ಸತ್ಯ ಸಂಗತಿ

ಸತ್ಯ ಸಂಗತಿ

ಮೊನ್ನೆ ಶನಿವಾರ Seetha R Morab ರವರ ಮಕ್ಕಳಿಗೆ ಪಾಕೆಟ್ ಮನಿ ಕೊಡಬೇಕೆ? ಅನ್ನುವ ಬ್ಲಾಗ್ ಓದಿ ಸ್ವಲ್ಪ ತಲೆಕೆಡಿಸಿಕೊಂಡು ಊರಿಗೆ ಹೋಗಲು ಆಪೀಸಿನಿಂದ ತರಾತುರಿಯಲ್ಲಿ ಮೆಜೆಸ್ಟಿಕ್ ಕಡೆ ಹೊರಟೆ ಆದ್ರೆ ನಾನು ಹೊಗಬೇಕೆಂದುಕೊಂಡ ರೈಲು ಮಿಸ್ ಆಯ್ತು ಮುಂದಿನ ರೈಲಿಗೆ ಕಾದೆ, ಅಷ್ಟರೊಳಗೆ  ನನ್ನ ಸ್ನೇಹಿತರು ಸಹ ಜೊತೆಗೆ ಸಿಕ್ಕಿದರು . ಅವರ ಜೊತೆ ಮಾತಾನಾಡುತ್ತಾ ರೈಲಿನಲ್ಲಿ ಬಂಗಾರಪೇಟೆಗೆ ಪ್ರಯಾಣ ಬೆಳೆಸಿದೆ.

ಬಂಗಾರಪೇಟೆಯ ಬಸ್ ನಿಲ್ದಾಣದಲ್ಲಿ ಒಬ್ಬ ಹುಡುಗ  ಬಿಸ್ಕೆಟ್ ಪ್ಯಾಕೆಟ್ ಮಾರ್ತಾ ಇದ್ದ. ಇದ್ದಕ್ಕಿದ್ದ ಹಾಗೆ ನನ್ನ ಹತ್ರ ಬಂದು ನಮಸ್ಕಾರ ಸಾರ್ ಚೆನ್ನಾಗಿದ್ದೀರಾ ಅಂದ. ನಾನು ಸಹ ನಮಸ್ಕಾರನಪ್ಪ ಅಂದೆ. ನಾನು ಮನಸ್ಸಿನಲ್ಲಿ ಬಿಸ್ಕೆಟ್ ತೆಗೆದುಕೊಳ್ಳೊಳ್ಳಲಿ ಅಂತ ಈ ನಮಸ್ಕಾರ ಇರಬೇಕು ಎಂದು ಬಾವಿಸಿದ್ದೆ ಆದ್ರೆ ಅದು ತಪ್ಪಾಗಿತ್ತು. ಅವನನ್ನ ಯಾರು ನೀನು ಅಂತ ಕೇಳಿದೆ ಆಗ ಅವನು ಸಾರ್ ನಾನು ಸಾರ್ ಮೌಲಾ ಎಳೇಸಂದ್ರ ಹುಡುಗ ಬೂದಿಕೋಟೆಯಲ್ಲಿ 9 ನೇ ತರಗತಿ ಓದ್ತಾ ಇದ್ದೇನೆ ಕಳೆದ ವರ್ಷ ನನಗೆ ನೋಟ್ ಪುಸ್ತಕ, ಪೆನ್ನು, ಜಾಮೆಟ್ರಿ ಬಾಕ್ಸ್ ಎಲ್ಲಾ ಕೊಟ್ಟಿದ್ರಲ್ಲಾ ಸಾರ್ ಅಂದ. ಆಗ ನನಗೆ ನೆನಪಿಗೆ ಬಂತು . ಯಾಕೋ ಬಿಸ್ಕೆಟ್ ಮಾರ್ತಾ ಇದ್ದೀಯಾ ಸ್ಕೂಲ್ ಬಿಟ್ಟೆಯಾ ಅಂದೆ. ಅದಕ್ಕೆ ಅವನು ಇಲ್ಲಾ ಸಾರ್ ಹೋಗ್ತಾ ಇದ್ದೇನೆ. ಶನಿವಾರ ಮತ್ತೆ ಬಾನುವಾರ ಬಿಸ್ಕೆಟ್ ಮಾರ್ತೀನಿ ಉಳಿದ ದಿನ ಶಾಲೆಗೆ ಹೋಗ್ತೀನಿ ಅಂದ.

