ಮಕ್ಕಳ ವ್ಯಾಕ್ಸಿನ್ಗಳ(ಲಸಿಕೆಗಳ) ಪಟ್ಟಿ - ಮತ್ತು ಮಾಹಿತಿ--ಭಾಗ-೧

ಮಕ್ಕಳ ವ್ಯಾಕ್ಸಿನ್ಗಳ(ಲಸಿಕೆಗಳ) ಪಟ್ಟಿ - ಮತ್ತು ಮಾಹಿತಿ--ಭಾಗ-೧

ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ಮಕ್ಕಳ ವ್ಯಾಕ್ಸಿನ್ ಬಗ್ಗೆ ಹೇಳಲಾಗಿದೆ. ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಕೆಳಗಿರುವ ಕೊಂಡಿಗಳಲ್ಲಿ ಪಡೆಯಬಹುದು. ೧. ಅಮೇರಿಕನ್ ಅಕ್ಯಾಡೆಮಿ ಆಫ್ ಪೀಡಿಯಾಟ್ರಿಕ್ಸ್ ತಾಣದಲ್ಲಿ ಮತ್ತು ೨. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ತಾಣದಲ್ಲಿ. ಮೇಲಿರುವ ವ್ಯಾಕ್ಸಿನ್ ಪಟ್ಟಿಯೂ(ಉಳಿದ ಪಟ್ಟಿಗಳ ಜೊತೆ) ಲಭ್ಯ.

http://www.aap.org/sections/infectdis/IZSchedule_Childhood.pdf

www.cdc.gov/vaccines/recs/acip

ಮೊದಲನೆಯದಾಗಿ ಹೆಪಟೈಟಿಸ್-ಬಿ ಯನ್ನು ನೋಡೋಣ, ಏಕೆಂದರೆ ಈ ವ್ಯಾಕ್ಸಿನ್ ಅನ್ನು ಮೊಟ್ಟ ಮೊದಲಲ್ಲಿ ಮಗುವಿಗೆ ಹಾಕಲಾಗತ್ತೆ. ಅಂದರೆ, ಮಗುವು ಹುಟ್ಟಿದ ದಿನವೇ ಕೆಲವೇ ಗಂಟೆಗಳಲ್ಲಿ ಈ ವ್ಯಾಕ್ಸಿನ್ ನ ಮೊದಲನೆಯ ಡೋಸ್ ಕೊಡಲಾಗುತ್ತೆ. ಈ ವ್ಯಾಕ್ಸಿನ್ ತಡಗಟ್ಟುವುದು -"ಹೆಪಟೈಟಿಸ್-ಬಿ" ಎನ್ನುವ ವೈರಾಣುವಿನಿಂದ ಬರುವ ಸಾಂಕ್ರಾಮಿಕ ರೋಗ. ಇದು ಲಿವರ್ ನಲ್ಲಿ ಇನ್ಫ್ಲಮೇಶನ್ ಉಂಟುಮಾಡಿ ಕ್ರಮೇಣ ಲಿವರ್ ನ ಫೈಲ್ಯುರ್ ಗೆ ಕಾರಣವಾಗಿ ಜೀವವನ್ನು ತೆಗೆಯುತ್ತದೆ. ಇದು ಸಾಮಾನ್ಯವಾಗಿ ದೇಹದ ಫ್ಲೂಇಡ್ಸ್ (ರಕ್ತ, ಎಂಜಲು ಮೂತ್ರ ಮತ್ತಿತರ ದ್ರವಗಳಿಂದ) ಒಬ್ಬರಿಂದೊಬ್ಬರಿಗೆ ಹರಡುತ್ತದೆ. ತಾಯಿಯಿಂದ-ಮಕ್ಕಳಿಗೆ ಹೆರಿಗೆಯ ಸಮಯದಲ್ಲಿ ರಕ್ತದ ಮೂಲಕ ಮತ್ತು ಪ್ಲಾಸೆಂಟಾ ಮೂಲಕವು ಬರುವ ಸಂಭವ ಉಂಟು.

