ಆಸ್ಕರ್‍ ಗೆಲುವಿನ ನೆರಳಲ್ಲಿ…

ಆಸ್ಕರ್‍ ಗೆಲುವಿನ ನೆರಳಲ್ಲಿ…

ರಸುಲ್ ಪೊಕುಟ್ಟಿಯವರಿಗೆ (ಇಯನ್ ಟಾಪ್ ಹಾಗು ರಿಚರ್ಡ್ ಪ್ರೈಕ್ ಜತೆಗೆ) ಸೌಂಡ್ ಮಿಕ್ಸಿಂಗಿಗೆ ಆಸ್ಕರ್‍ ಬಂದಿದ್ದು ಖುಷಿಯಾಯಿತು
ಎ.ಆರ್‍.ರೆಹಮಾನ್‌ಗೆ ಸಂಗೀತಕ್ಕೆ ಹಾಗು ಹಾಡಿಗೆ ಆಸ್ಕರ್‍ ಬಂದಿದ್ದೂ ಖುಷಿಯಾಯಿತು.

ಆದರೆ, ಇದು ಐತಿಹಾಸಿಕ ಘಟನೆ, ಚರಿತ್ರಾರ್ಹ ಸುದ್ದಿ. ಭಾರತಕ್ಕೆ ಸಂದ ಗಣನೀಯ ಆಸ್ಕರ್‍ ಎಂಬುದೆಲ್ಲಾ ಕೇಳಿ ಇದನ್ನು ಬರೆಯೋಣ ಅನಿಸಿತು.

ಮೊದಲ ಆಸ್ಕರ್‍ ಪಡೆದ ಭಾರತೀಯರು - ಭಾನು ಅತೈಯ್ಯ (ಜಾನ್ ಮೊಲ್ಲೊ ಜತೆ) “ಗಾಂಧಿ” ಚಿತ್ರದ ಉಡುಗೆತೊಡುಗೆಗಾಗಿ - ೧೯೮೨ರಲ್ಲಿ.

ಆದರೆ ಅದಕ್ಕಿಂತಲೂ ಹೆಚ್ಚಿನದು-

೧೭ ವರ್ಷದ ಹಿಂದೆ - ೧೯೯೨ರಲ್ಲಿ ತಮ್ಮ ಸಾವಿಗೆ ಒಂದೆರಡು ದಿನದ ಮುಂಚೆ ಬದುಕಿಡೀ ಸಿನೆಮಾಕ್ಕೆ ಕೊಟ್ಟ ಕೊಡುಗೆಗಾಗಿ ಸತ್ಯಜಿತ್ ರಾಯ್‌ರವರಿಗೆ
Lifetime achievement Oscar ಕೊಟ್ಟು ಪುರಸ್ಕರಿಸಿದ್ದರು. ಜಾಗತಿಕ ಸಿನೆಮಾದಲ್ಲಿ
ಅವರ ಮಟ್ಟ ಹಾಗು ಕೊಡುಗೆಯನ್ನು ಸ್ಮರಿಸಿಕೊಂಡಿದ್ದರು. ಆ ಸುದ್ದಿ ಕೇಳಿ ಉಬ್ಬಿಹೋದ ದಿನ
- ಒಂದೆರಡು ದಿನಕ್ಕೇ ಸತ್ಯಜಿತ್ ರಾಯ್ ತೀರಿಹೋದ ದಿನ ಎರಡೂ ನೆsatyajit-ray-oscar-180ನಪಾಯಿತು.

ಆಸ್ಕರ್‍ನ ಇತಿಹಾಸದಲ್ಲೇ ಮೊದಲ ಬಾರಿಗೆ ಅಮೇರಿಕ ನೆಲದ ಹೊರಗೆ ಹೋಗಿ, ಕಲ್ಕತ್ತೆಯ
ಆಸ್ಪತ್ರೆಯಲ್ಲೇ ಅವರಿಗೆ ಆಸ್ಕರ್‍ ಕೊಟ್ಟು ಗೌರವಿಸಿದ್ದನ್ನು ನಾವು ಹೇಗೆ ಮರೆತೇವು?

ಈವತ್ತಿನ ಆಸ್ಕರ್‍ ಸುದ್ದಿಯ ನಡುವೆ ಸತ್ಯಜಿತ್ ರಾಯ್‌ರನ್ನೂ ನೆನಸಿಕೊಂಡರೆ
ಚೆಂದವಲ್ಲವೆ ಅನಿಸಿತು. ಏಕೆಂದರೆ, ಇಂಡಿಯದ ಸಿನೆಮಾದತ್ತ ಜಗತ್ತು
ಎಚ್ಚೆತ್ತುಕೊಳ್ಳುವಂತೆ ಮಾಡಿದ ಮೊದಲಿಗ ಆತ ಅನ್ನುವುದನ್ನು ಈಗಿನ ಝಗಮಗದಲ್ಲಿ ಮರೆತು
ನಾವು ಹುಂಬರಾಗಬಾರದು.

Rating
No votes yet

Comments