ನಿರ್ಭಯ ಕರ್ನಾಟಕ

ನಿರ್ಭಯ ಕರ್ನಾಟಕ

ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲುವುದೆಂತು? ಕಳೆದ ಹತ್ತು ದಿನಗಳಲ್ಲಿ 7 ಬಾರಿ ಮಹಿಳೆಯರ ಮೇಲೆ ಆಕ್ರಮಣ ನಡೆದಿದೆ! ಅದೂ ಬೆಂಗಳೂರಿನಲ್ಲಿ ಜನನಿಬಿಡ ಪ್ರದೇಶಗಳಾದ ಇನ್ ಪಂಟ್ರಿರಸ್ತೆ, ಕನ್ನಿಗಾಂ ರಸ್ತೆ, ರೆಸ್ಟ್ ಹೌಸ್ ಕಾಲೋನಿ, ವಸಂತನಗರ, ಇಂದಿರಾನಗರ, ಹಲಸೂರುಗಳಲ್ಲಿ.

ಹಲವಾರು ಸಂಘ ಸಂಸ್ಥೆಗಳು ಮತ್ತು ಆಸಕ್ತ ವ್ಯಕ್ತಿಗಳು ನಮ್ಮ ಕರ್ನಾಟಕವನ್ನು ನಿರ್ಭಯ ಕರ್ನಾಟಕವನ್ನಾಗಿ ಮಾಡಲು ಮತ್ತು ಮಹಿಳೆಯರಿಗೆಸುರಕ್ಷತೆಯ ಜಾಗೃತಿಯನ್ನು ಹಾಗೂ ಸಾರ್ವಜನಿಕರಿಗೆ ಅದರ ಅರಿವನ್ನು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದೆ ಬಂದಿದ್ದಾರೆ.
ಮಂಗಳೂರಿನಲ್ಲಿ ನಡೆದ ದಾಳಿಗಳನ್ನು ಅವಲೋಕಿಸಿದಾಗ (ಕೊನೆಯದಾಗಿ ಗಮನಕ್ಕೆ ಬಂದ ಪ್ರಕರಣವೆಂದರೆ ಫೆಬ್ರವರಿ 24, 2009), ಮಹಿಳೆಯರನ್ನು ಸಂಸ್ಕೃತಿ, ನೈತಿಕತೆ ಮತ್ತು ಸಮಾಜದ ಅವನತಿಗೆ ಕಾರಣಕರ್ತರೆಂಬಂತೆ ಬಿಂಬಿಸುತ್ತಿರುವುದು ನಿಜಕ್ಕೂ ಶೋಚನೀಯ. ಬೆಂಗಳೂರಿನಲ್ಲಿಯೂ ಹುಡುಗಿಯರು ಜೀನ್ಸ್ ಪ್ಯಾಂಟ್, ತೋಳಿಲ್ಲದ ಶರ್ಟ್ ಗಳನ್ನು ತೊಟ್ಟಿದ್ದಾರೆಂದು ಹಾಗೂ ಇಂಗ್ಲೀಷಿನಲ್ಲಿ ಮಾತಾಡುತ್ತಿದ್ದರೆಂಬ ಕಾರಣಗಳನ್ನು ಕೊಟ್ಟು ಅವರ ಮೇಲೆ ಹಲ್ಲೆಗಳನ್ನು ನಡೆಸಲಾಗಿದೆ. ಈ ಅನಾಚಾರಗಳನ್ನು ನೋಡಿದಾಗ ಈ ಘಟನೆಗಳು ಮಂಗಳೂರು ಮತ್ತು ಕರಾವಳಿ ತೀರ ಪ್ರದೇಶಗಳಲ್ಲಿ ನಡೆದ ದಾಳಿಗಳ ಮುಂದುವರಿದ ಭಾಗದಂತಾಗಿದೆ. ಹಲ್ಲೆ ನಡೆಸಿದ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳು ಬೇರೆ ಬೇರೆಯೇ ಹೊರತು ಉದ್ಧೇಶ ಮಾತ್ರ ಒಂದೇ ಆಗಿದೆ.

