ನಾ ನೋಡಿದ ಮೊದಲ ಹುಡುಗಿ

ನಾ ನೋಡಿದ ಮೊದಲ ಹುಡುಗಿ

ಅವತ್ತು ಮನೆಗೆ ನೆಂಟರು ಬಂದಿದ್ರು ನಮ್ಮ ಚಿಕ್ಕಪ್ಪ, ಚಿಕ್ಕಮ್ಮ , ಅಜ್ಜಿ , ಅವರೆನಲ್ಲ ಕರೆಧುಕೊಂಡು ಸಂಬಂದಿಕರ ಮನೆಗೆ ಟ್ರಿಪ್ ಹೊಡೆಸೋದು ನನ್ನ ಜವಾಬ್ಧಾರಿ. ಸರಿ, ಅಡ್ರೆಸ್ ತಿಳಿದುಕೊಂಡು ಮೊದಲು ನಮ್ಮ ಒಬ್ಬ ದೂರದ ಸಂಬಂಧಿಕರ ಮನೆಗೆ ಹೊರೆಟೆವು..ತಮಾಷೆ ಅಂದ್ರೆ ಅಸ್ತು ದೂರದ ಸಂಬಂಧಿಕರು ನಮ್ಮ ಮನೆಗೆ ಅಸ್ತು ಹತ್ತಿರ ಇದ್ದಾರೆ ಅಂಥ ಅವತ್ತೇ ಗೊತ್ತಾಗಿದ್ದು ..ನಾವು ಇರೋದು ಹಂಪಿನಗರ ಅವರು ಚಂದ್ರ ಲೇಔಟ್ ...ಸರಿ ಅವರ ಮನೆಗೆ ಹೊದ್ವೀ ಅವರು ನಮ್ಮ ಮನೆಗೆ ಬಂದ್ರು ಎಲ್ಲ ಆಯಿತು . ನಾನು ಮದ್ವೆ ವಯಸ್ಸಿಗೆ ಬಂದಿರೋ ಹುಡುಗ ಅಂತಾನು ಅವ್ರಿಗೆ ಗೊತ್ತಾಯ್ತು ..ಇನ್ನು ಕೇಳ್ಬೇಕಾ ನಮ್ಮ ಕಡೆ ಆ ಹುಡುಗಿ ಇದೆ ಹೀ ಹುಡುಗಿ ಇದೆ ಅಂಥ ನನ್ನ ತಂದೆ ಹತ್ರ ಹೇಳೋಕೆ ಶುರುಮಾಡಿದರು ..ನಮ್ಮ ತಂದೆ ಸರಿ ಆಯಿತು ನೋಡೋಣ ಅಂದ್ರು. ಆದ್ರೆ ಆ ನನ್ನ ಸಂಬಂಧಿಕರು ಮಾರನೆ ದಿನಾನೆ ಅವರ ಅಣ್ಣನ ಮಗಳನ್ನ ಚಿತ್ರದುರ್ಗದಿಂದ ಕರೆಸೆಬಿತ್ರು . ಅವರು ನನ್ನ ಹತ್ತಿರ ಒಂದು ಮಾತು ಹೇಳದೆ ಕೇಳದೆ ಹೇಗೆ ಮಾಡಿದ್ದು ನನ್ನ ಪೇಚಿಗೆ ಸಿಲುಕಿಸಿತ್ತು...ಆಮೇಲೆ ಗೊತ್ತಾದ ವಿಷಯ ಏನಂದ್ರೆ ಹುಡುಗಿ PUC ಮುಗಿಸಿದೆ ಅಂಥ ...ನನಗೊಂತು ಏನು ಹೇಳಬೇಕು ಅಂಥ ತಿಳಿಲಿಲ್ಲ ಆದರು ಅವರ ಬಳಿ ಹೇಳಿದೆ "ಅಂಕಲ್, ನನಗೆ ಅಸ್ಟೊಂದು age difference ಇರೋ ಹುಡುಗಿ ಬೇಡ ಅಂಥ. ಅವರು ಇಲಪ್ಪ ಆಗಲೇ ಕರೆಸೆಬಿತ್ತಿದಿನಿ ನೀನು ಸುಮ್ಮನೆ ಬಂದು casual ಆಗಿ ಬಂದು ಹೋಗು...