ಹೆಪಟೈಟಿಸ್-ಬಿ- ವ್ಯಾಕ್ಸಿನ್----ಒಟ್ಟು ೩-ಡೋಸುಗಳು. ಅವುಗಳನ್ನು ಹೀಗೆ ಕೊಡಲಾಗುತ್ತೆ. ಮೊದಲನೆಯದು - ಹುಟ್ಟಿದ ದಿನ ಅಥವಾ ಮಗು ಆಸ್ಪತ್ರೆಯಿಂದ ಮನೆಗೆ ಹೋಗುವ ಮೊದಲು. ಎರಡನೆಯದು - ಮೊದಲನೆಯದರಿಂದ ಕನಿಷ್ಠ ೪ ರಿಂದ ೬ ವಾರಗಳ ನಂತರ ಹಾಕಬೇಕು. ಮೂರನೆಯದು - ಎರಡನೆಯದರಿಂದ- ೪- ಮಾಸಗಳ ನಂತರ ಅಂದರೆ, ಮಗುವಿಗೆ (ಹೆಚ್ಚು-ಕಡಿಮೆ) -೬- ತಿಂಗಳ ವಯಸ್ಸಿನಲ್ಲಿ ಹಾಕಲಾಗುವುದು. ಹೀಗೆ ಕ್ರಮವಾಗಿ ಮೊದಲನೆಯ ವರ್ಷದಲ್ಲಿ ಹಾಕಲಾಗದಿದ್ದಾಗ, ಯಾವಾಗ ಸರಣಿ ಶುರುಮಾಡಲಾಗತ್ತೋ, ಆಗ ಮೊದಲನೆಯ ಡೋಸು, ನಂತರ ಹೆಚ್ಚು-ಕಡಿಮೆ ೨-ತಿಂಗಳ ಅವಧಿಯ ನಂತರ ಎರಡನೆಯ ಡೋಸು ಮತ್ತು ಮೂರನೆಯ ಡೋಸು ಎರಡರಿಂದ ೩-೪ ತಿಂಗಳ ಅವಧಿಯ ನಂತರ ಹಾಗೂ ಮೊದಲನೆಯ ಡೋಸಿನಿಂದ -೬- ತಿಂಗಳ ಅವಧಿಯ ನಂತರ ಹಾಕಿಸಬಹುದು. ಅದನ್ನು ಹೀಗೆ ಬರೆಯಬಹುದು........

ಮೊದಲನೆ ಡೋಸು.........೬-ರಿಂದ-೮-ವಾರಗಳ ಬಳಿಕ.......ಎರಡನೆಯ ಡೋಸು.........-೩-೪-ತಿಂಗಳ ಬಳಿಕ..........ಮೂರನೆಯ ಡೋಸು.
ಮೇಲಿನ ಪಟ್ಟಿಯಲ್ಲಿ, ಅಥವಾ ಏಏಪಿ ಕೊಂಡಿಯಲ್ಲಿ ಹೆಚ್ಚಿನ ಮಾಹಿತಿ ಕಾಣಬಹುದು.

