ಮೆಕಾಲೆ ಶಿಕ್ಷಣದಿಂದ ಮಹರ್ಷಿ ಶಿಕ್ಷಣದ ಕಡೆಗೆ

ಮೆಕಾಲೆ ಶಿಕ್ಷಣದಿಂದ ಮಹರ್ಷಿ ಶಿಕ್ಷಣದ ಕಡೆಗೆ

 [ಮಿತ್ರ ಅನಂತನಾರಯಣ ಒಂದು ಲೇಖನ ಕಳಿಸಿಕೊಟ್ಟಿದ್ದಾರೆ.ಶಾಲೆಯ ಸ್ಮರಣ ಸಂಚಿಕೆಗಾಗಿ ಬರೆದಿರುವ ಈ ಲೇಖನವನ್ನು ಸಂಪದಿಗರಿಗಾಗಿ ಪ್ರಕಟಿಸಿರುವೆ]

ದೆಹಲಿಯಲ್ಲಿ  ಅಂತರ್  ಶಾಲಾ
ಚಿತ್ರಕಲಾಸ್ಪರ್ಧೆ ಯೊಂದು ನಡೆದಿತ್ತು. ಪ್ರಥಮ ಬಹುಮಾನಕ್ಕೆ  ಒಂದು ಚಿತ್ರ ಆಯ್ಕೆಯಾಯ್ತು.  ಸಂಘಟಕರು ಆಚಿತ್ರವನ್ನು ನೋಡಿದವರೇ ಬಹುಮಾನ ಘೋಷಣೆ ಯಾಗುವ
ಮುಂಚೆ  ಚಿತ್ರ ಬರೆದ ಮಗುವನ್ನು ಕರೆಸಿದರು. ಮಗುವಿಗೆ
ಕೆಲವು  ಪ್ರಶ್ನೆಗಳನ್ನು ಕೇಳಿದರು.

 

-" ಮಗು ಈ ಚಿತ್ರ ಯಾವುದು?"

ಮಗು-" ರಾಷ್ಟ್ರಪತಿಗಳು
ಕೆಂಪುಕೋಟೆಯ ಮೇಲೆ  ತ್ರಿವರ್ಣ ಧ್ವಜ ಹಾರಿಸುತ್ತಿರುವ
ದೃಶ್ಯ."

-ಧ್ವಜ ಸ್ಥಂಭದ ಬುಡದಲ್ಲಿರುವ
ಚಿತ್ರ ಯಾವುದು?

ಮಗು-" ಅದು ಬಾಂಬ್"

-ಧ್ವಜಾರೋಹಣದ ಸಮಯದಲ್ಲಿ
ಬಾಂಬ್ ಏಕೆ?

ಮಗು-" ರಾಷ್ಟ್ರಪತಿಗಳು
ಧ್ವಜಾರೋಹಣಮಾಡುವಾಗ ಬಾಂಬ್ ಸಿಡಿಯುತ್ತೆ, ರಾಷ್ಟ್ರಪತಿಗಳು ಸಾಯುತ್ತಾರೆ, ಶಾಲೆಗೆ ರಜಾ ಕೊಡುತ್ತಾರೆ"

-ಅಲ್ಲಾ ಮಗು ಬಾಂಬ್ ಸಿಡಿದರೆ
ರಾಷ್ಟ್ರಪತಿಗಳಷ್ಟೇ ಅಲ್ಲ ಅಲ್ಲಿರುವ ಎಲ್ಲಾ ಜನಗಳೂ ಸಾಯುತ್ತಾರೆ, ಅಲ್ಲಿರುವ ನೀನೂ ಕೂಡ.