ಅಂದಹಾಗೆ ಇವನ ಬಗ್ಗೆ ಸ್ವಲ್ಪ ಹೇಳ್ತೀನಿ, ಇವನ ಹೆಸರು ಮೌಲ ತಂದೆ ಎಲ್ಲೋ ಬಳ್ಳಾರಿಯಲ್ಲಿ ಬೇರೆ ಮದುವೆ ಮಾಡಿಕೊಂಡು ಇದ್ದಾನಂತೆ. ಮನೆ ಕಡೆ ಬಂದು ಸುಮಾರು ವರ್ಷಗಳೇ ಆಗಿವೆ. ತಾಯಿ ಇದ್ದಾಳೆ ಆರೋಗ್ಯ ಸರಿ ಇಲ್ಲ. ಎರಡು ಕುರಿ ಇದೆ ಅದನ್ನ ಮೇಯಿಸಿಕೊಂದು ಬರ್ತಾಳೆ ಮಕ್ಕಳಿಗೆ ಅಡಿಗೆ ಮಾಡಿ ಹಾಕ್ತಾಳೆ ಅವರ ಹೆಸರು ತಾಜ್. ಜೊತೆಗೆ ತಮ್ಮ ಒಬ್ಬ ಅವನು 7 ನೇ ತರಗತಿ ಓದ್ತಾ ಇದ್ದಾನೆ. ಇವನು ಬಿಸ್ಕೆಟ್ ಮಾರಿ ಸಂಪಾದನೆ ಮಾಡಿದ ಹಣದಿಂದ  ಮನೆ ಸಂಸಾರ ಮತ್ತು ವಿದ್ಯಾಭ್ಯಾಸ ಮಾಡಬೇಕು. ತುಂಬಾ ಬಡಕುಟುಂಬದಲ್ಲಿ ಹುಟ್ಟಿದ  ಇಂತಹ ಮಕ್ಕಳಿಗೆ ಪಾಕೆಟ್ ಮನಿ ಕೊಡಬೇಕೆ? ಕೊಟ್ಟರು ಸಹ ಯಾರು ಕೊಡ್ತಾರೆ ಅನ್ನೋ ಯೋಚನೆ ನನ್ನಲ್ಲಿ ಕಾಡ್ತಾ ಇದೆ. ಸಂಪದಿಗರೆ ನೀವು ಸಹ ನಿಮ್ಮ ಕೈಲಾದಷ್ಟು ಸಹಾಯವನ್ನು ಇಂತಹವರಿಗೆ ಮಾಡಿ. ಅಕಸ್ಮಾತ್ ಮೌಲನಿಗೆ ಸಹ ಏನಾದ್ರು ಸಹಾಯ ಮಾಡಬೇಕಾದ್ರೆ ಇವನನ್ನ  ಸಂಪರ್ಕಿಸಿ.

ಮೌಲಾ

9ನೇತರಗತಿ ಸಿ.ವಿಭಾಗ

ಸರ್ಕಾರಿ ಪ್ರೌಡಶಾಲೆ ಬೂದಿಕೋಟೆ

ಬೂದಿಕೋಟೆ ಗ್ರಾಮ ಮತ್ತು ಅಂಚೆ

ಬಂಗಾರಪೆಟೆ ತಾಲ್ಲೂಕು

ಕೋಲಾರ ಜಿಲ್ಲೆ 563147

ದೂ.ಸಂಖ್ಯೆ:08153-312079

Rating
No votes yet

Comments