ಮಹಿಳೆಯರ ಮೇಲಿನ ಈ ದೌರ್ಜನ್ಯವನ್ನು ಖಂಡಿಸುತ್ತಾ ಹಾಗೂ ಮಹಿಳೆಯರಿಗೆ ನಿರ್ಭಯದ ವಾತಾವರಣವನ್ನು ಕಲ್ಪಿಸುವ ಉದ್ಧೇಶದಿಂದ ಈ ಕೆಳಗಿನಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
1. ಮಾರ್ಚ್ 7, 2009 ರಂದು ಎಲ್ಲಾ ಪ್ರತಿನಿಧಿಗಳೊಂದಿಗೆ ಮಾನ್ಯ ಶ್ರೀಅಜಯ್ ಕುಮಾರ್ ಸಿಂಗ್, DGP, IGPಯವರ ಕಚೇರಿಗೆ ದೂರು ದಾಖಲಿಸಲು ಪ್ರತಿಭಟನಾ ಜಾಥವನ್ನು ಹಮ್ಮಿಕೊಂಡಿದ್ದೇವೆ.

2. ಮಾರ್ಚ್ 8, 2009 ರಂದು ( 9:00pm To 11:00pm)  BMTC ನಿಲ್ದಾಣದ(ಮೆಜೆಸ್ಟಿಕ್) ಬಳಿ ರಾತ್ರಿ ಎಲ್ಲಾ ಪ್ರತಿನಿಧಿಗಳೊಂದಿಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

3. ಸಾರ್ವಜನಿಕರಿಗೆ ಭಿತ್ತಿ ಪತ್ರಗಳ ಮೂಲಕ ಮಹಿಳಾ ದೌರ್ಜನ್ಯದ ಅರಿವನ್ನು ಮೂಡಿಸುವುದು, ಇದಲ್ಲದೆ, ಹಸ್ತಾಕ್ಷರ ಅಭಿಯಾನ, ಕಲಾ ಚಿತ್ರಣ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನೀವುಗಳೆಲ್ಲರೂ ಪಾಲ್ಗೊಂಡು, ಇದನ್ನು ಯಶಸ್ವಿಗೊಳಿಸಬೇಕೆಂದು ಕಳಕಳಿಯ ಮನವಿ.
ನಿಮಗೆ ಈ ವಿಷಯಗಳ ಬಗೆಗಿನ ಹೆಚ್ಚಿನ ಮಾಹಿತಿಗಳಿಗಾಗಲೀ ಅಥವಾ ಕಾನೂನು ಮಾಹಿತಿಗಳಿಗೆ http://baware.in/…. ನ್ನು ಸಂಪರ್ಕಿಸಿ. ಹಾಗೂ ನಿಮ್ಮ ಪರಿಚಯಸ್ಥರಿಗೆ ಇದರ ಅರಿವನ್ನು ಮೂಡಿಸಿ.
ಮರ ಸಮುದಾಯ ಸಂಸ್ಥೆಯು ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದು, ಜಾಗೃತಿಯನ್ನು ಮೂಡಿಸುವಲ್ಲಿ ನಮ್ಮ ಸಂಸ್ಥೆಯ ಕಾರ್ಯಕ್ರಮಗಳು ಈ ಕೆಳಕಂಡಂತೆ ಇವೆ.

* ಎಫ್.ಎಮ್ ಚಾನಲ್ ಗಳಲ್ಲಿ ರೇಡಿಯೋ ಕಾರ್ಯಕ್ರಮಗಳನ್ನು ನಡೆಸುವುದು

* ಭಿತ್ತಿ ಪತ್ರಗಳನ್ನು ಅಂಟಿಸುವುದು

* ಬೀದಿ ನಾಟಕಗಳನ್ನು ನಡೆಸುವುದು

* ಸಾಕ್ಷ್ಯ ಚಿತ್ರಗಳನ್ನು ರಚಿಸುವುದು

* ಅಂತರ್ಜಾಲದಲ್ಲಿ ಬ್ಲಾಗ್ ಮುಂತಾದುವುಗಳ ಮೂಲಕ ಜನರಲ್ಲಿ ಅರಿವು ಮೂಡಿಸುವುದು.

