ಗಹನವಾದ ತರಲೆ ಪ್ರಶ್ನೆಗಳು

ಗಹನವಾದ ತರಲೆ ಪ್ರಶ್ನೆಗಳು

ಇವು ಬೇರೆ ಬೇರೆ ರೂಪದಲ್ಲಿ ಕಣ್ಣಿಗೆ, ಕಿವಿಗೆ ಬಿದ್ದ ತಾತ್ವಿಕ ತರಲೆ ಪ್ರಶ್ನೆಗಳು. ಬೇಕಿದ್ದರೆ ವಿಸ್ತಾರವಾಗಿ ಚರ್ಚಿಸಬಹುದು.
೧. ಈ ಜಗವೇ ನಾಟಕರಂಗ: ಹಾಗಾದರೆ ಪ್ರೇಕ್ಷಕರು ಎಲ್ಲಿರುತ್ತಾರೆ?
೨. ಪ್ರೀತಿ ಕುರುಡು: ಹಾಗಾದರೆ ಮೊದಲ ನೋಟದಲ್ಲೆ ಪ್ರೀತಿ ಹುಟ್ಟಿತು ಅನ್ನುವುದಕ್ಕೆ ಅರ್ಥವೇನು?
೩. ನಾವು ಇತರರಿಗೆ ಸಹಾಯಮಾಡಲೆಂದೇ ಹುಟ್ಟಿದ್ದೇವೆ: ಹಾಗಾದರೆ ಇತರರು ಯಾಕೆ ಇದ್ದಾರೆ?
೪. ನಮ್ಮ ಮೊಳಕಾಲು ಈಗಿರುವಂತಲ್ಲದೆ ಮುಂದಕ್ಕೆ ಮಡಿಸಿಕೊಳ್ಳುವಂತಿದ್ದರೆ ಕುರ್ಚಿಗಳ ಆಕಾರ ಹೇಗಿರುತ್ತಿತ್ತು?
೫. ಮಂಗಗಳಿಂದ ಮಾನವ: ಹಾಗಾದರೆ ಇನ್ನೂ ಮಂಗಗಳು ಏಕಿವೆ?
೬. ಸೋಲಲೆಂದು ಪ್ರಯತ್ನಿಸಿ ಸೋತರೆ ಅದು ಸೋಲೋ ಗೆಲುವೋ?

Rating
No votes yet

Comments