೩/೩ ಧೋನಿಗೆ ಸಂಚಿನ ಅರಿವಿತ್ತೇ!?

೩/೩ ಧೋನಿಗೆ ಸಂಚಿನ ಅರಿವಿತ್ತೇ!?

೩/೩ ರ ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲಿನ ಬಾಂಬ್‌ದಾಳಿ ಪ್ರಥಮ ಪುಟದ ಸುದ್ದಿಯಾದಾಗ, ಒಳಪುಟದಲ್ಲಿದ್ದ ಒಂದು ಸಣ್ಣ ಸುದ್ದಿ:

“ನಾಯಕನ ನಿರ್ಧಾರದಿಂದ ಪಾಕ್ ತಂಡ ಪಾರು-
ಲಾಹೋರ್- ತಂಡದ ನಾಯಕನ ಕೊನೆಯ ಕ್ಷಣದ ನಿರ್ಧಾರ ಬದಲಾವಣೆಯಿಂದ ಪಾಕಿಸ್ತಾನ ತಂಡ ಕೂಡ ಉಗ್ರರ ದಾಳಿಗೀಡಾಗುವುದು ತಪ್ಪಿದೆ.
ಲಾಹೋರ್‌ನ ಪರ್ಲ್ ಇಂಟರ್‌ಕಾಂಟಿನೆಂಟಲ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಎರಡೂ ತಂಡಗಳು ಸಾಮಾನ್ಯವಾಗಿ ಒಂದೇ ಹೊತ್ತಿಗೆ ಕ್ರೀಡಾಂಗಣಕ್ಕೆ ಹೊರಡುತ್ತಿದ್ದವು. ಮಂಗಳವಾರ ಕೂಡ ಎರಡೂ ತಂಡಗಳು ಬೆಳಗ್ಗೆ ೮-೪೦ಕ್ಕೆ ಜತೆಯಾಗಿಯೇ ಹೊರಡಲು ಉದ್ದೇಶಿಸಿದ್ದವು. ಆದರೆ ಪಾಕ್ ತಂಡದ ನಾಯಕ ಯೂನಿಸ್‌ಖಾನ್ ಕೊನೆಯ ಕ್ಷಣದಲ್ಲಿ ತಂಡದ ಪ್ರಯಾಣವನ್ನು ತಡೆದರು. ತಾವು ಪ್ರತ್ಯೇಕವಾಗಿ ಹೊರಡೋಣವೆಂದು ಯೂನಿಸ್ ಸೂಚಿಸಿದರು.. ..”

ಇದೇ ಘಟನೆ ಭಾರತದಲ್ಲಿ ನಡೆದಿದ್ದು ಧೋನಿ ಭಾರತೀಯ ಆಟಗಾರರನ್ನು ತಡೆದಿರುತ್ತಿದ್ದರೆ.. ..
-“ಶ್ರೀಲಂಕಾ ಆಟಗಾರರ ಮೇಲೆ ಗುಂಡಿನ ದಾಳಿ-ಧೋನಿಗೆ ಸಂಚಿನ ಅರಿವಿತ್ತೇ?”

-“ಟಾರ್ಗೆಟ್ ಶ್ರೀಲಂಕಾ ಕ್ರಿಕೆಟ್-ಧೋನಿ ನಾಟ್ ಔಟ್!?”

-“ಧೋನಿ ಸಾಗಲಿಲ್ಲ ಯಾಕೆ?”
ಹೀಗೆ ಪತ್ರಿಕೆಗಳಲ್ಲಿ ಮುಖಪುಟ ಸುದ್ದಿ ಬರುತ್ತಿತ್ತು.

ನಮ್ಮ ಮಹಾನ್ ಬುದ್ಧಿಜೀವಿಗಳು ಪಟ್ಟಾಗಿ ಟಿ.ವಿ. ಸ್ಟೇಷನ್‌ಗಳಲ್ಲಿ ಕುಳಿತು
-ಧೋನಿ ಕೂದಲು ಬಿಟ್ಟದ್ದು
-೨ ಲೀಟರ್ ದನದ ಹಾಲು ಕುಡಿಯುತ್ತಿದ್ದುದು
-ಕೊಡಗಿನ ದೇವಸ್ಥಾನ ಭೇಟಿ
ಎಲ್ಲಕ್ಕೂ ಹಿಂದೂ ಕನೆಕ್ಷನ್ ಕೊಟ್ಟು, ಮುಗ್ಧ ಭಯೋತ್ಪಾದಕರಿಂದ ಯಾವ ತಪ್ಪೂ ಆಗಿಲ್ಲ ಎಂದು ವಾದಿಸುತ್ತಿದ್ದರು.

ರಾಜಕೀಯ ಪಕ್ಷಗಳು ಧೋನಿ ಫೊಟೋಕ್ಕೆ ಚಪ್ಪಲಿ ಹಾರ ಹಾಕಿ ಸುಡುತ್ತಿದ್ದವು.

ಗಾಯಗೊಂಡ ಶ್ರೀಲಂಕಾ ಆಟಗಾರರನ್ನು ಭೇಟಿ ಮಾಡಲು ಹೋದ ಧೋನಿ (ಯೂನಿಸ್ ಖಾನ್ ಹೋಗಿದ್ದ ವಿಡಿಯೋ ಗಮನಿಸಿದ್ದೀರಾ) ಕಾರಿನ ಮೇಲೆ ಕೈ ಇಟ್ಟು ತಬಲ ಬಾರಿಸಿದ್ದನ್ನು ರೌಂಡ್ ಮಾಡಿ ಆಗಾಗ ಟಿ.ವಿ.ಯವರು ತೋರಿಸಿ ಒಂದೇ ದಿನದಲ್ಲಿ ಧೋನಿಯನ್ನು ದೇಶದ್ರೋಹಿ ಮಾಡುತ್ತಿದ್ದರು .

-ಗಣೇಶ.

Rating
No votes yet

Comments