ಆಗ ಮಗು ಸ್ವಲ್ಪ ಯೋಚಿಸಿ-"
ಚಿತ್ರವನ್ನು ಕೊಡಿ ಸರಿಮಾಡಿ ಕೊಡುತ್ತೇನೆ" ಎಂದು ಹೇಳಿ ಚಿತ್ರವನ್ನು ಹಿಂದಿರುಗಿ ಪಡೆಯತ್ತದೆ. ತೀರ್ಪುಗಾರರು
ಭಾವಿಸುತ್ತಾರೆ " ಬಾಂಬ್ ಚಿತ್ರವನ್ನು ಮಗು ಅಳಿಸಬಹುದೆಂದು". ಮಗು ಚಿತ್ರವನ್ನು ಸರಿಪಡಿಸಿ ಹಿಂದಿರುಗಿಸುತ್ತೆ.
ತೀರ್ಪುಗಾರರು ನೋಡುತ್ತಾರೆ. ಅದರ ಮೇಲೆ " ಮೇಡ್ ಇನ್ ಇಂಡಿಯಾ" ಎಂದು ಬರೆದಿದೆ. ಮಗು ಹೇಳುತ್ತೆ
" ಈಗ ನೋಡಿ ಬಾಂಬ್ ಸಿಡಿಯುವುದೇ ಇಲ್ಲ"

ನೋಡಲು ಇದೊಂದು ಚಿಕ್ಕ ಘಟನೆ.
ಆದರೆ ಇದರ ಹಿಂದೆ ಅದೆಂತಹಾ ಮನಸ್ಥಿತಿ ಇದೆ! ದೇಶದ ಅತ್ಯುನ್ನತ ಹುದ್ಧೆಯ ಬಗ್ಗೆ ಮಗುವಿನ ಮನೋಭಾವ
ಏನು? ರಾಷ್ಟ್ರಪತಿ  ಸತ್ತರೆ ಶಾಲೆಗೆ ಒಂದು ದಿನ ರಜೆ!
ಮಗುವಿಗೆ ಆನಂದ. ಇದು ನಮ್ಮಇಂದಿನ ಶಿಕ್ಷಣದ  ಶಿಕ್ಷಣದ
ಪರಿಣಾಮ.

ಹದಿನೆಂಟನೆಯ ಶತಮಾನದ ಆದಿಯಲ್ಲಿ ತಕ್ಕಡಿ
ಹಿಡಿದು ಕಾಲಿಟ್ಟ ಬ್ರಿಟಿಷರು ಕೊನೆಗೆ ಎರಡು ಶತಮಾನಗಳು ನಮ್ಮನ್ನಾಳಿದರು.ಆದರೆ ಆಗ ನಾವು ಸಾಂಸ್ಕೃತಿಕವಾಗಿ
ಎಷ್ಟು ಸಮೃದ್ಧವಾಗಿದ್ದೆವೆಂದರೆ ೧೮೩೫ ರ ಫೆಬ್ರವರಿ ೨ ರಂದು ಮೆಕಾಲೆಯು ಬ್ರಿಟಿಶ್ ಪಾರ್ಲಿಮೆಂಟಿನಲ್ಲಿ
ಮಾಡಿದ ಭಾಷಣ ವನ್ನು ಗಮನಿಸಬೇಕು-" ನಾನು ಭಾರತದ ಉದ್ದಗಲಕ್ಕೂ ಪ್ರವಾಸ ಮಾಡಿದ್ದೇನೆ, ನಾನುಒಬ್ಬ
ಬಿಕ್ಷುಕನನ್ನು ನೋಡಲಿಲ್ಲ, ಒಬ್ಬ ಕಳ್ಳನನ್ನು ನೋಡಲಿಲ್ಲ,. ಭಾರತವು ಸಂಪದ್ಭರಿತವಾಗಿದೆ.
ಭಾರತೀಯರ ನೈತಿಕತೆಯು ಅತ್ಯಂತ ಶ್ರೇಷ್ಠವಾದ ಮಟ್ಟದ್ದು, ಆದ್ದರಿಂದ ಭಾರತೀಯರ ನೈತಿಕ ಶಕ್ತಿಗೆ ಬೆನ್ನೆಲುಬಾಗಿರುವುದು
ಭಾರತದ ಅಂತ: ಶಕ್ತಿ, ಅಲ್ಲಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಪರಂಪರೆ. ಈ ಅಂತ:ಶಕ್ತಿಯನ್ನು ನಮ್ಮ ಆಂಗ್ಲಶಿಕ್ಷಣದಿಂದ
ನಾಶ ಪಡಿಸಿ ಇಂಗ್ಳೀಶ್ ಶಿಕ್ಷಣದ ವ್ಯಾಮೋಹವನ್ನು ಎಷ್ಟರ ಮಟ್ಟಿಗೆ ಬೆಳೆಸ ಬೇಕೆಂದರೆ ಭಾರತದಸಂಸ್ಕೃತಿಯ
ಬಗ್ಗೆ ಅಲ್ಲಿನ ಪರಂಪರೆಯ ಬಗ್ಗೆ ಅವರಿಗೆ ತಿರಸ್ಕಾರ ಬರಬೇಕು, ಆಗಮಾತ್ರ ನಾವು ಅವರನ್ನು ಆಳಲು ಸಾಧ್ಯ."
ಬ್ರಿಟಿಶರು ಈ ಒಂದು ಪ್ರಯತ್ನದಲ್ಲಿ
ಎಷ್ಟು ಸಫಲರಾದರೆಂದರೆ ಅವರ ಶಿಕ್ಷಣದ ಮೂಲಕ ಒಂದು ಬುದ್ಧಿವಂತವರ್ಗವನ್ನು ಇಲ್ಲಿಯೇ ಸೃಷ್ಟಿಸಿ, ಅವರ
ಮೂಲಕವೇ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುವ, ಪಾಷ್ಚಿಮಾತ್ಯ ಸಂಸ್ಕೃತಿಯೆಂದರೆ ಶ್ರೇಷ್ಠವೆಂದು ಭ್ರಮಿಸುವಂತೆ
ಮಾಡಿ, ಕೊನೆಗೆ ಯಾವ ಹಂತವನ್ನು ನಾವು ತಲುಪಿದೆ ವೆಂದರೆ ಮೆಕಾಲೆ ಹೇಳಿದಂತೆ " ಚರ್ಮ ಮಾತ್ರ
ಭಾರತೀಯರದಾಗಿರಬೇಕು, ಆದರೆ ಒಳಗೆಲ್ಲಾ ಇಂಗ್ಳೀಶ್ ಮಯವಾಗಿಬಿಡಬೇಕು,"

