ಅಳವಡು, ಕೈಗುಳಿಗೆ-4, ಸೀಗುಳಿಗೆ-1

ಅಳವಡು, ಕೈಗುಳಿಗೆ-4, ಸೀಗುಳಿಗೆ-1

Comments

ಬರಹ

ಅಳ+ಪಡು = ಅಳವಡು(ನಿಶ್ಚಿತ)

ಅಳವೆಂಬುದು confirmation ಒದಗಿಸುವ ಒರೆ(ಬಡಗರಿಗೆ ಶರಣು) :)  ಮತ್ತು ಅಳವಡಿಸು  (implement) ಇದರ ಸಾಧಿತ ರೂಪ. ಪ್ರಸ್ತುತ ಈ ರೂಪವೇ ವ್ಯಾಪಕವಾಗಿ ಬೞಕೆಯಲ್ಲಿರುವನ್ತಹುದು.
ಬೞಕೆ:
1. ಎಕ್ಸ್ ಎಂಬುದು ಅಳವಟ್ಟಿತು = ಎಕ್ಸ್ ಎಂಬುದು confirm ಆಯಿತು.
2. ಎಕ್ಸ್ ಎಂಬುದನ್ನು ಅಳವಡಿಸಿದನು = ಎಕ್ಸ್ ಎಂಬುದನ್ನು confirm ಮಾಡಿದನು.
ದ್ರಾವಿಡಾದಿ ಭಾಷೆಗಳಲ್ಲಿ ಈ ಬೞಕೆ ಇರುವನ್ತೆ ತೋರದು.
3. confirm ಮಾಡು ~ ಇದರ ಸಾಧಿತ ರೂಪವೇ implement ಮಾಡು. ಇದನ್ನು ಮನೋಧರ್ಮವೆನ್ದು ಪರಿಗಣಿಸಿದರೂ ಮೂಲವ ಮರೆಯುವನ್ತಿಲ್ಲ.

ಕೈಗುಳಿಗೆ:
'ಉ' ಎಂಬುದು ಹೊಸಗನ್ನಡದಲ್ಲಿ ಒನ್ದನೇ ವಿಭಕ್ತಿಯೆನ್ದು ಪುಸ್ತಕಗಳಲ್ಲಿ ಓದುತ್ತೇವೆ. ಆದರೆ ಕನ್ನಡದಲ್ಲಿ ಪುಲ್ಲಿಂಗಿಗಳು ವ್ಯಂಜನಾನ್ತ ಮತ್ತು ಈ ವ್ಯಂಜನವು 'ಙ' ಮತ್ತು 'ನ'ಗಳ ನಡುವೆ ಉಚ್ಚರಿಸಲ್ಪಡುತ್ತದೆ. ಲಿಂಗವನ್ನು ಹೊನ್ದಿಕೊಣ್ಡು ಪ್ರತ್ಯಯವೂ ಮಾರ್ಪಡುವುದು.
ಬೞಕೆಗಳು:
1. ಕಳ್ಳ<ನ್>- ಕಳ್ಳಿ(ನಪುಂಸಕವಿಲ್ಲ, ಏಕೆನ್ದರೆ ಮನುಷ್ಯನ ಸೂಚಿಸುವ ಒರೆಗಳಿವು).
2. ಕುರುಡ<ನ್>-ಕುರುಡಿ(ವ್ಯಕ್ತಿಸೂಚಕ ಒರೆಗಳಾದುದರಿನ್ದ ನಪುಂಸಕವಿಲ್ಲ).
3. ನಪುಂಸಕಕ್ಕೆ ಅಂ- ಮರಂ, ದೇಶಂ. (ಮರಂ+ಅನ್ನು = ಮರವನ್ನು). ಇನ್ತಹ ಮ-ವ ಪಲ್ಲತಗಳ ಕುರಿತ ಹೆಚ್ಚಿನ ವಿವ್ರಗಳಿಗಾಗಿ ಕೈಗುಳಿಗೆ-ಐದ ಓದುವುದು.
4. ಪ್ರಸ್ತುತ ಕಾಲದಲ್ಲಿ ವ್ಯಂಜನಾನ್ತ ಸ್ತ್ರೀಲಿಂಗಿಗಳೂ ಇವೆ. ಮನೋಧರ್ಮ ಹೇಗೆ ಅಳವಡುತ್ತದೆನ್ದರೆ,

ಬೞಕೆ:

i. ಸುಮನ್(ಸ್ತ್ರೀಲಿಂಗಿ) - ಸುಮನ್ನು.
ii.ಸುಮನ್(ಪುಲಿಂಗಿ) - ಸುಮನು.


5. ಸಂಸ್ಕೃತ ಸ್ತ್ರೀಲಿಂಗಿಗಳು ಕನ್ನಡಕ್ಕಳವಡುವಾಗ 'ಆ' ಎಂಬ ಸ್ವರ 'ಎ' ಆಗಿ ಮಾರ್ಪಡುವುದು.
ಬೞಕೆ: ಸೀತಾ~ ಸೀತೆ. ಕಾವ್ಯ ಪ್ರಯೋಗದಲ್ಲಿ 'ಸೀತಾ' ಸಮ್ಮತ, ಆದರೆ 'ಸೀತ' ಸಮ್ಮತವಲ್ಲ. ಇನ್ದಿನ ಎಕ್ಕಡ ಕನ್ನಡದಲ್ಲಿ 'ಸೀತ'ವೇ ಅಳವಟ್ಟಿದೆ. ಇಲ್ಲಿ 'ಸೀತೆ'ಗೆ ಒನ್ದನೇ ವಿಭಕ್ತಿ ಸೇರಿಬಿಟ್ಟಿದೆ. ಇನ್ನು, 'ಸೀತೆಯು' ಎಂಬುದು ಕುರುಡು ಬೞಕೆಯ ವಿಧಾನ.

ಸೀಗುಳಿಗೆ:
ವಟ್ಟವೆಂಬುದು ಸಂಸ್ಕೃತ 'ವೃತ್ತ'ದ ತದ್ಭವ. (ಬಟ್ಟವೆನ್ದೂ ಇದೆ). ಹಿನ್ದಿನ ಕಾಲದ ನಾಣ್ಯಗಳಿಗೆ ವಟ್ಟವೆನ್ದು ಹೆಸರು. ಉರುಟಾದುದರಿನ್ದ ಈ ಹೆಸರು ಅಳವಟ್ಟಿದೆ. ಉರುಟಾದ ಸಾಮಾನುಗಳನ್ನು ವಟ್ಟಕ್ಕಳವಡಿಸಿ ಕೂಡೊರೆಗಳಾಗಿ ಬೞಸಬಹುದು. ಸುತ್ತು ಹೊಡೆದು ಬಹವೂ ವಟ್ಟಗಳೇ.
ಬೞಕೆ: ಮನೆಗೆಲಸ


ಟಿಪ್ಪಣಿ: ಸೀಗುಳಿಗೆ<<ಸಿಹಿಗುಳಿಗೆ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet