ಅರೆರೆರೆ! ಲವ್ ಬರ್ಡ್ ಗಳು ಕಥೆ ಹೇಳ್ತಿವೆ ನೋಡಿ

ಅರೆರೆರೆ! ಲವ್ ಬರ್ಡ್ ಗಳು ಕಥೆ ಹೇಳ್ತಿವೆ ನೋಡಿ

 

img_2447

 

ಹೇ! ನಿನಗೆ ಇವತ್ತು ವ್ಯಾಲೆಂಟೈಸ್ ಡೇ ಆಚರಿಸ್ಲಿಕ್ಕೆ ಭಯ ಅಂತ ಅನ್ಸತ್ತೆ ;)

img_2446

ಯಾಕ್ರಿ ಭಯ ಪಟ್ಕೊಳ್ತೀರಾ! ಪ್ರೀತಿನ ಕಟ್ಟಿ ಹಾಕ್ಲಿಕ್ಕಾಗತ್ತ. ನಾವು ಯಾರಿಗೆ ಯಾಕ್ ಹೆದರ್ಬೇಕು. ಇಲ್ಲಿ ನೋಡಿಇನ್ನೂ ಎಷ್ಟೋ ಜನ ಪ್ರೀತಿ/ಪ್ರೇಮ ಇಲ್ಲದೆ ಬದುಕಲಿಕ್ಕೆ ಆಗೋದಿಲ್ಲ ಅಂತ ಪ್ರೂವ್ ಬೇರೆ ತೋರಿಸ್ಲಿಕ್ಕೆ ತಯಾರಿದ್ದಾರೆ, ಇತಿಹಾಸದ ಪುಟಗಳ ಕಥೆ ಹೇಳ್ತಾರೆ ಕೂಡ!

img_2449

ಯಾರೂ ಇಲ್ಲಿ ಒಬ್ಬಂಟಿಯಲ್ಲ.ಪ್ರೀತಿ ಪ್ರೇಮ ಇಲ್ಲದ್ದು ಜೀವನವೇ ಅಲ್ಲ. ವ್ಯಾಲೆಂಟೈನ್ ಅಂದ್ರೆ ಹುಡುಗ ಹುಡುಗಿಗೋ, ಹುಡುಗಿ ಹುಡುಗನನ್ನೋ ಹುಡುಕ್ಬೇಕು ಅಂತ ಅದಂದ್ದ್ಯಾರು. ಇದರ ಬಗ್ಗೆ ನಾನ್ ರಿಸರ್ಚ್ ಮಾಡಿಲ್ಲ, ಮಾಡೋ ಮನಸ್ಸೂ ಇಲ್ಲ. ಪ್ರೀತಿಸೋರು ಈ ಒಂದು ದಿನ ಆಚರಿಸ್ಕೊಂಡ್ರೆ ತಪ್ಪೇನು?ಸ್ಮಮ್ ಡಾಗ್, ಅದು ಇದು ಅನ್ಕೋತ ಎಲ್ಲದರ ತಪ್ಪನ್ನು ಮಾತ್ರ ಎತ್ತಿ ತೋರಿಸೋದೇಕೆ? ಅಪ್ಪ ಅಮ್ಮನ್ನ ಪ್ರೀತಿ ಮಾಡ್ದೆ ಮನೇಲಿ ಬರೀ ಜಗಳ ಮಾಡ್ಕೊಂಡಿದ್ರೆ ನಾವೂ ಯಾವಾಗ್ಲೂ ಬೀದಿಲಿರ್ಬೇಕಿತ್ತಲ್ವಾ? ಅದಾಗದೆ, ಅನ್ಯೂನ್ಯವಾಗಿ ಜೀವನ ಮಾಡ್ತಿರೋ ಅನೇಕ ಕುಟುಂಬಗಳಲ್ಲಿ ಪ್ರೀತಿ/ಪ್ರೇಮ ವಿಶ್ವಾಸವನ್ನ ಜನ ಯಾಕೆ ನೋಡಲ್ಲ?. ಅವರೆಲ್ಲ ಇಂತದ್ದೊಂದು ದಿನ ಆಚರಣೆಯನ್ನ ಮಾಡಿ ಹೊಸ ಪೀಳಿಗೆಗೆ ಅನ್ಯೂನ್ಯತೆಯ ಪಾಠವನ್ನೇಕೆ ಹೇಳ್ಬಾರದು ಅಂತ ಕೇಳೋಕೆ ಯಾರಿಲ್ಲ ಯಾಕೆ?