ದೆಹಲಿಯಲ್ಲಿ ಚಿತ್ರ ಬರೆದು
ಬಹುಮಾನ ಗಿಟ್ಟಿಸಿದ ಮಗು ಒಂದು ಉಧಾಹರಣೆ ಮಾತ್ರ.ಮಗುವಿನಲ್ಲಿ  ಅತ್ಯಂತ ಬುದ್ಧಿವಂತಿಕೆ ಇದೆ.ಆದರೆ ಈ ದೇಶದ ಬಗ್ಗೆ, ನಮ್ಮ
ಪರಂಪರೆಯ ಬಗ್ಗೆ ,  ಆ ಮಗುವಿನಲ್ಲಿ ಶ್ರದ್ಧೆ, ದೇಶಭಕ್ತಿ
,ಗೌರವವನ್ನು ಮೂಡಿಸುವಂತಹ ಸಂಸ್ಕಾರ, ಶಿಕ್ಷಣವನ್ನು ಕೊಡಬೇಕಾದವರು ಮಾಡಿದ್ದೇನು? ಒಂದು ದೇಶದ ಮಣ್ಣಿನ
ಕಣ ಕಣ ಗಳಬಗ್ಗೆ ಗೌರವ ಮೂಡಿಸಬೇಕಾದ ಶಿಕ್ಷಣವು  ಆ ದೇಶದ ಬಗ್ಗೆ ತಿರಸ್ಕಾರ ಮೂಡಿಸುವಂತಾದರೆ  ಆ ದೇಶದ ಗತಿ ? ಮೆಕಾಲೆಯ ಉದ್ಧೇಶವೂ  ಇದೇ ಆಗಿತ್ತಲ್ಲವೇ?

