ಪ್ರೀತಿಯ ಗೆಳೆಯನಿಗೊಂದು ಪತ್ರ

ಪ್ರೀತಿಯ ಗೆಳೆಯನಿಗೊಂದು ಪತ್ರ

ಗೆಳೆಯ, ನೀ ಹೋದೆಯೆಲ್ಲಿಗೆ? ನಿನಗೆ ನನ್ನ ನೆನಪಾಗಲಿಲ್ಲವೇ? ನಿನಗಾಗಿ ಜೀವವೊಂದು ಕಾಯುತ್ತಿದೆಯೆಂದು ಗೊತ್ತಿದ್ದರೂ ಹೋದೆಯಾ! ನೀನಿಲ್ಲದೆ ಈ ಜೀವನಕ್ಕೆ ಅರ್ಥವಿಲ್ಲದಂತಾಗಿದೆ, ಮಂಕು ಬಡಿದಿದೆ ಈ ಬುದ್ಧಿಗೆ. ನಿನ್ನ ಪ್ರೀತಿ ಬಿಟ್ಟು ಬೇರೆ ಏನನ್ನು ಬಯಸಲಿಲ್ಲ ನಾನು. ಆದರೂ ನನ್ನ ಬಿಟ್ಟು ಹೋದದ್ದೆಲ್ಲಿಗೆ?

ಪಟ್ಟದರಸಿ ಎನ್ನುತ್ತಿದ್ದ ನೀನು ನನ್ನೊಬ್ಬಳನ್ನೆ ಈ ಸಾಮ್ರಾಜ್ಯದಲ್ಲಿ ಬಿಟ್ಟು ಹೋದದ್ದೇಕೆ? ಹೃದಯೇಶ್ವರಿ ಎಂದ ನೀನು ಹೃದಯದ ಕದವನ್ನು ಮುಚ್ಚಿದ್ದೇಕೆ? ನನ್ನ ಕಣ್ಣಿನಂದವನ್ನು ಬಣ್ಣಿಸುತ್ತಿದ್ದ ನೀನು, ಕಣ್ಣೀರಿನಿಂದದನ್ನು ತೊಳೆಯುವಂತೆ ಮಾಡಿದ್ದೇಕೆ?

ನನ್ನ ನಗುವೇ ಬದುಕೆಂದ ನೀನು ಅದನ್ನು ಕದ್ದೊಯ್ದೆ ಏಕೆ? ದುಃಖದಲ್ಲಿ ಮುಳುಗಲೆಂದೆ? ನಿನ್ನ ಮಾತುಗಳಿಲ್ಲದೆ ಈ ಕಿವಿಗಳು ಬಣಗುಟ್ಟುತ್ತಿವೆ. ಹೃದಯ ಚೂರುಚೂರಾಗಿದೆ. ಜಗತ್ತೇ ಕತ್ತಲಾಗಿದೆ, ಬಾಳೇ ಬರಡಾಗಿದೆ.

ಹಿಂದಿರುಗಿ ಬಾ ಗೆಳೆಯಾ. ನಗುವಿನ ಅಭಿಷೇಕವನ್ನೇ ಮಾಡುವೆ ನಿನಗೆ. ನನ್ನ ಪ್ರೀತಿಯ ಮಳೆಯಲ್ಲಿ ತೋಯಿಸುವೆ. ಈ ಹೃದಯದಲ್ಲಿಟ್ಟುಕೊಂಡು ಪೂಜೆ ಮಾಡುವೆ.

ಬರುತ್ತೀಯಲ್ಲ ಎಂಬ ಆಶಯದೊಂದಿಗೆ

ನಿನ್ನ ಪ್ರೀತಿಯ

...................................

Rating
Average: 3.7 (3 votes)

Comments