೨೦೦೯ರ ಲೋಕಸಭಾ ಚುನಾವಣೆಯಲ್ಲಿ ನಾಡಪರ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಅನ್ನುವುದರ ಬಗ್ಗೆ ಒಂದು ಮಾತು ಹಾಗು ನಾರಾಯಣ ಗೌಡರು ಹೇಳಿದ ನುಡಿಗಳು.

೨೦೦೯ರ ಲೋಕಸಭಾ ಚುನಾವಣೆಯಲ್ಲಿ ನಾಡಪರ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಅನ್ನುವುದರ ಬಗ್ಗೆ ಒಂದು ಮಾತು ಹಾಗು ನಾರಾಯಣ ಗೌಡರು ಹೇಳಿದ ನುಡಿಗಳು.

ನಮಸ್ಕಾರ ಸ್ನೇಹಿತರೆ,
ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆಗಳು ನಮ್ಮ ಮುಂದೆ ಇವೆ. ಅದನ್ನ ದೃಷ್ಟಿಯಲ್ಲಿ ಇಟ್ಟುಕೊಂಡು ನೋಡೋದಾದ್ರೆ ಕನ್ನಡಿಗರಾಗಿ ನಾವುಗಳು ಕೆಲವು ವಿಷಯಗಳನ್ನ ಅರಿತುಕೊಳ್ಳಬೇಕು.
ಇವತ್ತು ನಮ್ಮ ಒಕ್ಕೂಟ ವ್ಯವಸ್ಥೆಯ ದೇಶದಲ್ಲಿ ನಮಗೆ ಮತ್ತು ನಮ್ಮ ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಎಲ್ಲಾ ಸೌಲಭ್ಯ ಮತ್ತು ಸವಲತ್ತುಗಳು ನಮಗೆ ಸಿಗುತ್ತಿವೆಯೇ? ಅಥವಾ ಅವುಗಳನ್ನ ಪಡೆದುಕೊಳ್ಳಲು ಕೇಂದ್ರದಲ್ಲಿ ಕುಳಿತಿರುವ ನಮ್ಮ ಮಂತ್ರಿಗಳು ಏನಾದ್ರೂ ಕೆಲಸ ಮಾಡ್ತಾ ಇದಾರಾ? ಇದಕ್ಕೆ ಒಕ್ಕೊರಲಿನ ಉತ್ತರ ಇಲ್ಲ ಇಲ್ಲಾ . ಸರಿ ಹಾಗಾದ್ರೆ ನಮ್ಮ ನಾಡಿಗೆ ಅನ್ಯಾಯ ನಡಿತಿದ್ರು ನಾವುಗಳು ಏನು ಮಾಡೋಕೆ ಸಾಧ್ಯವಿಲ್ಲವೇ?

ಇವತ್ತು ತಮಿಳು ನಾಡು ಮತ್ತು ಆಂಧ್ರ ಪ್ರದೇಶಗಳು ತಮಗೆ ಬೇಕಾದ ಹಾಗೆ ತಮ್ಮ ಕೆಲಸಗಳನ್ನ ಕೇಂದ್ರದಿಂದ ಮಾಡಿಸಿಕೊಳ್ಳುತ್ತಿದ್ದರೆ ಇಲ್ಲಿ ನಾವು ಪ್ರತಿ ಸಾರಿ ಪ್ರತಿಭಟನೆ ಮತ್ತೆ ಹೋರಾಟಗಳನ್ನ ಮಾಡುತ್ತಾ ಕುಳಿತುಕೊಳ್ಳಬೇಕು. ಇದಕ್ಕೆ ಮುಖ್ಯ ಕಾರಣ ಇಲ್ಲಿಂದ ನಾವುಗಳು ಆರಿಸಿ ಕಳಿಸುತ್ತಿರುವ ಲೋಕಸಭಾ ಸದಸ್ಯರ ಬೇಜವಾಬ್ದಾರಿತನ. ಇದಕ್ಕೆ ನಮ್ಮ ಇಡೀ ನಾಡೇ ಕಂದಾಯ ಕಟ್ಟಬೇಕು.