ನಾವು ಹುಡುಗಿ ನೋಡೋ ಸಂಪ್ರದಾಯ ಏನು ಮಾಡೋಧು ಬೇಡ ಅಂತಾನು ಅಂದ್ರು. ಸರಿ , ಆಯಿತು ಅಂಥ ನಾನು ಒಪ್ಪಿಕೊಂಡೆ. Next Day, ನಾನು , ಅಪ್ಪ ಅಮ್ಮ ಎಲ್ಲ ಅಂಕಲ್ ಜೊತೆ ಹುಡುಗಿ ಹಾಗು ಅವಳ ಅಮ್ಮ ಉಳಿದುಕೊಂಡಿರೋ ಜಯನಗರದ ಇನ್ನೊಬ್ಬ ನೆಂಟರ ಮನೆಗೆ ಹೊದ್ವೀ. ಹುಡುಗಿಯ ಕೈಯ್ಯಲ್ಲಿ ಕಾಫೀ , ಉಪ್ಪಿಟ್ಟು, ಸ್ವೀಟು ತರಿಸಿ ಎಲ್ಲರಿಗೂ ಕೊಡಿಸಿದರು. ಹುಡುಗಿನ ನಮ್ಮ ತಂದೆ ತಾಯಿ ಮುಂದೆ ಕೂರಿಸಿ ಪ್ರಶ್ನೆ ಇದ್ರೆ ಏನಾದ್ರು ಕೇಳಿ ಅಂಥ ಅಂದ್ರು. ನಮ್ಮ ತಂದೆ ಮುಕಾನ ನೋಡಬೇಕಿತ್ತು ಅಸ್ಟೊಂದು ಮಾತಾಡೋ ನಮ್ಮ ತಂದೆಗೆ ಏನು ಹೇಳಬೇಕು ಅಂಥ ತಿಳಿಲಿಲ್ಲ ಯಾಕೆಂದ್ರೆ ನಾನು ಆಗ್ಲೇ strict instructions ಕೊಟ್ಟಿದೆ ನಮ್ಮ ತಂದೆಗೆ ಜಾಸ್ತಿ ಮಾಥದ್ಬೇಡಿ ಅಂಥ . ಹುಡುಗಿ ನೋಡೋಕೆ ಚೆಂದ ಇದ್ದಳು BCA 2nd Sem ಅಂತೆ, ಅವಳನ್ನೇ ತುಂಬ ಹೊತ್ತು ಎಲ್ಲರ ದ್ರಿಷ್ಟಿ ತಪ್ಪಿಸಿ ನೋಡಿದೆ, ಅದೇ ಒಂದು ದೊಡ್ಡ ಸಾಧನೆ ಆಗೋಯ್ತು ಅವತ್ತಿಗೆ ನನಗೆ. ಹುಡುಗಿ ನೋಡಲು ಹೋದ ದಿನ ನನಗೆ ಹುಡುಗಿ age, name, education, height, ಏನು ಗೊತ್ಹಿರ್ಲಿಲ್ಲ . ಆದ್ರೆ ಎಲ್ಲೊ ಒಂದು ಕಡೆ ನನಗೆ ಹುಡುಗಿ ಹಿಡಿಸಿದ್ಲು ..ಆದ್ರೆ ಪ್ರಾಬ್ಲಮ್ ಏನಪ್ಪಾ ಅಂದ್ರೆ ನನ್ನ ಅವಳ ಮದ್ಯೆ ಇರೋ "age difference" ೮-೯ ವರ್ಷ ಇರಬಹುದು . ನೋಡಿದ ಮೊದಲ ಹುಡುಗಿನೇ ಇಷ್ಟ ಆದರು ಕಷ್ಟ. ಹುಡುಗಿನ ಮದ್ವೆ ಆಗಿ ಮುಂದೆ ಓಧಿಸೋ ತಾಳ್ಮೆ, ದುಡ್ಡು ನನ್ನಲ್ಲಿ ಇಲ್ಲ. ಆದ್ರೆ ಹುಡುಗಿ ಕಡೆ ಬಡವರು , ಆಕೆಗೆ ತಂದೆ ಇಲ್ಲ. ಇದನೆಲ್ಲ ನೋಡಿದ್ರೆ ಹುಡುಗಿನ ನೋಡೋಕೆ ಹೋಗಿ ತಪ್ಪು ಮಾಡಿದೆ ಅನ್ನೋ guilt ಕಾಡತ್ತೆ . ಆಕೆಯನ್ನ ನೋಡುತಿದ್ದ ಕ್ಷಣಗಳು ನನಗನ್ನಿಸಿದ್ದು ಹುಡುಗಿ ನಮ್ಮ ಮನೆಗೆ ಹೊಂದಿಕೊಳ್ಳಬಹುದು ಅಂಥ. ಯಾಕೆಂದ್ರೆ ಅವಳು ಬಡತನದಿಂದ ಬಂದವಳು, traditional ಕೂಡ, ದೊಡ್ಡವರಿಗೆ respect ಕೊಡುವವಳು. ಆದ್ರೆ ಇದೆಲ್ಲದಕ್ಕೆ ಮುಂಚೆ ನನ್ನ requirements ಇದ್ದದು ಹುಡುಗಿ maximum 4-5 yrs age difference,goodlooking, intelligent, B.E., working, traditional ಇರಬೇಕು ಅಂಥ. ಒಂದೇ ಒಂದು ಹುಡುಗಿನ ನೋಡಿದೆ ಮೇಲೇನೆ ನನ್ನ requirements ಎಲ್ಲ ಗಾಳಿಗೆ ತೂರಿದೆನಲ್ಲ ಇನ್ನು ಮುಂದೆ ಕೂಡ ಹುಡುಗೀರ್ನ ನೋಡ್ಬೇಕಂದ್ರೆ ಏನು ಗತಿ.
ಆ ಹುಡುಗಿ ಫೋನ್ ನಂಬರ್ ನನ್ನ ಬಳಿ ಇಲ್ಲ ಆದ್ರೆ ನನ್ನ ಮನಸಿನಲ್ಲಿ ಆ ಹುಡುಗಿಯ ಬಳಿ ಕೇಳಬೇಕಾದ ಎಷ್ಟೋ ಪ್ರಶ್ನೆಗಳಿವೆ . ಆ ಹುಡುಗಿ ಇಷ್ಟು ಬೇಗ ಮದ್ವೆಗೆ ಏಕೆ ಒಪ್ಪಿಕೊಂಡಳು, ಅವಳಿಗೆ ಮುಂದೆ ಓದಲು ಇಷ್ಟಇಲ್ಲವೇ, ಅಷ್ಟು ಚಿಕ್ಕ ವಯಸಿಗೆ ಮದುವೇ ಮಾಡಲು ಅವಳ ತಾಯಿಗೆ ಮನಸ್ಸು ಹೇಗೆ ಬಂತು, ಹುಡುಗಿ ಮನಸಿನಲ್ಲಿ ಏನು ನಡೆಯುತಿದೆ, ಅವಳ ಬಯಕೆಗಲೇನು ಅಂತೆಲ್ಲ
ಆದರೆ ಇವನೆಲ್ಲಾ ಅಂದು ನಾನು ಎಲ್ಲರ ಮುಂದೆ ಕೇಳಿದ್ದರೆ ನನಗೆ ಹುಡುಗಿ ಮೇಲೆ interest ಇದೆ ಅಂತ ಆಗ್ತಿತ್ತು ಅದಕ್ಕೆ ಕೇಳಿರಲಿಲ್ಲ

Rating
No votes yet

Comments