ಕ್ಯಾಸೆಟ್ ಹಾಡುಗಳನ್ನು ಡಿಜಿಟೈಸ್ ಮಾಡಿ

ಕ್ಯಾಸೆಟ್ ಹಾಡುಗಳನ್ನು ಡಿಜಿಟೈಸ್ ಮಾಡಿ

ನಮ್ಮ ಮನೆಯಲ್ಲಿ ಮೊದಲು ಗಣಕ ಯಂತ್ರ ಬಂದಾಗ ನನ್ನ ಮೊದಲ ಸಂಶೋಧನೆ ಇದು. ಯಾಕೆಂದರೆ ಕರಾವಳಿಯಲ್ಲಿರುವವರಿಗೆ ಕ್ಯಾಸೆಟ್ ಎಂದರೆ ಅಲೆರ್ಜಿ. ಅಧಿಕ ತೇವಾಂಶವಿರುವ ಕರಾವಳಿ ಪ್ರದೇಶದಲ್ಲಿ ಕ್ಯಾಸೆಟ್ ತೆಗೆದುಕೊಂಡರೆ ೫ ತಿಂಗಳಿಗೆ ಹಾಡುಗಳು ಅಪಸ್ವರವನ್ನು ಎಬ್ಬಿಸುತ್ತಿದ್ದವು. ಸಿ.ಡಿಗಳನ್ನು ಉಪಯೋಗಿಸಬಹುದಿತ್ತು. ಆದರೆ ಹಲವಾರು ಕ್ಯಾಸೆಟ್ ಗಳ ಸಿ.ಡಿ. ಸಿಗುತ್ತಿರಲಿಲ್ಲ. ಹಾಗೆ ಕೆಲವು ಆಕಾಶವಾಣಿ ಸಂಗೀತ ಕಛೇರಿಗಳನ್ನು ರೆಕಾರ್ಡ್ ಮಾಡಬೇಕಿತ್ತು. ಇದಕ್ಕೆ ಕಂಡುಕೊಂಡ ಉಪಾಯ ಕ್ಯಾಸೆಟ್ ಗಳನ್ನು ಡಿಜಿಟೈಸ್ ಮಾಡುವುದು. ಇದು ಸರಳ ಆದರೆ ಸಮಯ ತೆಗೆದುಕೊಳ್ಳುವಂತಹದು. ಕ್ವಾಲಿಟಿ ಮಾತ್ರ ಸ್ವಲ್ಪವೂ ಬದಲಾಗುವುದಿಲ್ಲ. ಮೊದ-ಮೊದಲು ಸಿಕ್ಕಾಪಟ್ಟೆ trial&error ಉಪಯೋಗಿಸಬೇಕು. ಸಿಗ್ನಲ್-ಪ್ರಾಸೆಸ್ಸಿಂಗ್ ಗೊತ್ತಿದ್ದವರಿಗೆ ಈ ವಿಷಯ ಅಷ್ಟು ಕಷ್ಟವೆನಿಸುವುದಿಲ್ಲ.

ಬೇಕಾಗುವ ಸಾಧನಗಳು:
೧) ಸ್ಟೀರಿಯೋ ಟೇಪ್-ರೆಕಾರ್ಡರ್
೨) Line-in/Line-out ಕೇಬಲ್. (೧೫ ರೂಪಾಯಿಗೆ ಸಿಗುತ್ತದೆ. ಚಿತ್ರ ನೋಡಿ.)
೩) ಗಣಕ ಯಂತ್ರ (line-in ಅಥವಾ microphone port ಇರಬೇಕು)
೪) audacity (ರೆಕಾರ್ಡ್ ಮಾಡುವ ಉಚಿತ ತಂತ್ರಾಂಶ http://audacity.sourceforge.net/)

line-in/line-out cabel

ವಿವರಣೆ:

೧) ಮೊದಲು ಕೇಬಲ್ ಒಂದು ಬದಿಯನ್ನು ಟೇಪ್-ರೆಕಾರ್ಡರ್ line-outಗೆ ಸೇರಿಸಿ [Headphone-out ಎಂಬ ಹೆಸರು ಇದೆ], ಇನ್ನೊಂದು ಬದಿಯನ್ನು ಗಣಕ ಯಂತ್ರದ line-in
ಅಥವಾ microphone-portಗೆ ಸೇರಿಸಿ.
೨) ತದನಂತರ audacity ತಂತ್ರಾಂಶ ಓಪನ್ ಮಾಡಿ ಕೆಲವು ಸೆಟ್ಟಿಂಗ್ಸ್ ಮಾಡಿರಿ.

