ಬರವಣಿಗೆ

ಬರವಣಿಗೆ

ನಾನೂ ಕೂಡ ಬ್ಲಾಗ್ ಬರೆಯಬೇಕೆಂಬ ಆಸೆಯನ್ನು ಹತ್ತಿಕ್ಕಲಾರದೆ, ಈ ಮೂಲಕ ನನ್ನ ಮೊದಲ ಕನ್ನಡದ ಬರವನಣಿಗೆಯನ್ನು ಶುರು ಮಾಡುತ್ತಿದ್ದೆನೆ. ಚಿಕ್ಕಂದಿನಿಂದಲೂ ಏನನ್ನಾದರೂ ಬರೆಯಬೇಕೆಂಬ ಹಂಬಲ ನನ್ನನ್ನು ಕಾಡುತ್ತಲೆ ಇತ್ತು. ಆದರೆ ಏನನ್ನು, ಹೀಗೆ ಬರೆಯಬೇಕೆಂಬ ಅರಿವು ಇಲ್ಲದೆ, ಮನಸ್ಸಿಗೆ ಬಂದಿದ್ದನ್ನೆಲ್ಲಾ ಗೀಚಿ ಗೀಚಿ ಎಸೆಯುತ್ತಿದ್ದೆ. ಓದು, ಆಟಗಳ ನಡುವೆ ಈ ನನ್ನ ಹುಚ್ಚಿಗೆ ಕಡಿವಾಣ ಬಿದ್ದಿತ್ತು. ಮುಂದೆ ಮದುವೆ, ಕೆಲಸ, ತಾಯ್ತನ ನನ್ನ ೨೪ ಘಂಟೆಗಳನ್ನು ಕಬಳಿಸಿಬಿಟ್ಟಿತ್ತು. ಈಗ ಮಗ ಓದಲು ಅಮೆರಿಕ ತಲುಪಿದ ಮೇಲೆ ನನ್ನ ಬರೆಯುವ ಆಸೆ ಮತ್ತೆ ಜೀವ ತಳೆದುಬಿಟ್ಟಿದೆ. ನಾನು ಮಗನಿಗೆ ಬ್ಲಾಗ್ ಬರೆಯುತ್ತೇನೆಂದು ಭಾಷೆ ಕೊಟ್ಟೆ. ಅವನಿಗೆ ಗೊತ್ತಿಲ್ಲದ (ಈಗಾಗ್ಲೆ ಎಷ್ಟೋ ಬಾರಿ ಹೇಳಿದ್ದರೂ) ಅವನ್ ಜನ್ಮ ವೃತ್ತಾಂತ, ಅವನ ಬಾಲ ಲೀಲೆಗಳ ಸುಂದರ ರೂಪಕ ಕಥೆ ಬ್ಲಾಗ್ ರೂಪದಲ್ಲಿ ಬರೆಯಲಾರಂಭಿಸಿದೆ (ಆಂಗ್ಲ ಮಾಧ್ಯಮದಲ್ಲಿ).

ಈಗ ನಾನೂ ಸಂಪದಿಗಳಾಗಿರುವುದರಿಂದ, ನಮ್ಮ ಮಾತೃ ನುಡಿ ಕನ್ನಡದಲ್ಲಿ ಬರೆಯಬೇಕೆಂಬ ಆಸೆಯನ್ನು ಪೂರೈಸಿಕೊಳ್ಳುತ್ತಿದ್ದೀನಿ.

ಮುಂಬರುವ ದಿನಗಳಲ್ಲಿ ಸ್ವಲ್ಪ ಹಾಸ್ಯ ಮತ್ತು ಒಳ್ಳೆಯ ವಿಷಯಗಳ ಬಗ್ಗೆ ಬರೆಯುವ ಭರವಸೆ ಕೊಡುವೆ, ಓದಿ ಗೆಳೆಯರು ತಮ್ಮ ಅಮೂಲ್ಯ ಅನಿಸಿಕೆಗಳನ್ನು ದಾಖಲಿಸಬೇಕಾಗಿ ವಿನಂತಿ.

Rating
No votes yet

Comments