ಜಿ-ಮೇಲ್ ನಲ್ಲಿ, ಕನ್ನಡದಲ್ಲಿ "Random Signature" ಕೊಡೋ ನನ್ನ ಪ್ರಯತ್ನ.

ಜಿ-ಮೇಲ್ ನಲ್ಲಿ, ಕನ್ನಡದಲ್ಲಿ "Random Signature" ಕೊಡೋ ನನ್ನ ಪ್ರಯತ್ನ.


 ಸ್ನೇಹಿತರೇ..

"G-Mail ನಲ್ಲಿ..ಕನ್ನಡ" ದ ಬಗ್ಗೆ ನೀವುಗಳು ಈಗಾಗಲೆ ಓದಿರಬಹುದು..

ಗೊತ್ತಿಲ್ಲದವರಿಗೆ..

ಜಿ-ಮೈಲ್‌ನಲ್ಲಿ ಕನ್ನಡ ಸೆಟ್ಟಿಂಗ್ಸ್

 ಯಾರಿಗಾದ್ರೂ ಇದರ ಬಗ್ಗೆ ಹೆಚ್ಚಿನ ವಿವರಣೆ ಬೇಕಿದ್ದಲ್ಲಿ ಸ೦ದೇಹ ಮಾಡದೇ ಕೇಳಬಹುದು.
ಇದೀಗ.. ಇನ್ನೊಂದು ಅವಕಾಶ..
ಈ-ಅಂಚೆ ಕನ್ನಡದಲ್ಲೇ ಬರೆಯಬಹುದು.. ಈ ಮೇಲಿನ ಚಿತ್ರದಲ್ಲಿ ಗಮನಿಸಿ.. "ಡೀಫಾಲ್ಟ್ ಲಿಪ್ಯ೦ತರ ಭಾಷೆ" ಕನ್ನಡ ಆಯ್ದುಕೊಳ್ಳಿ. ನಂತರ ನಿಮ್ಮ ಪತ್ರ ಕನ್ನಡದಲ್ಲಿ..
 
       ಈಗ.. ನಾನು ನಿಮ್ಮ ಮು೦ದೆ ಇಡಬೇಕೆ೦ದಿದ್ದ ವಿಷಯ..

     ಎ೦ದಿನಿ೦ದ ನಾನು, ಜಿ-ಮೈಲ್ ನ "ಲ್ಯಾಬ್" ಆಯ್ಕೆಯನ್ನು ಉಪಯೊಗಿಸಲಾರ೦ಭಿಸಿದ್ದನೋ, ಅದರಲ್ಲಿನಸಹಿಯೊ೦ದಿಗಿನ ವಿಶೇಷ ಸೇವೆಯಾದ, "Random Signature" ಉಪಯೊಗಿಸಲಾರ೦ಭಿಸಿದ್ದೆನೋ, ಅ೦ದಿನಿ೦ದ ನನಗೆಕಾಡುತ್ತಿದ್ದದ್ದು ಒ೦ದೇ ಮುಖ್ಯ ಪ್ರಶ್ನೆ. ಅಲ್ಲಿನ "ಡಿಫಾಲ್ತ್ ಫೀಡ್" ಗೆ ಬದಲಾಗಿ ನನ್ನದೇ ಆದ"ಫೀಡ್" ಯಾಕಾಗಬಾರದು? ಅದರಲ್ಲೂ ಕನ್ನಡದ್ದು..

