ಯಾಕೋ ಬೇಸರ
ಇತ್ತೀಚೆಗೆ ಯಾಕೋ ಬೇಸರ. ಯಾವ ಕೆಲಸ ಮಾಡಲು ಉತ್ಸಾಹವೇ ಇಲ್ಲ. ಬರೆಯೋದಿಕ್ಕೆ ಹೋದರೆ ಪದಗಳೇ ನೆನಪಾಗುವುದಿಲ್ಲ. ಯಾಕೆ ಅಂತಲೇ ಗೊತ್ತಾಗುವುದಿಲ್ಲ. ನನ್ನ creativity ಮುಗಿದೇ ಹೋಯ್ತೇನೋ ಅನ್ನುವ ಭಯ ಸಣ್ಣಗೆ ಮನದಲ್ಲಿ ಮೂಡಿ ಮೈ ನಡುಗುತ್ತದೆ. ಎಲ್ಲರಿಗೂ ಹೀಗಾಗುತ್ತದೆಯೋ ಅಥವಾ ನನಗೆ ಮಾತ್ರವೋ ಅನ್ನುವುದು ಅರ್ಥವಾಗುವುದಿಲ್ಲ. ಕೆಲವೊಮ್ಮೆ ಬೇರೆಯವರು ನನಗೆ ಗೊತ್ತಿದ್ದ ವಿಷಯಗಳನ್ನು ಬರೆದದ್ದನ್ನು ನೋಡಿದಾಗ, ನನಗೇಕೆ ಹೊಳೆಯಲಿಲ್ಲವೆಂದು ಬೇಸರಿಸಿದ್ದು ಉಂಟು. ಹಾಗನ್ನಿಸಿ, ನನಗೇಕೆ ಸಾಧ್ಯವಿಲ್ಲ ಅನ್ನುವ ಚಾಲೆಂಜ್ ನೊಂದಿಗೆ ಕವನಗಳನ್ನು, ಲೇಖನಗಳನ್ನು ಬರೆದಿದ್ದು ಉಂಟು. ಯಾರಾದರೂ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದರೆ, ಜಗತ್ತನ್ನೇ ಗೆದ್ದ ಉತ್ಸಾಹದೊಂದಿಗೆ ಅದೇ ಜೋಶ್ ನಲ್ಲಿ ಇನ್ನೂ ಹಲವಾರು ಕವನಗಳು ನನ್ನಲ್ಲಿ ಮೂಡಿದ್ದು ಉಂಟು. ಇಷ್ಟೆಲ್ಲಾ ಆದರೂ ಕೊನೆಗೆ ಎಲ್ಲದರಲ್ಲು ಉತ್ಸಾಹ ಕಳೆದುಕೊಂಡು, ಈ ಜಗತ್ತೇ ನಶ್ವರ, ಎಲ್ಲಾ ಭ್ರಮೆ ಎನ್ನುವ ತತ್ವಜ್ನಾನದೊಂದಿಗೆ ಏನೂ ಬೇಡವೆಂದು ಎಲ್ಲಾ ನಿಲ್ಲಿಸಿ ಸುಮ್ಮನೆ ಮಲಗಿದ್ದು ಉಂಟು. ಹೀಗೇಕಾಗುತ್ತದೆ? ಈ ಪ್ರಶ್ನೆಗಳನ್ನು ನನ್ನಲ್ಲೇ ಕೇಳಿ ಸಾಕಾಗಿ ಈಗ ನಿಮ್ಮೆಲ್ಲರ ಮೊರೆ ಹೊಕ್ಕಿದ್ದೇನೆ.
Comments
ಉ: ಯಾಕೋ ಬೇಸರ
In reply to ಉ: ಯಾಕೋ ಬೇಸರ by Nagaraj.G
ಉ: ಯಾಕೋ ಬೇಸರ
In reply to ಉ: ಯಾಕೋ ಬೇಸರ by inchara123
ಉ: ಯಾಕೋ ಬೇಸರ
In reply to ಉ: ಯಾಕೋ ಬೇಸರ by Nagaraj.G
ಉ: ಯಾಕೋ ಬೇಸರ
In reply to ಉ: ಯಾಕೋ ಬೇಸರ by inchara123
ಉ: ಯಾಕೋ ಬೇಸರ
ಉ: ಯಾಕೋ ಬೇಸರ
In reply to ಉ: ಯಾಕೋ ಬೇಸರ by javali nagaraja rao
ಉ: ಯಾಕೋ ಬೇಸರ
ಉ: ಯಾಕೋ ಬೇಸರ
In reply to ಉ: ಯಾಕೋ ಬೇಸರ by veeravenki
ಉ: ಯಾಕೋ ಬೇಸರ
ಉ: ಯಾಕೋ ಬೇಸರ
In reply to ಉ: ಯಾಕೋ ಬೇಸರ by msudan86
ಉ: ಯಾಕೋ ಬೇಸರ
In reply to ಉ: ಯಾಕೋ ಬೇಸರ by inchara123
ಉ: ಯಾಕೋ ಬೇಸರ
ಉ: ಯಾಕೋ ಬೇಸರ
In reply to ಉ: ಯಾಕೋ ಬೇಸರ by dhanu.vijai
ಉ: ಯಾಕೋ ಬೇಸರ
ಉ: ಯಾಕೋ ಬೇಸರ