ಮಗುವಿನ ಪ್ರಶ್ನೆಗೆ ಉತ್ತರಿಸಲು ಸಹಾಯ ಮಾಡ್ತೀರಾ

ಮಗುವಿನ ಪ್ರಶ್ನೆಗೆ ಉತ್ತರಿಸಲು ಸಹಾಯ ಮಾಡ್ತೀರಾ

ನನ್ನ ಮಗಳು ಬೆಳೆಯುತ್ತಿದ್ದಾಳೆ . ಹಾಗೆ ಅವಳ ಕುತೂಹಲ, ಎಲ್ಲವನ್ನೂ ತಿಳಿಯಬೇಕೆಂಬ ಹಂಬಲವೂ.
ಕೆಲವೊಮ್ಮೆ ಅವಳು ಕೇಳಿವ ಪ್ರಶ್ನೆಗಳಿಗೆ ನಾನು ಉತ್ತರಿಸುವ ರೀತಿ ಅವಳಿಗೆ ಅರ್ಥವೇ ಆಗೋದಿಲ್ಲ
ಒಂದಷ್ಟು ಪ್ರಶ್ನ್ಗೆಗಳು

ನಲ್ಲಿಯಿಂದ ನೀರು ಯಾಕೆ ಕೆಳಗೆ ಬೀಳುತ್ತದೆ ಯಾಕೆ ಮೇಲೆ ಹೋಗೋದಿಲ್ಲ.
ನನ್ನ ಉತ್ತರ ಗಾಳಿಯ ಮೇಲಿಂದ ನೂಕುತ್ತೆ , (ಅವಳಿಗೆ ಈ ಗ್ರಾವಿಟಿ ಅದೂ ಇದೂ ಅಂದ್ರೆ ಅರ್ಥ ಆಗಲ್ಲ)
ಅವಳು ಗಾಳಿ ಯಾಕೆ ಮೇಲಿಂದ ನೂಕುತ್ತೆ?
ನಾನು ಗಾಳಿ ಮೇಲಿಂದ ಬರುತ್ತೆ?
ಅವಳು "ಗಾಳಿ ಯಾಕೆ ಮೇಲಿಂದ ಬರುತ್ತೆ, ಯಾಕೆ ಕೆಳಗೆ ಇರಲ್ಲ"
ನಾನು " ಚಿನ್ನಿ ಬಾ ನಿಂಗೆ ಚಾಕ್ಲೇಟ್ ಕೊಡಿಸ್ತೀನಿ"

ಮತ್ತೊಂದು ಪ್ರಶ್ನೆ
"ಮಾಮೀನ(ದೇವರನ್ನ್ ) ಯಾಕೆ ಕೂಡಹಾಕ್ತಾರೆ"
"ಇಲ್ಲ ಚಿನ್ನು ಕೂಡಹಾಕಲ್ಲ , ಬಾಗ್ಲು ಹಾಕೋದಷ್ಶ್ಟೆ"
"ಯಾಕೆ ಪೂಜೆ ಮಾಡ್ತೀಯಾ"
"ಮಾಮಿ ಒಳ್ಲೇದು ಮಾಡು ಅಂತ"
"ಅದು ಸುಮ್ಮನೆ ಕೂತಿರುತ್ತೆ ಮಾತೇ ಆಡಲ್ಲ, ?"
"ಮಾಮಿ ಯಾವಾಗ್ಲ್ಲೊ ನಾವೇನು ಮಾಡ್ತೀವೋ ನೋಡುತ್ತೆ ಹೊರತು ಮಾತಾಡಲ್ಲ"
"ಮತ್ಯಾಕೆ ಮಾಮಿ ಬಯ್ಯುತ್ತೆ ಅಂತೀಯಾ"
ನಿರುತ್ತರ

