ದೇವರೆಂಬ ಭ್ರಾಂತು
[ಇಂದು, ಫೆಬ್ರವರಿ ೨೮ ಇಂಡಿಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ - ಅದಕ್ಕೆ ನನ್ನ ಪುಟ್ಟ ಕಾಣಿಕೆ]
ಈಗಷ್ಟೆ ಡಾ. ರಿಚರ್ಡ್ ಡಾಕಿನ್ಸನ ‘The God Delusion’ ಪುಸ್ತಕ ಓದಿ ಮುಗಿಸಿದೆ.
ಅವನ ಇತರ ವೈಜ್ಞಾನಿಕ ಪುಸ್ತಕದ ಹಾಗೆ ಇದು ಡಾರ್ವಿನನ ವಿಕಾಸವಾದದ ಬಗ್ಗೆಗಿನ ಪುಸ್ತಕವಲ್ಲ. ಆದರೂ, ದೇವರಂಬ ಭ್ರಾಂತಿನ ಬಗ್ಗೆ ವೈಜ್ಞಾನಿಕ ಕಾಣ್ಕೆಗಳ ಆಧಾರದ ಮೇಲೆ ಹಾಗು ಆ ಕಾಣ್ಕೆಗಳ ಬಗ್ಗೆಗಿನ ಸಂಶೋಧನೆಗಳ ಬಗ್ಗೆಗಿನ ಪುಸ್ತಕ.
ಐನ್‌ಸ್ಟೀನ್ "ಧಾರ್ಮಿಕತೆ" ಹಾಗು "ದೇವರು" ಎಂದು ಹೇಳಿದ ನುಡಿಗಳನ್ನು ಮೊದಲಿಗೆ ಅವಲೋಕಿಸುತ್ತಾನೆ. ಅವನು "ಧಾರ್ಮಿಕತೆ" ಎಂಬುದನ್ನು ತನ್ನ ಮನಸ್ಥಿತಿಯನ್ನು ವಿವರಿಸಿಕೊಳ್ಳಲು ಬಳಸಿರುವುದು ಮತ್ತು ಅದನ್ನು ಆಸ್ತಿಕರು ಹೈಜಾಕ್ ಮಾಡಿರುವ ಬಗ್ಗೆ ಚರ್ಚಿಸುತ್ತಾನೆ. ಅಷ್ಟಲ್ಲದೆ, ವಿಜ್ಞಾನಿಗಳಲ್ಲಿ ಕೆಲವರು ಪ್ರಶಸ್ತಿಗಳ ಬೆನ್ನಿಗೆ ಬಿದ್ದು, ಧರ್ಮ, ದೇವರು ಎಂಬ ಸಂಗತಿಗಳ ಜತೆ ಚೆಲ್ಲಾಡುವುದರ ಬಗ್ಗೆ ಮಾತಾಡುತ್ತಾನೆ. ಹೇಗೆ ಅವರ ಅವೈಜ್ಞಾನಿಕ ಹೇಳಿಕೆಗಳು ಆಸ್ತಿಕರ ವಾದದ ಸರಕಾಗುತ್ತದೆ ಎಂಬುದು ನಿಜವಾಗಿಯೂ ವಿಷಾದಕರ ಸಂಗತಿಯಾಗಿ ತೆರೆದುಕೊಳ್ಳುತ್ತದೆ.
ದೇವರನ್ನು ಪ್ರತಿಪಾದಿಸಲು ಬಳಸುವ ಹಲವಾರು ವಾದಗಳನ್ನು ಒಂದೊಂದಾಗಿ ಎತ್ತಿಕೊಂಡು ಲೇಖಕ ಅವಲೋಕಿಸುತ್ತಾನೆ. ಹಲದೇವರು, ಏಕದೇವರು, ಪ್ರಾರ್ಥನೆಗಳು ಹೀಗೆ ಏನೇನನ್ನೋ ಬಳಸಿ ದೇವರೆಂಬ ಕಲ್ಪನೆಯನ್ನು ಮೆರೆಸುವ ಕ್ಷುಲ್ಲಕತೆನ್ನು ಬಯಲಿಗೆಳೆಯುತ್ತಾನೆ. ದೇವರ ಪರವಾಗಿನ ಹಲವು ವಾದಗಳನ್ನು ಒಂದೊಂದಾಗಿ ಎತ್ತಿಕೊಂಡು ಅವುಗಳ ಕೊರತೆ ಮತ್ತು ನಿರಾಧಾರವನ್ನು ಬಯಲಿಗೆಳೆಯುತ್ತಾನೆ.
