್ ಇಲ್ಲ! ಇದನ್ನು ಮೆಚ್ಚಿ ನನ್ನ
ಹೆಸರಲ್ಲೇ ಒಂದು ಬ್ರಾಂಡ್ ಮಾಡಿದ್ದಾರೆ ಗೊತ್ತಾ?
http://sampada.net/blog/gurubaliga/27/09/2008/12162
‘ಆಗ್ರಾಕ್ಕೆ ಹೋದರೂ ತಾಜ್‌ಮಹಲ್ ಬದಲಿಗೆ, ತಾಜ್ ಬಾರ್ ನೋಡಿ ಬರುವವನು’ ಎಂದು ಎಲ್ಲರೂ ನನ್ನನ್ನು ಹೆಮ್ಮೆಯಿಂದ ಹೊಗಳುವರು.
ಅಷ್ಟೇ ಅಲ್ಲಾ..
ಕುಡಿತದ ಬಗ್ಗೆ ಅನೇಕ ಲೇಖನಗಳನ್ನು ಪತ್ರಿಕೆಗಳಿಗೆ ಕಳುಹಿಸಿರುವೆ. ಹಾಳಾದ್ದೂ..
ಆ ಕಾಲದಲ್ಲಿ ಕುಡಿತವನ್ನು ಸಪೋರ್ಟ್ ಮಾಡುವ ಪತ್ರಿಕೆಗಳು ಇರಲಿಲ್ಲ. (ವರದಿಗಾರರೂ
ಇರಲಿಲ್ಲ. ರಾಜಕಾರಣಿಗಳೂ ಇರಲಿಲ್ಲ. ನಿಮ್ಮಂತಹ ಚಲುವೆಯರೂ ಇರಲಿಲ್ಲ :( )
ಆದ್ದರಿಂದ ನನ್ನ ಲೇಖನಗಳೂ ಪ್ರಕಟವಾಗಲಿಲ್ಲ.
ಅದು ಬಿಡಿ..
ಸಂಪದದಲ್ಲಿ ಬರೆದಾಗಲೂ ಯಾರೊಬ್ಬರೂ ಪ್ರತಿಕ್ರಿಯೆ ಬಿಡಿ, ಓದಲೂ ಇಲ್ಲ!! (ಬರೀ ೨೩೮ ಜನ ಕ್ಲಿಕ್ ಮಾಡಿದರು ಅಷ್ಟೇ)
http://sampada.net/blog/%E0%B2%97%E0%B2%A3%E0%B3%87%E0%B2%B6/20/07/2008/10176
ಹೀಗಾದರೆ ದೇಶ ಪ್ರಗತಿ ಹೊಂದುವುದು ಹೇಗೆ?
ಆದರೆ ಈಗ ಆ ಚಿಂತೆ ಇಲ್ಲ ಬಿಡಿ.
ಕುಡಿತ ಕೆಟ್ಟ ಚಟ ಅಂದವ ಕೆಟ್ಟವ!! ಹ್ಹ..ಹ್ಹ..
ಈಗ ಸಮಯವಿಲ್ಲ, ಕ್ಲಾಸ್‌ಗೆ ಬೇರೆ ತಯಾರಿ ನಡೆಸಬೇಕು.
ಕ್ಲಾಸ್‌ಗೆ ಸೇರಲು ನಮ್ಮದು ಹೆಚ್ಚೇನು ಕಂಡೀಷನ್‌ಗಳಿಲ್ಲ. ಒಂದೇ ಒಂದು ನಿಯಮ
ಪಾಲಿಸಬೇಕು-
ಕ್ಲಾಸ್‌ಗೆ ಹುಡುಗಿಯರು ಮಾತ್ರ ಬರ್ಬೇಕು. (ನಮ್ಮದು ಚಲುವಿಯರಿಗೆ ಕುಡಿತದ ಬಗ್ಗೆ
ಕೋಚಿಂಗ್ ಕ್ಲಾಸ್- ಪ್ರೇಮದ ಬಗ್ಗೆ ಅಲ್ಲ). ಪ್ರೇಮಿಗಳನ್ನು ಕರಕೊಂಡು ಬರಬಾರದು.
ಮೊಬೈಲ್ ಸಹ ತರಬಾರದು. ಪ್ರೇಮಿಗಳ ಬೈಕ್ ಶಬ್ದವೂ ಆಸುಪಾಸಿನಲ್ಲಿ ಕೇಳಬಾರದು.
ಅಂತಹವರನ್ನು ಕ್ಲಾಸ್‌ನಿಂದ ಡಿಬಾರ್ ಮಾಡಿ ಹಣ ಮುಟ್ಟುಗೋಲು ಹಾಕಲಾಗುವುದು.

ನೆಕ್ಸ್ಟ್ ಬ್ಯಾಚ್‌ಗೆ ಸೇರುವ ಆಸಕ್ತಿಯಿದ್ದರೆ ನನಗೆ ಕರೆ ಮಾಡಿ. ನನ್ನ ನಂ-೯೯..ಅರೆ..
ನನ್ನ ಮೊಬೈಲ್ ಯಾವ ಬಾರ್‌ನಲ್ಲಿ ಬಿಟ್ಟುಬಂದೆ..? ಮತ್ತೆ ತಿಳಿಸುವೆ. ‘ಹಾಯ್ ಶೀಲಾ..
ಎಲ್ಲರೂ ಬಂದ್ರಾ..?ಕ್ಲಾಸ್ ಸುರು ಮಾಡೋಣ್ವಾ?’..

-ಗಣೇಶ.

Rating
No votes yet

Comments