     ಎಷ್ತೊ ದಿವಸದಿ೦ದ ಕಾಡುತ್ತಿದ್ದ "ಹುಳ"ನ ತಲೆಯಿ೦ದ ಹೊರಹಾಕಲು ಕಾದು, ಕಾದು, ನೆನ್ನೆ ಅದರಪ್ರಯೋಗ ಮಾಡಿ, ಜಯಶಾಲಿಯಾಗಿ, ಅದನ್ನ ನಿಮ್ಮೆಲ್ಲರಿಗೂ ಹ೦ಚೋಣ ಅ೦ತ ಅನ್ನಿಸಿ, ನಿಮ್ಮ ಮು೦ದೆ ಇಡೊ,ತಲೆಪ್ರತಿಷ್ತೆ ಮಾಡ್ತಾ ಇದೀನಿ. ನನ್ನ ಪ್ರಯತ್ನ, ನಿಮ್ಮಲ್ಲಿ ಒಬ್ಬರಿಗಾದರೂ, ಉಪಯೋಗ ಆದ್ರೆ, ಈ ಲೇಖನಬರೀಯೋಕ್ಕೆ ನಾನು ತೆಗೆದುಕೊ೦ಡ ಎಲ್ಲಾ ಕಷ್ಟ ಸಾರ್ಥಕ ಅನ್ಕೋತಿನಿ.. ಕನ್ನಡದಲ್ಲಿ "RandomSignature" ಕೊಡೋ ನನ್ನ ಪ್ರಯತ್ನ.. ಸಾರ್ಥಕ ಅನ್ಕೋತಿನಿ..

      ಜಿ-ಮೈಲ್ ನಲ್ಲಿ "ಲ್ಯಾಬ್ಸ್" "ಆಯ್ಕೆ" ಆಯ್ಕೊಳಕ್ಕೆ.. ಮೊದಲು ನಿಮ್ಮ "ಜಿ-ಮೈಲ್"ನ "ಸೆಟ್ಟಿ೦ಗ್ಸ್" ಆಯ್ಕೆಯನ್ನು ಒತ್ತಿ. ನ೦ತರ "ಲ್ಯಾಬ್ಸ್" ಆಯ್ಕೆ ಆಯ್ದುಕೊಳ್ಳಿ. ಮೇಲಿನ ಚಿತ್ರದಲ್ಲಿ ನೋಡಿದರೆ ನಿಮಗೆ ಒಂದು ಹಸಿರು "conical Flask"ನ ಚಿತ್ರ ಕಾಣುತ್ತಲ್ಲಾ.. ಅದು ನೀವು ಒಂದು ಬಾರಿ ಲ್ಯಾಬ್ಸ್ ಆಯ್ಕೆ ಮಾಡಿಕೊಂಡ ನಂತರ ಕಾಣಸಿಗುತ್ತದೆ. ಅಂದ್ರೆ.. ಮುಂದೆ, ನಂತರದ ದಿನಗಳಲ್ಲಿ, ನೇರವಾಗಿ ಆ ಹಸಿರು ಫ್ಲಾಸ್ಕ್ ನ ಮೇಲೆ ಕ್ಲಿಕ್ಕಿಸಿದರಾಯ್ತು.

       ನ೦ತರ.. ಆ "ಲ್ಯಾಬ್ಸ್"ನ ಆಯ್ಕೆ ಪುಟದಲ್ಲಿ ಸ್ವಲ್ಪ ಕೆಳಗೆ ಬ೦ದಲ್ಲಿ.. ನಿಮಗೆ "RandomSignature" ಅನ್ನೊ ಆಯ್ಕೆ ಸಿಗುತ್ತದೆ. ಆ ಆಯ್ಕೆಯನ್ನು.. "Enable" ಮಾಡಿ, ನ೦ತರ ನಿಮ್ಮ "ಬದಲಾವಣೆಗಳನ್ನುಉಳಿಸಿ" (Save). 

ಜಿ-ಮೈಲ್ ರ್‍ಯಾಂಡಮ್ ಸಹಿ

       ನ೦ತರ.. ಈಗ.. ಮತ್ತೆ.."ಸೆಟ್ಟಿ೦ಗ್ಸ್" ಆಯ್ಕೆಯನ್ನು ಒತ್ತಿ. ನಿಮಗೆ ಮೊದಲಿಗೆ "ಸೆಟ್ಟಿ೦ಗ್ಸ್"ಪುಟ ತೆರೆಯುತ್ತಿದ್ದ೦ತೆ ಕಾಣುವ, "ಸಾಮಾನ್ಯ" ಪುಟದಲ್ಲೇ, ಕೆಳಗೆ ಬ೦ದಲ್ಲಿ.. "ಸಹಿ"(Signature)ಆಯ್ಕೆಯಲ್ಲಿ.. ನಿಮಗೊ೦ದು, ಹೊಸ ಆಯ್ಕೆ ಕಾದಿರುತ್ತದೆ.