ಹಲವು ವೈಜ್ಞಾನಿಕ ಆಧಾರ ಹಾಗು ತರ್ಕದ ನೆರವಿಂದ ದೇವರಿರಲು ಸಾಧ್ಯವಿಲ್ಲ ಎಂದು ವಿವರಿಸುವ ಪರಿ ಎಂತಹ ಆಸ್ತಿಕರನ್ನೂ ಚಿಂತೆಗೆ ಹಚ್ಚಿಸುವಂತಿದೆ. ವಿಜ್ಜಾನದ ಬೆಳಕಿನಡಿ ಬರದೇ ಉಳಿದ ಸಂಗತಿಗಳನ್ನೇ ತಮ್ಮ ಆಧಾರವನ್ನಾಗಿ ಬಳಸುವ ಆಸ್ತಿಕರನ್ನು ವಿಶ್ಲೇಷಿಸುತ್ತಾ - ಈಗ ಮುಚ್ಚಿಕೊಳ್ಳುತ್ತಿರುವ gapsಗಳತ್ತ ನಮ್ಮ ಗಮನ ಸೆಳೆಯುತ್ತಾನೆ. ಡಾರ್ವಿನನ ವಿಕಾಸವಾದ ಹೇಗೆ ದೇವರ ಸೃಷ್ಠಿಯೆಂಬ ಕ್ಷುಲ್ಲಕತೆಯಿಂದ ನಮ್ಮ ಮನಸನ್ನು ಬಿಡುಗಡೆಗೊಳಿಸುತ್ತದೆ ಎಂದು ವಿವರಿಸುತ್ತಾನೆ. ಕಾಸ್ಮಾಲಜಿಯ ಹಲವು ಸಂಗತಿಗಳ ಆಧಾರವನ್ನೂ, ಭೂಮಿಯಲ್ಲಿನ ಜೀವ ಜಂತುಗಳ ಉಗಮದ ಸಂಗತಿಯನ್ನು ಪ್ರಾಬಬಲಿಟಿಯ ಬೆಳಕಲ್ಲಿ ವಿವೇಚಿಸುತ್ತಾನೆ.
ಇನ್ನೊಂದು ವಿಶೇಷವೆಂದರೆ, ಧರ್ಮದ ಹುಟ್ಟನ್ನು, ಆ ಹುಟ್ಟಿನ ಅವಶ್ಯಕತೆಯನ್ನು ವೈಜ್ಞಾನಿಕವಾಗಿ ಹುಡುಕುತ್ತಾನೆ. ಆದರೆ, ಆ ಅವಶ್ಯಕತೆಯನ್ನು ಧರ್ಮ ಪೂರೈಸದೇ ಸೋತ ಬಗೆಯನ್ನು ಚೆನ್ನಾಗಿ ತೆರೆದಿಡುತ್ತಾನೆ. ಹಾಗೆಯೇ ನೈತಿಕತೆಯ ಮೂಲವನ್ನೂ ವಿಶ್ಲೇಷಿಸುವುದರ ಮೂಲಕ ಧರ್ಮ, ದೇವರು ನೈತಿಕತೆಯ ಆಧಾರ ಎಂಬುದನ್ನು ಅಲ್ಲಗಳೆಯುತ್ತಾನೆ.
ಹಳೆಯ ಗ್ರಂಥಗಳು, ಅದರಲ್ಲಿನ ನೈತಿಕತೆ, ಅದನ್ನು ಹಾಗೂ ಬದಲಾಗುತ್ತಿರುವ ನೈತಿಕತೆಯನ್ನು ಒಪ್ಪಲಾಗದ ಆಸ್ತಿಕರ ಬಿಕ್ಕಟ್ಟು ಎಲ್ಲದರ ಬಗ್ಗೆಯೂ ಸವಿವರವಾಗಿ ಯೋಚಿಸುತ್ತಾನೆ. ಕಡೆಗೆ, ಧರ್ಮವನ್ನು ಯಾಕೆ ವಿರೋಧಿಸಬೇಕು ಎಂಬ ಪ್ರಶ್ನೆಯನ್ನು ಕೈಗೆತ್ತಿಕೊಳ್ಳುತ್ತಾನೆ. ಧರ್ಮ ತನ್ನ ಪಾಡಿಗೆ ತಾನಿರದೆ ಸಮಾಜದಲ್ಲಿ ತನ್ನ ಕರಾಳ ನೆರಳನ್ನು ಚಾಚುವುದನ್ನೂ ವಿವರಿಸಿ ಅದರಿಂದಾಗುವ ಅಪಾಯದ ಬಗ್ಗೆ ನಮ್ಮನ್ನು ಎಚ್ಚರಿಸುತ್ತಾನೆ.
ಮನುಷ್ಯನ ಸಹಜ ಬೆಳವಣಿಗೆಗೆ ಬೇಕಾದ ತಾರ್ಕಿಕ ಶಕ್ತಿಯನ್ನು ಅಲ್ಲಗಳೆಯುವುದರ ಮೂಲಕ ಧರ್ಮದ ಹಾನಿಯನ್ನು, ಅದು ನಮ್ಮ ಮುಂದಿನ ತಲೆಮಾರಿಗೆ ಮಾರಕವಾಗಿ ಪರಿಣಾಮವೆಸಗುವುದನ್ನು ಬಿಚ್ಚಿಡುತ್ತಾನೆ. ತನ್ನ ಅವೈಜ್ಞಾನಿಕ ಪರಿಭಾಷೆಯ ಮೂಲಕ ಇಂದಿನ ಸಮಾಜದ ಹುಳುಕಾಗಿ ಉಳಿದಿರುವ ಧರ್ಮ ಹಾಗು ದೇವರ ಕಲ್ಪನೆಯ ಬಗ್ಗೆ ನಮ್ಮ ಗಮನ ಹರಿಯುವಂತೆ ಮಾಡುತ್ತಾನೆ.
ಆಸ್ತಿಕರಾಗಲಿ, ನಾಸ್ತಿಕರಾಗಲಿ - ಮನುಷ್ಯನ ಹಾಗು ಆತ ಕಟ್ಟಿಕೊಂಡ ಸಮಾಜದ ಒಳಿತು ಮನಸ್ಸಲ್ಲಿದ್ದರೆ - ಉತ್ತರಿಸಿಕೊಳ್ಳಲೇ ಬೇಕಾದ ಪ್ರಶ್ನೆ ಹಾಗು ಅದಕ್ಕೆ ನಂಟಾದ ಚರ್ಚೆಯನ್ನು ಈ ಪುಸ್ತಕ ಪರಿಣಾಮಕಾರಿಯಾಗಿ ನಡೆಸುತ್ತದೆ.
Comments
ಉ: ದೇವರೆಂಬ ಭ್ರಾಂತು
In reply to ಉ: ದೇವರೆಂಬ ಭ್ರಾಂತು by vasu565
ಉ: ದೇವರೆಂಬ ಭ್ರಾಂತು
In reply to ಉ: ದೇವರೆಂಬ ಭ್ರಾಂತು by ಹೇಮ ಪವಾರ್

In reply to ಉ: ದೇವರೆಂಬ ಭ್ರಾಂತು by anivaasi

In reply to ಉ: ದೇವರೆಂಬ ಭ್ರಾಂತು by thesalimath
ಉ: ದೇವರೆಂಬ ಭ್ರಾಂತು
ಉ: ದೇವರೆಂಬ ಭ್ರಾಂತು
In reply to ಉ: ದೇವರೆಂಬ ಭ್ರಾಂತು by muralihr
ಉ: ದೇವರೆಂಬ ಭ್ರಾಂತು
ಉ: ದೇವರೆಂಬ ಭ್ರಾಂತು
In reply to ಉ: ದೇವರೆಂಬ ಭ್ರಾಂತು by savithru
ಉ: ದೇವರೆಂಬ ಭ್ರಾಂತು
In reply to ಉ: ದೇವರೆಂಬ ಭ್ರಾಂತು by anivaasi
ಉ: ದೇವರೆಂಬ ಭ್ರಾಂತು
In reply to ಉ: ದೇವರೆಂಬ ಭ್ರಾಂತು by savithru
ಉ: ದೇವರೆಂಬ ಭ್ರಾಂತು
In reply to ಉ: ದೇವರೆಂಬ ಭ್ರಾಂತು by anivaasi
ಉ: ದೇವರೆಂಬ ಭ್ರಾಂತು
ಉ: ದೇವರೆಂಬ ಭ್ರಾಂತು
In reply to ಉ: ದೇವರೆಂಬ ಭ್ರಾಂತು by kpbolumbu

In reply to ಉ: ದೇವರೆಂಬ ಭ್ರಾಂತು by Narayana
ಉ: ದೇವರೆಂಬ ಭ್ರಾಂತು
In reply to ಉ: ದೇವರೆಂಬ ಭ್ರಾಂತು by anivaasi
ಉ: ದೇವರೆಂಬ ಭ್ರಾಂತು
In reply to ಉ: ದೇವರೆಂಬ ಭ್ರಾಂತು by Narayana
ಉ: ದೇವರೆಂಬ ಭ್ರಾಂತು
In reply to ಉ: ದೇವರೆಂಬ ಭ್ರಾಂತು by Narayana
ಉ: ದೇವರೆಂಬ ಭ್ರಾಂತು
In reply to ಉ: ದೇವರೆಂಬ ಭ್ರಾಂತು by savithru
ಉ: ದೇವರೆಂಬ ಭ್ರಾಂತು
In reply to ಉ: ದೇವರೆಂಬ ಭ್ರಾಂತು by Narayana
ಉ: ದೇವರೆಂಬ ಭ್ರಾಂತು
ಉ: ನೀವು ಏನಾದರೂ ಅನ್ನಿ. ನಾನು ದೇವರೆನ್ನುವೆ.
ಉ: ದೇವರೆಂಬ ಭ್ರಾಂತು
In reply to ಉ: ದೇವರೆಂಬ ಭ್ರಾಂತು by aniljoshi
ಉ: ದೇವರೆಂಬ ಭ್ರಾಂತು
In reply to ಉ: ದೇವರೆಂಬ ಭ್ರಾಂತು by anivaasi
ಉ: ದೇವರೆಂಬ ಭ್ರಾಂತು
In reply to ಉ: ದೇವರೆಂಬ ಭ್ರಾಂತು by aniljoshi
ಉ: ದೇವರೆಂಬ ಭ್ರಾಂತು
ಉ: ದೇವರೆಂಬ ಭ್ರಾಂತು
In reply to ಉ: ದೇವರೆಂಬ ಭ್ರಾಂತು by roopablrao
ಉ: ದೇವರೆಂಬ ಭ್ರಾಂತು