ಚಂದ್ರಮಂಗಳಬುಧಗುರುಯುತಿಯ ಮುನ್ನ ದಿನಗಳಲ್ಲಿ ಮಂಗಳ ಬುಧ ಗುರುಗ್ರಹಗಳ ಚಲನೆ ಕುಱಿತು

ಚಂದ್ರಮಂಗಳಬುಧಗುರುಯುತಿಯ ಮುನ್ನ ದಿನಗಳಲ್ಲಿ ಮಂಗಳ ಬುಧ ಗುರುಗ್ರಹಗಳ ಚಲನೆ ಕುಱಿತು

Comments

ಬರಹ

೨೨/೨೩ ಫೆಬ್ರುವರಿ ೨೦೦೯ಱಂದು ಕಾಣುವ ಚಂದ್ರಮಂಗಳಬುಧಗುರುಯುತಿಯನ್ನು ನೋಡುವ ಮುನ್ನ ದಿನಗಳಲ್ಲಿ ೧೬ ಫೆಬ್ರುವರಿಯಿಂದ ೨೨ ಫೆಬ್ರುವರಿವರೆಗೆ ಬೆಳಿಗ್ಗೆ ೫.೫೫ಱಿಂದ ೬.೨೦ಱೊಳಗೆ ಪೂರ್ವ ದಿಕ್ಕಿನಲ್ಲಿ ಬುಧಗ್ರಹ ಗುರುವನ್ನು ಕ್ರಮೇಣ ದಿನದಿಂದ ದಿನಕ್ಕೆ ಸಮೀಪಿಸುವುದನ್ನು ನೋಡಿರಿ. ೧೯ ಫೆಬ್ರುವರಿಯಂದು ಗುರುವಿನ ಸಮೀಪವಿರುವ ಕುಜ (ಮಂಗಳ)ಗ್ರಹವನ್ನು ವೀಕ್ಷಿಸಿ. ಮಂಗಳ ಕೆಂಪಗಿರುವುದಱಿಂದ ಬೆಳಗಿನ ಅರುಣರಾಗದಲ್ಲಿ ಮುೞುಗಿಹೋಗುವುದಱಿಂದ ಬೆಳಿಗ್ಗೆ ೫.೫೦ಱಿಂದ ೬.೧೫ಱೊಳಗಾಗಿ ಪೂರ್ವದಿಗಂತ ಅರುಣರಾಗಪೂರ್ಣವಾಗುವುದಱೊಳಗಾಗಿ ನೋಡಿ. ನಾನೀಗಾಗಲೇ ಬುಧ ಮತ್ತು ಗುರುಗ್ರಹಗಳನ್ನು ಗುಱುತಿಸಿ ಬುಧನ ಚಲನೆಯನ್ನು ಪ್ರತಿದಿನ ಗಮನಿಸುತ್ತಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet