ಮದ್ದಲೆ ನುಡಿಸಿ ಕಾರ್ಯಕ್ರಮದ ಉದ್ಘಾಟನೆ!

ಮದ್ದಲೆ ನುಡಿಸಿ ಕಾರ್ಯಕ್ರಮದ ಉದ್ಘಾಟನೆ!

ಈ ತಿಂಗಳ ೮ ರಂದು ಉಡುಪಿ ಜಿಲ್ಲೆಯ ಪರ್ಕಳದ ಮಂಗಳ ಕಲಾ ಸಾಹಿತ್ಯ ವೇದಿಕೆಯವರು ಹಮ್ಮಿಕೊಂಡಿದ್ದ ತಮ್ಮ ವಾರ್ಷಿಕೋತ್ಸವ ಕಾರ್ಯಕ್ರಮ "ಕನ್ನಡ ಡಿಂಡಿಮ" ದ ಉದ್ಘಾಟನೆಯನ್ನು ಮದ್ದಲೆಯ ಮಾಂತ್ರಿಕ ರಾಷ್ಟ್ರಪ್ರಶಸ್ತಿ ವಿಜೇತ ಶ್ರೀ ಹಿರಿಯಡಕ ಗೋಪಾಲ ರಾವ್ ಅವರು ಮದ್ದಲೆ ನುಡಿಸುವ ಮೂಲಕ ವಿಭಿನ್ನವಾಗಿ ನೆರವೇರಿಸಿದರು.

೯೩ ವರುಷದ ಯುವಕ ಶ್ರೀ ಹಿರಿಯಡಕ ಗೋಪಾಲ ರಾವ್ ಮದ್ದಳೆ ನುಡಿಸಿದಾಗ ಅವರಿಗೆ ಪರ್ಕಳ ಮಂಗಳ ಕಲಾ ಸಾಹಿತ್ಯ ವೇದಿಕೆಯ ಪೋಷಕರು ಹಾಗೂ ಉಡುಪಿಯ ನ್ಯಾಯವಾದಿ ಶ್ರೀ ಆತ್ರಾಡಿ ಪೃಥ್ವಿರಾಜ್ ಹೆಗ್ಡೆಯವರು ಪ್ರಾರ್ಥನೆ (ಯಕ್ಷಗಾನದ ಪ್ರಾರ್ಥನೆ) ಹಾಡಿ ಜೊತೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಅಂಬಾತನಯ ಮುದ್ರಾಡಿಯವರು ವಹಿಸಿದ್ದರು.

ವಿಶೇಷ ಅತಿಥಿಗಳಾಗಿ ಹಿರಿಯ ಲೇಖಕಿ ಶ್ರೀಮತಿ ಇಂದಿರಾ ಹಾಲಂಬಿ (ಗಿರಿವಾಸಿನಿ ಆತ್ರಾಡಿ) ಹಾಗೂ ಹಿರಿಯಡಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಗೂ ಸಂಶೋಧಕ ಶ್ರೀ ಪಾದೆಕಲ್ಲು ವಿಷ್ಣು ಭಟ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ಇಡೀ ದಿನ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾರ್ಯಕ್ರಮಗಳು ಜನಮೆಚ್ಚುಗೆ ಪಡೆದವು.
(ಚಿತ್ರ ನನ್ನದು)

Rating
No votes yet

Comments