ಟಿ ವಿ ನೈನ್ ನಿರೂಪಕಿಯರ ಕನ್ನಡ ಉಚ್ಛಾರಣೆ

ಟಿ ವಿ ನೈನ್ ನಿರೂಪಕಿಯರ ಕನ್ನಡ ಉಚ್ಛಾರಣೆ

ನಮಸ್ಕಾರ,

ಟಿ ವಿ ನೈನ್ ವಾಹಿನಿಯನ್ನು ವೀಕ್ಷಿಸುವವರಿಗೆಲ್ಲಾ ಗೊತ್ತಿರಬಹುದಾದ ವಿಷ್ಯ ಇದಾದರೂ ಮತ್ತೊಮ್ಮೆ ತಮ್ಮ ಗಮನಕ್ಕೆ .....

ಭಾಷೆಯ ಉಳಿವಿಗೆ ಭಾಷೀಯ ಪ್ರಯೋಗ ಮಾತ್ರವಲ್ಲ ಭಾಷೆಯ ಸರಿಯಾದ ಪ್ರಯೋಗವು ಕೂಡ ತುಂಬಾ ಮುಖ್ಯ...
ಮುಖ್ಯವಾಗಿ ಕೋಟ್ಯಂತರ ವೀಕ್ಷಕರನ್ನು ಮುಟ್ಟುತ್ತಿರುವ ವಾಹಿನಿಗಳಲ್ಲಿ....

ಮೊದಲು ಇದನ್ನು ಶುರು ಮಾಡಿದ ಪುಣ್ಯಾತ್ಮರು ಯಾರೊ ಯಾವ ವಾಹಿನಿಯಲ್ಲೋ ಗೊತ್ತಿಲ್ಲ.... ಆದರೆ ಟಿ ವಿ ನೈನ್ ನಿರೂಪಕಿಯರು ಮಾತ್ರ ಇದನ್ನು ಯದ್ವಾ ತದ್ವಾ ಉಪಯೋಗಿಸುತ್ತಿದ್ದರೆ... ಪೂರ್ಣ ವಿರಾಮ ಅಲ್ಪ ವಿರಾಮಗಳ ಕನಿಷ್ಟ ತಿಳುವಳಿಕೆ ಇಲ್ಲದಂತೆ ಮಾತನಾಡುವ ಇವರ ಮಾತುಗಳನ್ನು ಕೇಳುತ್ತಿದ್ದರೆ ನಿಜಕ್ಕೂ ಅಸಹ್ಯವಾಗುತ್ತಿದೆ..... ಮುಖ್ಯವಾಗಿ ವಾಕ್ಯಗಳನ್ನು ಕೊನೆಗೊಳಿಸುವಾಗ.... ವ್ಯಾಕರಣದ ಕನಿಷ್ಟ ತಿಳುವಳಿಕೆ ಇಲ್ಲದವರೂ ಹೊಸ ಭಾಷ್ಯ ಬರೆಯಲು ಹೊರಟಂತಿದೆ.... ಕನ್ನಡದ ಕೊಲೆಯಾಗುತ್ತಿದೆ...

ಕೆಲವು ನಿರೂಪಕಿಯರ ಮಾತುಗಳನ್ನಂತೂ ಕೇಳಲು ಸಾಧ್ಯವೇ ಇಲ್ಲ.... ನಿರೂಪಕರಲ್ಲಿ ಈ ಖಾಯಿಲೆ ಇನ್ನು ಅಷ್ಟಾಗಿ ಕಂಡು ಬಂದಿಲ್ಲ...
ನಿರೂಪಕಿಯರು ಅದನ್ನು ಒಂದು ಫ್ಯಾಷನ್ ಅಂತ ಮಾತಡ್ತಿದ್ದಾರೋ ಅಥವ ಯಾರದ್ದೋ ಅಂಧ ಅನುಕರಣೆಯೋ ತಿಳಿಯುತ್ತಿಲ್ಲ....

ಒಟ್ಟಿನಲ್ಲಿ ಕೇಳುಗರ ಗ್ರಹಚಾರ ಅಷ್ಟೇ.... ಇದಕ್ಕೆ ಸಂಬಂಧಪಟ್ಟಂತೆ ಟಿವಿ ನೈನ್ ವಾಹಿನಿಗೆ ಒಂದೆರಡು ಮೈಲ್ ಗಳನ್ನು ಪತ್ರಗಳನ್ನು ಬರೆದ್ದಿದ್ದೆ.... ಯಾವ ಪ್ರಯೋಜನವು ಇಲ್ಲ.... ಹೇಗೂ ಪ್ರಿಯಾಂಕ್ ರವರು ಹೊಸ ದಾರಿಯೊಂದನ್ನು ತೋರಿಸಿದ್ದಾರೆ.... ಅದನ್ನೇ ಇಲ್ಲೂ ಪ್ರಯೋಗಿಸಬಾರದೇಕೆ??/

ಇಂತವರ ಬಾಯಲ್ಲಿ ಕಸ್ತೂರಿ ಕನ್ನಡ ತನ್ನ ಕಂಪನ್ನು ಸೊಗಸನ್ನು ಕಳೆದುಕೊಂಡು ನಲುಗುತ್ತಿದೆ...... ದಯವಿಟ್ಟು ಹಾಗಗಲು ಬಿಡಬೇಡಿ......

Rating
No votes yet

Comments