೩) ರೆಕಾರ್ಡಿಂಗ್ ಇಂಟರ್ಫೇಸ್ ಸೆಲೆಕ್ಟ್ ಮಾಡಿ [microphone/line-in]. ಟೂಲ್-ಬಾರಿನಲ್ಲಿ microphone ಅಥವಾ line-in (ಯಾವುದಕ್ಕೆ ಕನೆಕ್ಟ್ ಮಾಡಿದಿರೋ
ಅದನ್ನು) ಸೆಲೆಕ್ಟ್ ಮಾಡಿ (ಚಿತ್ರ ನೋಡಿ). ಹಾಗೆ ವೋಲ್ಯುಮ್ ಅರ್ಧಕ್ಕೇ ಇಡಿ.


port select


೪) audacityಯಲ್ಲಿ Edit-->Preferences ಅದುಮಿ


audacity-preferences


೫) Audio I/Oದಲ್ಲಿ ನಿಮ್ಮ ಸಿಸ್ಟಮ್ ಸೌಂಡ್-ಕಾರ್ಡ್ ಸೆಲೆಕ್ಟ್ ಮಾಡಿ (Microsoft-default ಉಪಯೋಗಿಸಬೇಡಿ. ಬದಲಾಗಿ ನಿಮ್ಮ ಸಿಸ್ಟಮ್ ಸೌಂಡ್-ಕಾರ್ಡ್ ಉಪಯೋಗಿಸಿ
[ಉದಾಹರಣೆಗೆ: RealTek, Sound-Max ...])

೬) Sampling-rate: ಕ್ಯಾಸೆಟ್ ಹೊಸದಾದರೆ ಅಂದರೆ ಅಧುನಿಕ ತಂತ್ರಜ್ಞಾನ ಉಪಯೋಗಿಸಿ ರೆಕಾರ್ಡ್ ಮಾಡಿದ್ದರೆ ೪೪೧೦೦hz ಉಪಯೋಗಿಸಿ. ಹಳೆ ಗ್ರಾಮಾಫೋನ್ ರೆಕಾರ್ಡ್ ಇಂದ ಮಾರ್ಪಾಡಲ್ಪಟ್ಟಿದ್ದರೆ, ೨೨೦೫೦ ಅಥವಾ ಅದಕ್ಕಿಂತ ಕಡಿಮೆ ಸೆಲೆಕ್ಟ್ ಮಾಡಿರಿ. ಕ್ಯಾಸೆಟ್ ಅಲ್ಲಿ ೨ ಚಾನೆಲ್ ಕ್ಕಿಂತ ಹೆಚ್ಚು ಚಾನೆಲ್ ಇಲ್ಲದಿರುವುದರಿಂದ ೨ ಚಾನೆಲ್ ಸೆಲೆಕ್ಟ್ ಮಾಡಿದರೆ ಸಾಕು.

