ಲಿನಕ್ಸಾಯಣ - ೨೯ - ವಿಂಡೋಸ್ ಟರ್ಮಿನಲ್ ಸರ್ವರ್ ಕ್ಲೈಂಟ್ - tsclient
ಹೌದು, ವಿಂಡೋಸ್ ಸರ್ವರ್ಗೆ ಲಿನಕ್ಸ್ ನಿಂದಾನೇ ಕನೆಕ್ಟ್ ಆಗಬಹುಧು. ಟ್ರೈನಿಂಗ್ ಸೆಂಟರ್ಗಳಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಅನ್ನ ಎಲ್ಲ ಸಿಸ್ಟಂಗಳಲ್ಲಿ ಇನ್ಸ್ಟಾಲ್ ಮಾಡೋದರ ಬದಲು, ಒಂದು ಸರ್ವರ್ನಲ್ಲಿ ಇನ್ಸ್ಟಾಲ್ ಮಾಡಿ, ಇತರೆ ಕ್ಲೈಂಟ್ ಗಳನ್ನ ರಿಮೋಟ್ ಡೆಸ್ಕ್ಟಾಪ್ ನಿಂದ ಸರ್ವರ್ಗೆ ಕನೆಕ್ಟ ಮಾಡೋದು ಅಭ್ಯಾಸ. ನೀವು ಲಿನಕ್ಸ್ ಉಪಯೋಗಿಸ್ತಾ ಇದ್ರೆ, ನೀವು ನಿಮ್ಮ ನೆಟ್ವರ್ಕ್ ನಲ್ಲಿರೋ ಅಥವಾ ಇಂಟರ್ನೆಟ್ ನಲ್ಲಿರೋ ವಿಂಡೋಸ್ ಸಿಸ್ಟಂಗೆ ಕನೆಕ್ಟ್ ಆಗಿ ಅದರ ಡೆಸ್ಕ್ಟಾಪ್ ಮೇಲೆ ಕೆಲಸ ಮಾಡಬಹುದು.
tsclient ಅನ್ನೋ ಈ ಒಂದು ಟೂಲ್ ನಿಮಗೆ ಕೆಳಗೆ ಕೊಟ್ಟಿರುವ ಮೆನುವಿನಲ್ಲಿ ದೊರೆಯುತ್ತದೆ.
Applications -> Internet -> Terminal Service Client
ನೀವಿದನ್ನ ಸೆಲೆಕ್ಟ್ ಮಾಡ್ಕೊಂಡಾಗ ಕೆಳಕಂಡ ವಿಂಡೋ ನಿಮ್ಮ ಮುಂದೆ ಬಂದು ನಿಲ್ಲತ್ತೆ. ಅಲ್ಲಿ ಕಂಪ್ಯೂಟರ್ ನ ಐ.ಪಿ ಅಡ್ರೆಸ್, ವಿಂಡೋಸ್ ಸಿಸ್ಟಂಗೆ ಕನೆಕ್ಟ್ ಮಾಡ್ತಿದ್ರೆ RDP ಅನ್ನೋ ಪ್ರೊಟೊಕೊಲ್ ಸೆಲೆಕ್ಟ್ ಮಾಡಿ ಕೊಂಡು, username ಮತ್ತು password ಕೊಡಿ. ನಂತರ connect ಕ್ಲಿಕ್ ಮಾಡಿ.
ಒಮ್ಮೆ ಕನೆಕ್ಟ್ ಆದ ನಂತರ, ನಿಮ್ಮ ವಿಂಡೋಸ್ ಸರ್ವರ್ನ ಡೆಸ್ಕ್ಟಾಪ್ ಪರದೆ ನಿಮ್ಮ ಲಿನಕ್ಸ್ ನಲ್ಲಿ ಬೇರೆಯದೇ ವಿಂಡೋ ಆಗಿ ಮೂಡಿ ಬರುತ್ತೆ.
ನಿಮಗೆ ಬೇರೇನಾದರು ERROR ಸಂಖೇತ ಕಂಡು ಬಂದರೆ, ಅದನ್ನೊಮ್ಮೆ ಓದಿ ಏತಕ್ಕೆ ನೀವು ಕನೆಕ್ಟ್ ಆಗ್ಲಿಕ್ಕೆ ಸಾಧ್ಯವಿಲ್ಲ ಅನ್ನೋದ ಗೊತ್ತಾಗತ್ತೆ.
ಒಂದು ವಿಷಯ ನೆನಪಿರಲಿ, ನಿಮ್ಮ ವಿಂಡೋಸ್ ಸಿಸ್ಟಂನಲ್ಲಿ ರಿಮೋಟ್ ಡೆಸ್ಕ್ಟಾಪ್ ಸರ್ವೀಸ್ ಅನ್ನು ನಿಮ್ಮ ಅಡ್ಮಿನಿಸ್ಟ್ರೇಟರ್ ಎನೇಬಲ್ ಮಾಡಿದ್ರೆ ಮಾತ್ರ ಈ ರೀತಿ ಕನೆಕ್ಟ್ ಮಾಡ್ಕೊಳ್ಲಿಕ್ಕಾಗತ್ತೆ. ಇಲ್ಲಾಂದ್ರೆ ಅವರನ್ನೊಮ್ಮೆ ಸಂಪರ್ಕಿಸಿ.
Comments
ಉ: ಲಿನಕ್ಸಾಯಣ - ೨೯ - ವಿಂಡೋಸ್ ಟರ್ಮಿನಲ್ ಸರ್ವರ್ ಕ್ಲೈಂಟ್ - tsclient
In reply to ಉ: ಲಿನಕ್ಸಾಯಣ - ೨೯ - ವಿಂಡೋಸ್ ಟರ್ಮಿನಲ್ ಸರ್ವರ್ ಕ್ಲೈಂಟ್ - tsclient by ಶ್ರೀನಿವಾಸ ವೀ. ಬ೦ಗೋಡಿ
ಉ: ಲಿನಕ್ಸಾಯಣ - ೨೯ - ವಿಂಡೋಸ್ ಟರ್ಮಿನಲ್ ಸರ್ವರ್ ಕ್ಲೈಂಟ್ - tsclient