ಆದಷ್ಟು ಬೇಗನೇ ಈ ಎಲ್ಲಾ ಕಾರ್ಯಕ್ರಮಗಳಿಂದ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವುದು ನಮ್ಮ ಉದ್ದೇಶವಾಗಿದ್ದು, ಇದಕ್ಕಾಗಿ ನಮಗೆ ಅಸಂಖ್ಯಾತ ಸಂಖ್ಯೆಯಲ್ಲಿ ನಿಮ್ಮೆಲ್ಲರ ನೆರವು ಬೇಕಾಗಿದೆ.

ಇದಕ್ಕಾಗಿ ಆಸಕ್ತರು ಏನು ಮಾಡಬಹುದು? ಏನು ಮಾಡಬೇಕು?

1. ಮೆಜೆಸ್ಟಿಕ್ ನಲ್ಲಿ ರಾತ್ರಿ ನಡೆಯುವ ಪ್ರತಿಭಟನಾ ಜಾಥದಲ್ಲಿ ಆಸಕ್ತರು ಭಾಗವಹಿಸಿ ಹಾಗೂ ಪರಿಚಯಸ್ಥರನ್ನು ಇದರಲ್ಲಿ ಭಾಗವಹಿಸುವಂತೆ ಮನವೊಲಿಸಿ. (ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ)

2. ಪ್ರತಿದಿವಸವೂ ದಿನಪತ್ರಿಕೆಗಳಲ್ಲಿ ಇದರ ಬಗೆಗಿನ ವರದಿಯನ್ನು ಓದುವುದು

3. ನಮ್ಮ ಮರ ಸಂಸ್ಥೆಯಲ್ಲಿ ಮಾರ್ಚ್ 2 ರಿಂದ 7 ರವರೆಗೆ ಸಂಜೆ 4 ಘಂಟೆಗೆ ಈ ವಿಷಯದ ಬಗ್ಗೆ ಚರ್ಚೆಯನ್ನು ನಡೆಸಲಾಗುವುದು. ಆಸಕ್ತರು ಭೇಟಿ ನೀಡಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿ.

4. ನಿಮ್ಮ ನೆರೆಹೊರೆಯಲ್ಲಿ, ಕಚೇರಿಗಳಲ್ಲಿ, ಬಂದುಭಾಂದವರೊಡನೆ, ಶಿಕ್ಷಣ ಸಂಸ್ಥೆಗಳಲ್ಲಿ, ಇದರ ಬಗ್ಗೆ ಜಾಗೃತಿಯನ್ನು ಮೂಡಿಸಿ ಹಾಗೂ ಅವರೆಲ್ಲರೂ ಇದರಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರಚೋದಿಸಿ.

5. ಆಸಕ್ತರು ಈ ವಿಷಯಗಳನ್ನು ಎಲ್ಲಾ ಭಾಷೆಗಳಿಗೆ ಅಂದರೆ ಕನ್ನಡ, ಹಿಂದಿ, ತೆಲುಗು, ತಮಿಳು, ಉರ್ದು, ಬೆಂಗಾಲಿ ಹೀಗೆ… ಅನುವಾದ ಮಾಡಿ ಎಲ್ಲರನ್ನು ಈ ಅಭಿಯಾನದಲ್ಲಿ ಭಾಗವಹಿಸುವಂತೆ ಮಾಡಲು ಕಳಕಳಿಯ ಮನವಿ.
ನೀವು ಬೆಂಗಳೂರಿಗಲ್ಲದಿದ್ದರೂ, ನಿಮ್ಮ ಮುಕ್ತ ಅನಿಸಿಕೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮೆಲ್ಲಾ ಅನಿಸಿಕೆ, ಅಭಿಪ್ರಾಯಗಳನ್ನು ನಮ್ಮ ಮರ ಸಂಸ್ಥೆಯೊಂದಿಗೆ ಮುಕ್ತವಾಗಿ ಹಂಚಿಕೊಂಡಲ್ಲಿ, ಮರ ಸಂಸ್ಥೆಯೂ ನಿಮ್ಮೊಂದಿಗೆ ಈ ಅಭಿಯಾನವನ್ನುಯಶಸ್ವಿಗೊಳಿಸಲು ಹೆಜ್ಜೆ ಹಾಕಲಿದೆ.

Rating
No votes yet

Comments