ಜುಬೇದ!...

ಜುಬೇದ!...

ಕೆಲವು ಸಿನಿಮಾಗಳನ್ನು ಬರೀ ನೋಡುತ್ತೇವೆ, ಕೆಲವನ್ನು ಅರ್ಥ ಮಾಡಿಕೊಳ್ಳುತ್ತೇವೆ, ಆದರೆ ತುಂಬ ಕಡಿಮೆ ಸಿನಿಮಾಗಳನ್ನು ನಾವು ಅನುಭವ ಮಾಡಿಕೊಳ್ಳುತ್ತೇವೆ. "ಜ಼ುಬೇದ" ಅಸ್ಟೊಂದು ಕಾಡಿದ ಸಿನಿಮಾಗಳು ತುಂಬ ಕಡಿಮೆ, ಬೆರಳೆಣಿಕೆಯಸ್ಟು. "ಬಂಗಾರದ ಪಂಜರ" ಮತ್ತೊಂದು ಅಂತ ಸಿನಿಮ.

ಪುಸ್ತಕಗಳಲ್ಲೂ, ಕೆಲವನ್ನು ಬರೀ ಓದುತ್ತೇವೆ, ಕೆಲವನ್ನು ತಿಳಿದುಕೊಳ್ಳುತ್ತೇವೆ, ತುಂಬ ಕಡಿಮೆಯವನ್ನು ಅನುಭವಕ್ಕೆ ತಂದುಕೊಳ್ಳುತ್ತೇವೆ. ಇದಕ್ಕಾಗೇ ಈ ಸಿನಿಮಾ ಇಸ್ಟ ಆಯ್ತು ಅಂತ ಹೇಳುವದು ಕಸ್ಟ, ತನ್ನ ಬಯಕೆಗಳನ್ನು ಈಡೇರಿಸಿಕೊಳ್ಳುವ ಹಟ ಮತ್ತು, ಆಳವಾದ ಪ್ರೀತಿ-ಪ್ರೇಮದ ಹುಚ್ಚಿನ ಹುಡುಗಿಯ ಕತೆ ಅದು. ಅತಿಯಾಗಿ ಕಾಡುವದು ಆಕೆ ಅನುಭವಿಸುವ ಒಂಟಿತನ. ಅದಕ್ಕೆ ತಕ್ಕಂತೆ ತೇಲಿ ಬರುವ "ಸಾಂಸ ಭಿ ಲೇತಿ ಹೈ, ಕಟಪುತಲಿಯಾಂ", ಲತಾರ ದನಿಯಲ್ಲಿನ ಹಾಡು, ಮನಸ್ಸನ್ನು ಆವರಿಸಿಕೊಳ್ಳುತ್ತದೆ.

ತಂದೆಯ
ಒತ್ತಾಸೆಗೆ ಒಲ್ಲದ ಮದುವೆ, ಸಂಸಾರ. ಮೆಲ್ಲಗೆ ಅದಕ್ಕೆ ಒಗ್ಗಿಕೊಳ್ಳುತ್ತಿರುವಾಗಲೇ
ತಂದೆಯಿಂದಾಗಿಯೇ ಗಂಡನೊಂದಿಗೆ ಸಂಬಂಧ ಕಡಿದು ಹೋಗುತ್ತದೆ. ಎಲ್ಲ ಇದ್ದೂ ಏನೂ ಇಲ್ಲದಂತಹ
ಭಾವನೆ. ಕಣ್ಣೀರೊಂದೇ ಸಂಗಾತಿಯಾಗಿದ್ದಾಗ, ಮತ್ತೆ ಚಿಗುರುವ ಕನಸು. ತನ್ನ ಮನಸ್ಸಿಗೆ
ಹಿಡಿಸಿದವನನ್ನು ಮದುವೆ ಆಗುವ ಅವಕಾಶವನ್ನು ಆಕೆ ಮತ್ತೆ ಪಡೆದುಕೊಂಡಾಗ, ತಂದೆಯನ್ನು
ಮೀರಿ ಹೋಗುವ ನಿರ್ಧಾರ, ಅದಕ್ಕೆ ತೆರುವ ಬೆಲೆ, ತನ್ನ ಮಗುವಿನಿಂದ ದೂರಾಗುವದು.

 

ಹೀಗೆ ತನ್ನವರನ್ನು ಬಿಟ್ಟು ಗೂಡಿನಿಂದ ದೂರ ಸಾಗುವ ಈ ಹಕ್ಕಿ, ಪರಿಸ್ತಿತಿಗಳು ತಾನಂದುಕೊಂಡಂತಿರದೇ ಮತ್ತೆ ಒಂಟಿತನದ ಬಲೆಯಲ್ಲಿ ಸಿಲುಕುತ್ತದೆ. ಸುಂದರವಾದದ್ದನ್ನು ಹರಸಾಹಸ ಮಾಡಿ, ತನ್ನದಾಗಿಸಿಕೊಂಡು ತಂದು ತನ್ನ ಅರಮನೆಗಳಲ್ಲಿ ಇಡುವ ಶೋಕಿಯ ’ವಿಕ್ಟರ್’ಗೆ ಜ಼ುಬೇದ ಅಂತ ಮತ್ತೊಂದು ಸುಂದರ ವಸ್ತು ಅಸ್ಟೇ. ನಮ್ಮ ಹಕ್ಕಿಯ ಮನದ ಗೂಡು ಮತ್ತೆ ಖಾಲಿ ಖಾಲಿ. ತಾನು ಬರೆದದ್ದು ಸಮುದ್ರದ ದಂಡೆಯ ಮರಳ ಮೇಲೆ, ಮೋಡದಲ್ಲಿ ಮೂಡಿದ ಚಿತ್ರದಂತೆ ಭಾಸವಾಗತೊಡಗುತ್ತದೆ.

ಸಿನಿಮಾ ಕೊನೆಯಾಗುವದು ದುರಂತದಲ್ಲಾದರೂ, ಭಹುಶ್ಯ ಆ ಪ್ರೇಮದೆಡೆಗಿನ ಅದಮ್ಯ ಬಯಕೆಗೆ ಎಂದೂ ಕೊನೆಯಿಲ್ಲವೇನೋ! "ಸಚ್ಚ್ ಕೊ ಆಖಿರ್ ಕಿತನೇ ದಿನ್ ಝುಟಲಾವುಂ ಮೈ? ಖ್ವಾಬ್ ಸೆ ಕಬ್ ತಕ್ ಏ ದಿಲ್ ಬೆಹೆಲಾವೂಂ ಮೈ?" (ಸತ್ಯವನ್ನು ಎಸ್ಟು ದಿನ, ಸುಳ್ಳು ಅಂದುಕೊಳ್ಳಲಿ ನಾನು? ಕನಸಿಂದಲೇ ಎಲ್ಲೀತನಕ, ಮನವ ಸಂತೈಸಲಿ ನಾನು?)!!

ಇದು ಭಹುಶ ಕರಿಶ್ಮಾಳ ’ದಿ ಬೆಸ್ಟ್’ ನಟನೆಯ ಸಿನಿಮಾ.

Rating
No votes yet

Comments