ಲಿನಕ್ಸ್ ಸ್ಥಾಪನೆ , ವಿಸ್ಟಾ ಜೊತೆ ?!

ಲಿನಕ್ಸ್ ಸ್ಥಾಪನೆ , ವಿಸ್ಟಾ ಜೊತೆ ?!

Comments

ಬರಹ

ಸಂಪದಿಗರ ಲಿನಕ್ಸ್ ಹುರುಪು ನೋಡಿ ನಾನೂ ಒಮ್ಮೆ ಲಿನಕ್ಸ್ ಬಳಸೋಣ ಅಂದ್ಕೋತಿದ್ದೆ.  ತುಂಬ ಹಿಂದೆ ಉಬುಂಟು CD ಅನ್ನು ಆರ್ಡರ್ ಮಾಡಿದ್ದೆ. ಇವತ್ತು ಅದು ಬಂತು.

ನನ್ನ ಬಳಿ ಇರುವ ಲ್ಯಾಪ್ಟಾಪ್ ನಲ್ಲಿ ವಿಸ್ಟಾ OS ಇದೆ. ೮೦ GB ಹಾರ್ಡ್ ಡಿಸ್ಕ್ ನಲ್ಲಿ ೩೦ GB C-ಡ್ರೈವ್  ಇದೆ . ಇದರಲ್ಲಿ  ಸುಮಾರು ೧೦ GB backup OS ತಿಂದು ಹಾಕಿದೆ. ಉಳಿದಂತೆ ೪೦ GB ಅನ್ನು D ಡ್ರೈವ್ ಇದೆ.

ಈಗ ನಾನು ನನ್ನ ಲ್ಯಾಪ್ ಟಾಪಿನಲ್ಲಿ ಉಬುಂಟು ಇನ್ಸ್ಟಾಲ್ ಮಾಡಲು ಏನಾದರೂ ಮುಂಜಾಗ್ರೆತೆ ಕ್ರಮಗಳನ್ನು ತೆಗೆದು ಕೊಲ್ಲಬೇಕೇ ಅಂತ ಯಾರಾದರೂ ವಿವರಿಸುತ್ತೀರಾ?

ಹಿಂದೊಮ್ಮೆ ನನ್ನ ಸ್ನೇಹಿತನ ಜೊತೆ ಮಾತಾಡುವಾಗ ( ಅವನೇನೂ expert ಅಲ್ಲ) , ನನ್ನ ಲ್ಯಾಪ್ಟಾಪ್ ಗೆ ಬೇರೆ  OS ಹಾಕಲು ಆಗುವುದಿಲ್ಲ. ನನ್ನ ಲ್ಯಾಪ್ಟಾಪ್ ನ OS ಮತ್ತು ಅದರ ಬ್ಯಾಕ್ ಅಪ್ ಎಲ್ಲ ಏರೇಸ್ ಆಗುತ್ತೆ ಅಂದಿದ್ದ.

ನಿಧಾನವಾಗಿ ಒಮ್ಮೆ ಹುಡುಕ್ತೀನಿ. ಆದರೂ  ನಿಮ್ಮಿಂದ ಏನಾದರೂ ಬಹು ಮುಖ್ಯವಾದ ಟಿಪ್ಸ್ ಸಿಗುತ್ತೋ ಅಂತ ಕಾಯ್ತಾ ಇದ್ದೀನಿ.

ಈ ಬಗ್ಗೆ ಸಂಪದದಲ್ಲಿ ಲೇಖನಗಳು ಬಂದಿದ್ದರೆ ನಾನು ಫುಲ್ ಖುಷ್! :)   
 

ಮುಂಚಿತವಾಗಿ ಧನ್ಯವಾದಗಳು.  :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet