ಧರ್ಮ-ಮತ ...ಸುಮ್ನೆ ಹೀಂಗೆ ಎರಡು ಮಾತು!

ಧರ್ಮ-ಮತ ...ಸುಮ್ನೆ ಹೀಂಗೆ ಎರಡು ಮಾತು!

ಧರ್ಮ ಪದ "ದೃ" ಧಾತುವಿನಿಂದ ಬಂದಿದೆಯಂತೆ!    ಈ ಧಾತುವಿಗೆ to sustain; carry, hold ಎಂಬ ಅರ್ಥ ಇದೆ ಅಂತೆ.

"ಧಾರಣಾತ್ ಧರ್ಮಮಿತ್ಯಾಹು, ಧರ್ಮೋ ಧಾರಯತೇ ಪ್ರಜಾ:"!
ಎತ್ತಿ ಹಿಡಿಯುವುದರಿಂದ ಅದು ಧರ್ಮ!.  ಅದು ಪೀಳಿಗೆಯನ್ನು ಕಾಪಡುತ್ತೆ

"ಧರತಿ ಲೋಕಂ ಇತಿ ಧರ್ಮ:"
ಲೋಕವನ್ನು ಯಾವುದು ಕಾಪಾಡುತ್ತೋ ಅದು ಧರ್ಮ!

ಹಾಗಾದ್ರೆ ಯಾವುದು ಧರ್ಮ??  ಅಂದ್ರೆ ಅದು ಅವರ ಸಂಸ್ಕೃತಿ, ವೈಚಾರಿಕತೆ, ನಂಬಿಕೆ ಮೇಲೆ ಬಿಟ್ಟಿದ್ದು.
ಕೆಲವರ ಪರಕಾರ "ಸತ್ಯಾನ್ನಾಸ್ತಿ ಪರೋಧರ್ಮಃ" .  ಸತ್ಯಕ್ಕಿಂತ ಬೇರೆ ಧರ್ಮವಿಲ್ಲ ಅಂತ. ಅದು ಅವರ ನಂಬಿಕೆ. ಎಲ್ರೂ ಒಪ್ಲೇ ಬೇಕಿಲ್ಲ .
ಬಸವಣ್ಣ ಹೇಳಿದ್ದು "ದಯವೇ ಧರ್ಮದ ಮೂಲವಯ್ಯ!"

( ಸಕ್ಕದ ಬಲ್ಲವರು ಮೆಲಿನವುಗಳಲ್ಲಿನ ತಪ್ಪುಗಳನ್ನು ಸರಿಪಡಿಸಬಹುದು! )

ಮೇಲಿನ ನಂಬಿಕೆಗಳನ್ನು ಉಳಿಸಿಕೊಳ್ಳಲು ಕೆಲವು ಆಚರಣೆಗಳು ಬೇಕಾಗುತ್ತೆ . ಈ ನೀತಿ ನಿಯಮ ಆಚರಣೆಗಳೇ
ಮುಖ್ಯವಾಗಿರುವ ಭಾಗಕ್ಕೆ ನಾವು ಮತ ಅನ್ನಬಹುದು.  ಈ ಧರ್ಮ ಅತ್ವ ನಂಬಿಕೆಗಳಿಗೆ ಕಟ್ಟು ನಿಟ್ಟಿನ ಆಚಾರವನ್ನು ವಿಧಿಸಿದರೆ ಅದು ಮತಗಳಾಗುತ್ತೆ.
ಈ ನಂಬಿಕೆಗಳ / ಧರ್ಮದ ಬಗ್ಗೆ... ನಮ್ಮ ನಮ್ಮ "ಮತಿ" ಗೆ ಅನುಸಾರವಾಗಿ ಮತವಾಗುತ್ತೆ.

ritualistic ಆಗಿರೋದು religion.
spiritualistic  ಆಗಿರೋದು ಧರ್ಮ ಅಂತಾರೆ.
ಕೆಲವರು ಧರ್ಮಕ್ಕೆ ಇಂಗ್ಲೀಷಿನಲ್ಲಿ   righteousness  ಅಂತ ಕರೀಬಹುದು ಅಂತಾರೆ .

ಮೇಲಿನ ರೀತಿಯ ಪದದ ಹುಟ್ಟು ಮತ್ತು ಅರ್ಥೈಸುವಿಕೆ ಅದೇನೇ ಇರಲಿ ......

ಇಂದಿನ ಮತ್ತು ಹಿಂದಿನ  ನಿತ್ಯ ಬಳಕೆಯಲ್ಲಿ ಧರ್ಮ ಅಂದರೆ ರಿಲಿಜನ್ ಅನ್ನೋ ರೀತಿಯಲ್ಲೇ ಬಳಕೆಯಾಗಿದೆ.
ನನಗೆ ಮತಕ್ಕೂ ಧರ್ಮಕ್ಕೂ ರಿಲಿಜನ್ ಗೂ ಈಗಿನ/ಹಿಂದಿನ ಬಳಕೆಯಲ್ಲಿ ಏನೂ ವ್ಯತ್ಯಾಸ ಕಾಣ್ತಾ ಇಲ್ಲ.

Rating
No votes yet

Comments