ಈ ಪಂಜರದ ಹೊರಗಿರೋ ಜನಾ ಕೂಡ ಇವತ್ತು, ಮಚ್ಚು, ಕತ್ತಿ, ಕೊಡಲಿ ಇಟ್ಟು ಕೊಂಡಿದ್ದಾರಲ್ಲ ಅಂತ ಈ ಲವ್ ಬರ್ಡ್ಸ್ ಗಳಿಗೆ ಗೊತ್ತಾದರೆ,  ಮೊದಲೇ ಪಂಜರದಲ್ಲಿರುವ ಇವು ಅದನ್ನೂ ರಣರಂಗ ಮಾಡಿದ್ರೆ ಗತಿಯೇನು?

ದಾಸರೇಳಿದ ಹಾಗೆ - ನಾಲಗೆ ನಿನ್ನ ನೀಚ ಬುದ್ದಿಯ ಬಿಡು ನಾಲಗೆ ಪಠಿಸಬೇಕು, ನಾಲಗೆಗೆ ನಾಲ್ಕು ಬುದ್ದಿಮಾತುಗಳನ್ನೇಳಬೇಕು. ಇದರ ಜೊತೆಗೇ, ನಿಂದಕರಿರಬೇಕು, ನಾವು ಇಡುವ ಹೆಜ್ಜೆ ಹೆಜ್ಜೆಗೆ ನಮ್ಮನ್ನೆಚ್ಚರಿಸಲು ನಿಂದಕರಿರಬೇಕು.

ಆದ್ರೆ, ಪ್ರಜಾಪ್ರಭುತ್ವದ ಅತಿ ದೊಡ್ಡ ದೇಶವಾದ ಭಾರತದಲ್ಲಿ, ಯಾರೋ ಬಂದು ಅವರ ಹೇರಿಕೆಗಳನ್ನ ನಮ್ಮ ಮೇಲೆ ಹೇರೋದು ಸಂಸ್ಕೃತಿಯಲ್ಲ. ದೌರ್ಜನ್ಯ ಮತ್ತು ಗೂಂಡಾಗಿರಿ. ವಿಶ್ವಕ್ಕೇ ಕಾಮಸೂತ್ರದ ವಿಷಯವನ್ನ ಪುಸ್ತಕದಲ್ಲಿ ಪರಿಚಯಿಸಿರೋದು ಭಾರತ! ಇತಿಹಾಸದ ಎಲ್ಲ ಪುಟಗಳನ್ನ ಎಲ್ಲಾರೂ ಓದಿ ಇಂದು ಮಾತಾಡ್ತಿದ್ದಾರ, ಇಲ್ಲ ಈ ದಿನ ನೆಡೀತಿರೋದು ಮೀಡಿಯಾದಲ್ಲಿ ಹೆಸರನ್ನ ನೊಂದಾಯಿಸಿ ಕು-ಖ್ಯಾತಿ ಗಳಿಸಿ ಇತಿಹಾಸದಲ್ಲಿ ಕಪ್ಪುದಿನದ ಚುಕ್ಕೆ ಇಡಲಿಕ್ಕೆ ಹುನ್ನಾರವೇ ಅನ್ನೋದು ನನ್ನ ಪ್ರಶ್ನೆ.

ಉತ್ತರಗಳನ್ನ ಯಾರಿಂದಲೂ ನಿರೀಕ್ಷಿಸ್ತಿಲ್ಲ. ನನ್ನ ಮನಸ್ಸಿನಲ್ಲಿ ಎದ್ದ ಪ್ರಶ್ನೆ ಮತ್ತು ದ್ವಂದ್ವಗಳಿವು. ಪ್ರಕೃತಿಯನ್ನ ಹತ್ತಿರದಿಂದ ನೋಡ್ಲಿಕ್ಕೆ ಸಿಕ್ಕ ಅವಕಾಶಗಳನ್ನ ಉಪಯೋಗಿಸ್ಕೊಂಡು, ಅದನ್ನ ನನ್ನ ಜೀವನದಲ್ಲಿ ನೆಡೆಯುತ್ತಿರುವ ಘಟನೆಗಳಿಗೆ ಹೋಲಿಸಿ, ಲೆಕ್ಕಾಚಾರ ಹಾಕಿ ಅಳೆಯಲಿಕ್ಕೆ ನನ್ನೀ ಬರಹ!

ಚಿತ್ರಗಳು: ಡಾ. ರವೀಂದ್ರನಾಥ ಐತಾಳರ ವೈದ್ಯವನದಲ್ಲಿ ತೆಗೆದವು. 

Rating
No votes yet

Comments