೭) ಫೈಲ್-ಫಾರ್ಮ್ಯಾಟ್ uncompressed wave[16 bit ಸಾಕು] ಇರಲಿ. ಮತ್ತೆ ಬೇಕಾದರೆ mp3ಗೆ ಕನ್ವರ್ಟ್ ಮಾಡಿದರಾಯಿತು.


preferences

 


ವಿಂಡೋಸ್ ಕಾನ್ಫಿಗರೆಶನ್:
೧) ಕಂಟ್ರೋಲ್-ಪ್ಯಾನೆಲ್ ಗೆ ಹೋಗಿ Sounds and Audio Devices ಸೆಲೆಕ್ಟ್ ಮಾಡಿ.
೨) ಇಲ್ಲಿ Voice ಟ್ಯಾಬ್ ಗೆ ಹೋಗಿ.
೩) Voice-Recording ಕೆಳಗೆ volume ಬಟ್ಟನ್ ಅದುಮಿ.
೪) line-in ಅಥವಾ microphone (ಯಾವುದು ಉಪಯೋಗಿಸುತ್ತಿರೋ ಅದು) ಪೋರ್ಟ್ ಗಳನ್ನು ಅನ್-ಮ್ಯೂಟ್ ಮಾಡಿ. ಹಾಗೆ volume ಅರ್ಧಕ್ಕಿಂತ ಹೆಚ್ಚಾಗದಂತೆ
ನೋಡಿಕೊಳ್ಳಿ.ಇಲ್ಲವಾದಲ್ಲಿ ರೆಕಾರ್ಡೆಡ್ ಹಾಡಿನಲ್ಲಿ ಬಹಳ noise ಕಾಣಿಸಿಕೊಳ್ಳುತ್ತದೆ.

 

windows settings



ಸೌಂಡ್ ಕಾರ್ಡ್ ಪೋರ್ಟ್ ಗಳನ್ನು ಗುರುತಿಸುವುದು ಹೇಗೆ?


ಗುಲಾಬಿ ಬಣ್ಣದ್ದು: microphone
ಹಸಿರು ಬಣ್ಣದ್ದು: Audio-out
ನೀಲಿ ಬಣ್ಣದ್ದು: Line-in

sound ports

ಟೇಪ್ ರೆಕಾರ್ಡರ್ ಬಗ್ಗೆ ಕೆಲವು ಸಲಹೆಗಳು:
೧) ಟೇಪ್ ರೆಕಾರ್ಡರ್ volume ಅರ್ಧದಲ್ಲಿಡಿ.
೨) ನಿಮ್ಮದು high-end ರೆಕಾರ್ಡರ್ ಆದರೆ high-frequency audio decibelಗಳನ್ನೂ ಸಂಪೂರ್ಣ ಕಡಿಮೆ ಮಾಡಿ. ಗಣಕ ಯಂತ್ರದ ಸೌಂಡ್ ಕಾರ್ಡ್ಗೆ ಇಷ್ಟು
high-frequency ಶಬ್ದಗಳನ್ನು ಸುಧಾರಿಸಲು ಕಷ್ಟ. ಇದರಿಂದ ರೆಕಾರ್ಡಿಂಗ್ ನಲ್ಲಿ ಸಿಕ್ಕಾಪಟ್ಟೆ noise ಕಾಣಿಸುತ್ತದೆ.
೩) ಮೊಬೈಲ್ ಗಳನ್ನೂ ದೂರವಿಡಿ. ಕೆಲವೊಮ್ಮೆ ಕಾಲ್ ಬಂದಾಗ electro-magnetic interferenceನಿಂದಾಗಿ noise ಬಹಳ ಹೆಚ್ಚುತ್ತದೆ.
೪) ಮೋನೋ ಟೇಪ್-ರೆಕಾರ್ಡರ್ ಅಲ್ಲಿ ಪದ್ಯದ ಕೆಲವು ಭಾಗಗಳು ಅಳಿಸಿ ಹೋಗುತ್ತದೆ. ಆದ್ದರಿಂದ stereo ಟೇಪ್-ರೆಕಾರ್ಡರ್ ಬಳಸಿ.

ಈಗ ರೆಕಾರ್ಡಿಂಗ್ ಶುರು. ಮೊದಲು trial and error ಮಾಡಬೇಕು. ಟೇಪ್ -ರೆಕಾರ್ಡರ್ ಅಲ್ಲಿ ಪ್ಲೇ ಬಟ್ಟನ್ ಅದುಮಿ. ಹಾಗೆ audacity ಅಲ್ಲಿ ರೆಕಾರ್ಡ್ ಬಟ್ಟನ್ (ಚಿತ್ರದ ಎಡದಿಂದ ಮೂರನೇ ಬಟ್ಟನ್). ೧೦ ಕ್ಷಣ ಸ್ಯಾಂಪಲ್ ತೆಗೆದು , audacityಯಲ್ಲಿ ರೆಕಾರ್ಡಿಂಗ್(ಚಿತ್ರದ ಎಡದಿಂದ ಐದನೇ ಬಟ್ಟನ್ ) ಮತ್ತು ಟೇಪ್-ರೆಕಾರ್ಡರ್ ನಿಲ್ಲಿಸಿ . audacity ಅಲ್ಲಿ ರೆಕಾರ್ಡ್ ಆದ ಸ್ಯಾಂಪಲ್ ಸೌಂಡ್ ಅನ್ನು ಪ್ಲೇ ಮಾಡಿ (ಎಡದಿಂದ ಎರಡನೆಯ ಬಟ್ಟನ್) . ಗುಣಮಟ್ಟ ಸರಿ ಬಂದಿದ್ದರೆ , ಟೇಪ್ ರಿವೈಂಡ್ ಮಾಡಿ ಹೊಸ ರೆಕಾರ್ಡಿಂಗ್ ಶುರು ಮಾಡಿ. noise ಹೆಚ್ಚು ಬಂದಿದ್ದರೆ , ವೋಲ್ಯುಮ್ ಕಡಿಮೆ ಮಾಡಿರಿ (ಟೇಪ್ ಅಥವಾ ರೆಕಾರ್ಡಿಂಗ್ ವೋಲ್ಯುಮ್ ). ಎರಡು ಮೂರು trialಗಳಲ್ಲೇ ಒಳ್ಳೆ ಫಲಿತಾಂಶ ಲಭಿಸುವುದು. ಕ್ಯಾಸೆಟ್ ಒಂದು ಘಂಟೆ ಇದ್ದರೆಪೂರ್ತಿ ರೆಕಾರ್ಡ್ ಆಗಲು ಒಂದು ಘಂಟೆ ಕಾಯಬೇಕಾಗುತ್ತದೆ . ಮಧ್ಯದಲ್ಲಿ ಯಾವ ಕೆಲಸವನ್ನು ಗಣಕ ಯಂತ್ರದಲ್ಲಿ ಮಾಡಬೇಡಿ. ಇದು ಕೇವಲ ಹಾಡಿನ ಗುಣಮಟ್ಟ ಕಾಪಾಡಲು ಒಂದು ಪ್ರಿ-ಕಾಶನ್.

record options


ನಾನು ಸುಮಾರು ೪೦ ಕ್ಯಾಸೆಟ್ ಗಳನ್ನು ಡಿಜಿಟೈಸ್ ಮಾಡಿದ್ದೇನೆ. ಇನ್ನು ಮಾಡಬೇಕೆನ್ನುವಷ್ಟರಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಗಣಕ-ಯಂತ್ರ ಕೈ ತಪ್ಪಿಹೋಯಿತು. ನೀವು ಒಮ್ಮೆ ಪ್ರಯತ್ನಿಸಿ ನೋಡಿ.


******************************************************************************

೧) Microsoft, windows, RealTek, Sound-Max,mp3 ಇವು ಕಂಪೆನಿಗಳ ಟ್ರೇಡ್-ಮಾರ್ಕ್ ಗುರುತುಗಳು.
೨) audacity ಬಗ್ಗೆ ಕಾಪಿರೈಟ್ ಯಾರು ಲಗ್ಗತ್ತಿಸಿಲ್ಲ. ಇದು ಒಂದು ಸಮುದಾಯ ನಡೆಸುತ್ತಿರುವ ಉಚಿತ ಆಡಿಯೋ ಎಡಿಟರ್.

೩) ಚಿತ್ರ ಕೃಪೆ (line-in/line-out cable):http://techguy.org

Rating
No votes yet

Comments