ನಾನು ಕಂಡಂತೆ ಹೆಪಟೈಟಿಸ್-ಬಿ- ವ್ಯಾಕ್ಸಿನ್ ಇಂದ ಬರುವ ಸೈಡ್ ಎಫೆಕ್ಟ್ಸ್....................ಸಣ್ಣ ಜ್ವರ,(ತುಂಬಾ ಅಪರೂಪ), ಚುಚ್ಚಿದ ಜಾಗದಲ್ಲಿ ಸೋರ್ನೆಸ್( ಸ್ವಲ್ಪ ಕೆಂಪಗೆ ಆಗುವುದು) , ಸಣ್ಣಗೆ ನೋವು, ಕೆಲವು ಸಲ ಡಿಸ್ಸಿನೆಸ್ಸ್ (ತಲೆತಿರುಗುವುದು)---ಇದು ತುಂಬಾ ಅಪರೂಪ, ಹೆಚ್ಚು-ಕಡಿಮೆ ಚುಚ್ಚುಮದ್ದಿಗೆ ಬಯಪಡುವವರಲ್ಲಿ ಇದನ್ನ ಅಪರೂಪಕ್ಕೆ ಕಾಣಬಹುದು. ಇದರ ಬಗ್ಗೆ ಅಂಕಿ-ಅಂಶಗಳಿಗೆ ಏಏಪಿ ತಾಣಕ್ಕೆ ಹೋಗಿ, ಹೆಲ್ತ್ ಟಾಪಿಕ್ಸ್ ಲ್ಲಿ ಕ್ಲಿಕ್ ಮಾಡಿ, ವ್ಯಾಕ್ಸಿನ್ ನ್ನು ಸೆಲೆಕ್ಟ್ ಮಾಡಿ, ಅಲ್ಲಿಂದ ಯಾವ ಮಾಹಿತಿಯನ್ನು ಬೇಕಾದರೂ ಹೊರಗೆ ತೆಗೆಯಬಹುದು. ಎಲ್ಲ ತರಹದ ಮಾಹಿತಿ ಅಲ್ಲಿದೆ, ಯಾಕೆ ಹಾಕಿಸಬೇಕು ವ್ಯಾಕ್ಸಿನ್? ,ಹಾಕದಿದ್ದರೆ, ಹೆಪಟೈಟಿಸ್ ಖಾಯಿಲೆಯಿಂದ ದೇಹಕ್ಕೆ ಏನೇನು ಪರಿಣಾಮಗಳಾಗಬಹುದು (ಯಾವ ಅಂಕಿ-ಅಂಶಗಳಲ್ಲಿ), ಬೇರೇ ಏನಾದರೂ ತೆರಪಿ ಇದೆಯೇ ಇದಕ್ಕೆ ವ್ಯಾಕ್ಸಿನ್ ಬಿಟ್ಟು?, ವ್ಯಾಕ್ಸಿನ್ ಹೇಗೆ ತಯಾರಿಸುತ್ತಾರೆ? ಎಲ್ಲೆಲ್ಲಿ? ಇದುವರೆಗೆ ಎಷ್ಟು ಜನಕ್ಕೆ ಈ ರೋಗ ಬರದ ಹಾಗೆ ತಡಗಟ್ಟಿದೆ? ಇನ್ನೂ ಅನೇಕ ಸಂಗತಿಗಳು ನಿಮಗೆ ದೊರಕುತ್ತೆ. ಸಿ.ಡಿ.ಸಿ ತಾಣದಲ್ಲೂ ಹೆಚ್ಚಿನ ಎಲ್ಲಾ ತರಹದ ಮಾಹಿತಿ ದೊರಕುತ್ತದೆ. ಇಲ್ಲಿ ಎಲ್ಲವನ್ನೂ ಬರೆಯಲು ನನಗೆ ಕಾಲಾವಕಾಶ ಇಲ್ಲದಿರುವುದು ಮತ್ತು ಅದರ ಅವಶ್ಯಕತೆಯೂ ಇಲ್ಲ. ( ಎಲ್ಲ ಮೇಲಿನ ತಾಣದಲ್ಲಿ ಸಿಗುವುದರಿಂದ).

ಮುಂದಿನ ಸಂಚಿಕೆಯಲ್ಲಿ ಮುಂದಿನ ವ್ಯಾಕ್ಸಿನ್ ಬಗ್ಗೆ ಬರೆಯುವೆ. ಓದುಗರ ಪ್ರತಿಕ್ರಿಯೆಗೆ ಸ್ವಾಗತ, ನಿಮ್ಮ ಪ್ರಶ್ನೆಗಳಿಗೆ ಮೇಲಿನ ತಾಣದಲ್ಲಿ ಉತ್ತರ ಹುಡುಕಲು ಪ್ರಯತ್ನಿಸಿದರೆ ನನಗೆ ನೆರವಾಗುವುದು. ನಾನೂ ಸಹ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಆದಷ್ಟು ಪ್ರಯತ್ನಿಸುತ್ತೇನೆ.

Rating
No votes yet

Comments