ಇನ್ನು ಕೆಲವು ಸಂಸದರಿಗೆ ನಾಡಿನ ಬಗ್ಗೆ ಕಾಳಜಿ ಇದೆ, ಆದ್ರೆ ಅವರ ಜೊತೆ ಧ್ವನಿ ನೀಡೋಕೆ ಬೇರೆ ಸಂಸದರಿಗೆ ಇಷ್ಟವಿಲ್ಲ. ಕೇವಲ ತಮ್ಮ ತಮ್ಮ ಪಾರ್ಟಿಗಳಿಗೆ ದುಡ್ಡು ಕೊಡ್ತಾರೆ ಅನ್ನೋ ಒಂದೇ ಕಾರಣಕ್ಕೆ ಎಲ್ಲಾ ಪಕ್ಷಗಳು ಅರ್ಹರಲ್ಲದವರಿಗೆ ಎಲ್ಲಿ ಬೇಕೋ ಅಲ್ಲಿ ಸೀಟ್ ಕೊಟ್ಟು ಧನ್ಯರಾಗುತ್ತಾರೆ. ಹಾಗೆಯೇ ಇಲ್ಲಿಗೆ ವಲಿಸಗರಾಗಿ ಬಂದಿರುವ ಜನರನ್ನ ಓಲೈಸಲು ಬೇರೆ ಯಾರಿಗೋ ಟಿಕೆಟ್ ನೀಡಬಾರದು. ಇಲ್ಲಿ ವಿಪರ್ಯಾಸ ಅಂದ್ರೆ ಕೊನೆಯಲ್ಲಿ ಅನುಭವಿಸುವವರು ನಮ್ಮಂತಹ ಸಾಮಾನ್ಯ ಜನತೆ,

ಇದಕ್ಕೆ ಇರುವ ಏಕೈಕ ಪರಿಹಾಠ ಅಂದ್ರೆ ನಾಡು, ನುಡಿ, ನೆಲ, ಜಲ ಹಾಗು ಕನ್ನಡತನವನ್ನ ಹೊಂದಿರುವಂತಹ ನಾಡಪರರಿಗೆ ಈ ಸಾರಿ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಸೀಟ್ಗಳನ್ನ ನೀಡಬೇಕು. ಇಲ್ಲ ಅಂದ್ರೆ ಅರ್ಹರಲ್ಲದ ಅಭ್ಯರ್ಥಿಗಳಿಗೆ ನಾವುಗಳು ಓಟ್ ಮಾಡುವುದು ಬೇಡ. ಇನ್ನೇನು ಕೆಲವೇ ದಿನಗಳಲ್ಲಿ "Negative voting" ಪದ್ಧತಿ ಜಾರಿಗೆ ಬರಬಹುದು ಅನ್ನೋ ನಿರೀಕ್ಷೆ ಇದೆ. ಸಧ್ಯಕ್ಕೆ ಅದು ಉಚ್ಚ ನ್ಯಾಯಾಲಯದ ಮುಂದಿದೆ.

ಹಾಗೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ನಾರಾಯಣ ಗೌಡರು ಇದರ ಬಗ್ಗೆ ಏನು ಬರೆದಿದ್ದಾರೆ ಅನ್ನೋದನ್ನ ಕೆಳಗ ಹಾಕಿದ್ದೇನೆ ಓದಿ.

-----------------------------------------------------------------------------------------------------------------------------------------------
ಕನ್ನಡ ಬಂಧು,

2009 ರ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿದೆ. ಕನ್ನಡಿಗರಿಗೆ ಮತ ಚಲಾಯಿಸಿ; ತಮ್ಮನ್ನು ಲೋಕಸಭೆಯಲ್ಲಿ ಪ್ರತಿನಿಧಿಸುವ
ಸಂಸದರನ್ನು ಆಯ್ಕೆ ಮಾಡುವ ಸಂದರ್ಭ ಮತ್ತೆ ಒದಗಿ ಬಂದಿದೆ. ಹಾಗೆಯೆ, ರಾಜಕೀಯ ಪಕ್ಷಗಳಿಗೆ ತಮ್ಮನ್ನು ಆರಿಸುವ ಕನ್ನಡಿಗರಿಗೆ
ಅನ್ಯಾಯವಾಗದಂತೆ, ದೆಹಲಿಯಲ್ಲಿ ಕರ್ನಾಟಕದ ಮತ್ತು ಕನ್ನಡದ ಹಿತಕಾಯುವ ಜವಾಬ್ದಾರಿ ಇದೆ. ಈ ಜವಾಬ್ದಾರಿಯನ್ನು ಸರಿಯಾಗಿ
ನಿಭಾಯಿಸಲು ಯೋಗ್ಯನಾದ ಅಭ್ಯರ್ಥಿಗೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಬೇಕು. ವಲಸೆ ಬಂದಿರುವ ಕನ್ನಡೇತರರನ್ನು ಓಲೈಸಲು
ಕನ್ನಡೇತರರಿಗೆ ಟಿಕೆಟ್ ನೀಡಿ ಕನ್ನಡಿಗರಿಗೆ ಅನ್ಯಾಯ ಮಾಡಕೂಡದು ಎಂದು ರಾಜ್ಯಾಧ್ಯಕ್ಷರಾದ ಟಿ.ಏ. ನಾರಾಯಣ ಗೌಡರು
ಬೆಂಗಳೂರಿನ ಬಸವನಗುಡಿಯಲ್ಲಿ ಕರವೇ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುತ್ತ ಹೇಳಿದರು.

Rating
No votes yet

Comments