ಮೊನ್ನೆ ನಾಯಿಮರಿ ಕರ್ಕೊಂಡು ಬಂದಳು
"ಅಮ್ಮ ಈ ಪಾಪು ಮಾತಾಡೋದೆ ಇಲ್ಲ"
"ಇಲ್ಲ ಅದು ಬೊವ್ ಬೊವ್ ಅಂತ ಮಾತಾಡುತ್ತೆ"
"ನಮ್ತ್ರರ ಯಾಕೆ ಮಾತಾಡಲ್ಲ"
"ಅದಕ್ಕೆ ಮಾಮಿ ಮಾತಾಡೋಕೆ ಹೇಳ್ಕೊಟ್ಟಿಲ್ಲ"
"ಮಾಮಿ ಕೆಟ್ಟದಮ"
ನಿರುತ್ತರ

ಕೃಷ್ಣ ನೋಡುತ್ತಿದ್ದಳು
"ಕಿಟ್ಟ ಮಾಮಿ ಯಾಕಮ್ಮ ಎಲ್ಲ್ರನ್ನೂ ಸಾಯ್ಸುತ್ತೆ?"
"ಎಲ್ರನ್ನೂ ಅಲ್ಲ ಪುಟ್ಟ ಕೆಟ್ಟವರನ್ನು ಮಾತ್ರ ಸಾಯ್ಸುತ್ತೆ"
"ಮತ್ತೆ ಅವಾಗಿಂದ ಬರೀ ಸಾಯ್ಸ್ಸಾನೆ ಇದೆ, ತುಂಬಾ ಜನ ಕೆಟ್ಟವರೇನಾ"
"ಹೌದು ಪುಟ್ಟ . ಅದಕ್ಕೆ ಒಳ್ಳೆಯವರನ್ನ ಉಳಿಸ್ಬೇಕಲ್ಲ ಅದಕ್ಕೆ"
"ಮಾಮೀ ಯಾಕೆ ಎಲ್ರನ್ನು ಒಳ್ಳೇಯವರನ್ನ ಮಾಡ್ಬಾರದು?"
ನಿರುತ್ತರ.

ಚಂದಾಮಾಮ ಯಾಕೆ ಮೇಲೆ ಇರುತ್ತೆ ಕೆಳಗೆ ಯಾಕೆ ಬರಲ್ಲ
ದೊಡ್ಡವರು ಯಾಕೆ ಬಾಲ್ಕನಿಯಿಂದ ಕೆಳಗೆ ನೋಡೋಕಾಗತ್ತೆ ನಮಗ್ಯಾಕೆ ಅಗಲ್ಲ
ಎಲಿಫ್ಯಾಂಟಗ್ಯಾಕೆ ಸೊಂಡಿಲಿರುತ್ತೆ ನಮಗ್ಯಾಕೆ ಇರಲ್ಲ
ನಾಯಿಗ್ಯಾಕೆ ಬಾಲ ಇದೆ ನಮಗ್ಯಾಕೆ ಇಲ್ಲ

ಹೀಗೆ ಅವಳ ಪ್ರಶ್ನೆಗಳಿಗೆ ಅವಳದೇ ಬಾಲ ಭಾಷೆಯಲ್ಲಿ ಉತ್ತರಿಸುವುದಕ್ಕೆ ಹರಸಾಹಸ ಮಾಡಬೇಕಾಗುತ್ತೆ

ಮೊನ್ನೆ ಅವಳ ಅಕ್ಕ(ನನ್ನ ಅಕ್ಕನ ಮಗಳು )ನೊಡನೆ ಹೇಳುತ್ತಿದ್ದಳು
ಅಮ್ಮ ದೊಡ್ಡವಳು ಅಂತಾಳೆ. ಅವಳಿಗೆ ಏನೂ ಗೊತ್ತಿಲ್ಲಕ್ಕ

ನಂಗೆ ಹೆಂಗಾಗಿರಬೇಡ ಹೇಳಿ

ಹಾಗಾಗಿ ಬಾಲ ಭಾಷೆಯಲ್ಲಿ ಉತ್ತರ ಹೇಳಿ ಸುಮ್ಮನಾಗಿಸೋದು ಹೇಗೆ ಅಂತ ಹೇಳ್ತೀರಾ

Rating
No votes yet

Comments