ಇಂದಿಗೂ ಅದೇ ಮೆಕಾಲೆ
ಮಾದರಿಯ ಶಿಕ್ಷಣಪದ್ದತಿ ಮುಂದುವರಿದಿರುವುದು ನಮ್ಮ ದೇಶದ ದುರ್ದೈವ.ವಿಶ್ವವಿದ್ಯಾಲಯಗಳಿಂದ ಹೊರಬರುವ
ಪದವೀಧರನೊಬ್ಬನ ಗುರಿಯಾದರೂ ಏನು? ಅತೀ ಕಡಿಮೆ ಕೆಲಸ ಮಾಡಿ ಅತೀ ಕಡಿಮೆ ಸಮಯದಲ್ಲಿ ಅತಿಹೆಚ್ಚು  ಹಣ ಗಳಿಕೆ, ಕೋಟಿ ಕೋಟಿ ಸಂಪಾದಿಸುವುದು ಹೇಗೆ?  ಎಲ್ಲಾ ರಂಗದಲ್ಲೂ ಬ್ರಷ್ಟಾಚಾರ. ಸ್ವಾರ್ಥಕ್ಕಾಗಿ ದೇಶದ
ಭದ್ರತಾ ವ್ಯವಸ್ಥೆಯ  ರಹಸ್ಯಬಯಲು ಮಾಡುವ ವರೆಗೂ  ಬ್ರಷ್ಟಾಚಾರ!!

ಕವಿವಾಣಿಯೊಂದು ಹೀಗಿದೆ.
"ಮುಂದೆ ಗುರಿ,ಹಿಂದೆ ಗುರು, ಮಧ್ಯೆ ಸಾಗಿದೆ ವೀರರಾ ದಂಡು" ಆದರೆ ಈಗ ಮುಂದೆ ಗುರಿಯೂ ಇಲ್ಲ, ಹಿಂದೆ
ಗುರಿಯೂ ಇಲ್ಲ, ಅಂತೂ ಸಾಗಿದೆ ಕುರಿಗಳಾ ಹಿಂಡು.

ಇಂತಹ ಕೆಟ್ಟ ಸ್ಥಿತಿಗೆ
ಪರಿಹಾರ?

ಮೆಕಾಲೆ ಮಾದರಿಯ ಶಿಕ್ಷಣದಿಂದ  ಮಹರ್ಷಿ ಮಾದರಿಯ ಶಿಕ್ಷಣದ ಕಡೆಗೆ. ಮಹರ್ಷಿ ಮಾದರಿಯ ಶಿಕ್ಷಣ
ಅಂದರೇನು? ಅದು ಹೇಗಿರ ಬೇಕು?

ಮೆಕಾಲೆಯ ಮಾತುಗಳನ್ನೇ  ನೋಡಿ " ಭಾರತೀಯರ ನೈತಿಕ ಶಕ್ತಿಗೆ ಬೆನ್ನೆಲುಬಾಗಿರುವುದು
ಭಾರತದ ಅಂತ: ಶಕ್ತಿ, ಅಲ್ಲಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಪರಂಪರೆ."

ಯಾವ ನೈತಿಕ ಶಕ್ತಿಯನ್ನು
ನಾಶಪಡಿಸಲು ಮೆಕಾಲೆ ಶಿಕ್ಷಣ ರೂಪಿತ ವಾಯ್ತೋ ಅದೇ ನೈತಿಕ ಶಕ್ತಿಯನ್ನು ಪುನ: ಜಾಗೃತ ಗೊಳಿಸುವುದೇ
ಮಹರ್ಷಿ ಮಾದರಿಯ ಶಿಕ್ಷಣ. ಈ ದೇಶದ ಮಣ್ಣಿನ ಬಗ್ಗೆ ಗೌರವ ಮೂಡಿಸುವ, ಇಲ್ಲಿನ   ನೈಜ  ಸಂಸ್ಕೃತಿ
ಪರಂಪರೆಗಳನ್ನು ಪರಿಚಯಿಸುವ, ಅದರ ಬಗ್ಗೆ ಶ್ರದ್ಧೆ ಮೂಡಿಸುವ, ದೇಶಭಕ್ತಿಯನ್ನು ಮೂಡಿಸುವ ಶಿಕ್ಷಣ.

ಅದು ಹೇಗಿರ ಬೇಕು?

  • ಯುವಜನಾಂಗಕ್ಕೆ
    ಪ್ರಾಚೀನ ಭಾರತದ ನಮ್ಮ ಋಷಿಮುನಿಗಳ  ಸಾಧನೆಯ
    ನೈಜ ಪರಿಚಯ.
  • ಪಠ್ಯಕ್ರಮದಲ್ಲಿ  ಪ್ರಾಚೀನ ಭಾರತದ ಜ್ಞಾನ - ವಿಜ್ಞಾನ ದ ಪರಿಚಯ.
  • ನಮ್ಮದು
    ಸೋಲಿನ ಇತಿಹಾಸವಲ್ಲ,ಬದಲಿಗೆ ಸಂಘರ್ಷದ ಇತಿಹಾಸ
  • ತ್ಯಾಗ
    ಬಲಿದಾನಗಳಿಂದ ತಮ್ಮ ಜೀವನ ಸಾರ್ಥಕ ಪಡಿಸಿಕೊಂಡ ಮಹಾಪುರುಷರ  ಜೀವನದ ಪರಿಚಯ
  • ರಾಷ್ಟ್ರೀಯ
    ಸ್ವಾಭಿಮಾನ-ಸ್ವಾವಲಂಭನೆಗೆ ಪೂರಕ ಪಠ್ಯಕ್ರಮ.
  • ಹಕ್ಕಿಗಾಗಿ
    ಹೋರಾಟವಲ್ಲಾ ಬದಲಿಗೆ ನಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸುವ ಮನೋಭಾವ ಮೂಡಿಸುವ ಶಿಕ್ಷಣ,
  • ಧರ್ಮ
    ಅಧೀಷ್ಠಿತ ಜೀವನ ಕ್ರಮ.

ಈ ನಿಟ್ಟಿನಲ್ಲಿ ೧೯೭೭ ರಿಂದ " ವಿದ್ಯಾಭಾರತಿಯು " ಕಾರ್ಯೋನ್ಮುಖವಾಗಿದೆ.
ರಾಷ್ಟ್ರಾದ್ಯಂತ ಸುಮಾರು  ೨೦ ಸಹಸ್ರ ಶಿಕ್ಷಣ ಸಂಸ್ಥೆಗಳು,
ಒಂದು ಲಕ್ಷಕ್ಕೂ ಅಧಿಕ ಶಿಕ್ಷಕರ ಮಾರ್ಗದರ್ಶನದಲ್ಲಿ ೨೫ ಲಕ್ಷ ವಿದ್ಯಾರ್ಥಿಗಳಿಗೆ ಭಾರತೀಯ ಶಿಕ್ಷಣ
ಸಂಸ್ಕಾರ ಈಗಾಗಲೇ ನಡೆಯುತ್ತಿದೆ. ಗುಡ್ದಗಾಡುಗಳಲ್ಲಿ ಶಿಕ್ಷಣದಿಂದ ವಂಚಿತರಾದ ವನವಾಸಿಗಳಿಗೆ ಸಾವಿರಾರು
ಸಮರ್ಪಿತ ಕಾರ್ಯಕರ್ತರಿಂದ ಶಿಕ್ಷಣ.

ರಾಷ್ಟ್ರನಿಷ್ಠ , ಸಂಸ್ಕಾರ ಭರಿತ
ಶಿಕ್ಷಣ ನೀಡುವುದರ ಮೂಲಕ ರಾಷ್ಟ್ರದಲ್ಲಿ ಸಮರಸ, ಸುಸಂಪನ್ನ, ಸುಸಂಸ್ಕೃತ, ಹಾಗೂ ಸಮರ್ಪಿತ ಜೀವನವನ್ನು
ನಡೆಸಬಲ್ಲ ಯುವಜನಾಂಗವನ್ನು ನಿರ್ಮಿಸುವ ರಾಷ್ಟ್ರೀಯ ಶಿಕ್ಷಣ ಪದ್ದತಿಯನ್ನು ರೂಪಿಸಿ ಮಹರ್ಷಿಮಾದರಿಯ
ಶಿಕ್ಷಣ ವಿಕಾಸವೇ ವಿದ್ಯಾಭಾರತಿಯ ಗುರಿ.

ಅನಂತ ನಾರಾಯಣ

ನಿರ್ವಾಹಕರು

ನಿವೇದಿತಾ ವಿದ್ಯಾಲಯ,
ಹಾಸನ

ವಿಭಾಗ ಕರ್ಯದರ್ಶಿ,
ವಿದ್ಯಾಭಾರತೀ. ಮೈಸೂರು ವಿಭಾಗ.

Rating
No votes yet

Comments