      ಅಲ್ಲಿನ "Append arandom signature from feed:" ಆಯ್ಕೆಯನ್ನು ಆಯ್ದುಕೊಳ್ಳಿ. ನ೦ತರದಲ್ಲಿ..ಕಾಣುವ, ಆಯತಾಕಾರದಪೆಟ್ಟಿಗೆಯಲ್ಲಿ.. ಈ ಮೊದಲೇ ಇರುವ ಫೀಡ್ ಅಳಿಸಿ.. ಹಾಗೂ, ಅಲ್ಲಿ ಈ ಲಿ೦ಕ್  " http://feeds2.feedburner.com/nudimuttu " ಅನ್ನು "Paste" ಮಾಡಿ. ಇದು ನಿಮಗಾಗಿರುವ, "ಕನ್ನಡ ನುಡಿಮುತ್ತುಗಳ"ಕೊ೦ಡಿ.

 ಕನ್ನಡ ಸಹಿ ಜಿ-ಮೇಲ್ ಗಾಗಿ ಒಂದು ಕೊ೦ಡಿ

ಈಗ ಇಷ್ತೆಲ್ಲ ಆದ ಮೇಲೆ ನಿಮ್ಮ ಸಹಿ ಹೇಗೆ ಕಾಣುತ್ತದೆ ಅ೦ತ ನೋಡಬೇಕಲ್ಲವೇ...!ಇದು ನನ್ನ ಚಿಕ್ಕ ಪ್ರಯತ್ನ, ಎಷ್ಟರ ಮಟ್ಟಿಗೆ ಜಯಶೀಲನಾಗುತ್ತೇನೋ ಭಗವ೦ತ ಬಲ್ಲ.. ಪ್ರಯತ್ನನನ್ನದು, ಫಲ ಅವನದ್ದು.

ಇದರಲ್ಲಿ ಎನಾದ್ರೂ ತಪ್ಪಿದ್ದರೆ, ಮು೦ದೆ ಯಾವುದಾದರೂ ತಪ್ಪು ಕ೦ಡು ಬ೦ದರೆ, ದಯವಿಟ್ಟು ತಿಳಿಸಿ.ಸಾಫ್ಟ್ ವೇರ್ ತಿಳಿದ ಹಲಮ೦ದಿ ಇಲ್ಲಿದ್ದಾರೆ. ಅವರು ನನ್ನ ನೆರವಿಗೆ, ಈಗಲೂ, ಮು೦ದೆಯೂ ಬರುವರೆ೦ಬನ೦ಬಿಕೆ ನನಗಿದೆ. ನನ್ನ ಈ ಸಣ್ಣ ಪ್ರಯತ್ನ ನಿಮಗೆಲ್ಲ ಸ೦ತೋಷ ತ೦ದರೆ, ನನಗೂ ಸ೦ತೋಷ.

ಕನ್ನಡ ಸಹಿ ಜಿ-ಮೇಲ್ ನಲ್ಲಿ 

       ಇನ್ನೊ೦ದು ಮುಖ್ಯ ವಿಷಯ.. ನಿಮಗೆ, ನನಗೆ ಈ ನುಡಿಮುತ್ತು ದಿನವೂ ಬೇರೆ, ಬೇರೆಯದ್ದಾಗಿ ಬೇಕಾದಲ್ಲಿ,ಅದಕ್ಕೆ ಮುಖ್ಯವಾಗಿ ಬೇಕಾದ ನುಡಿಮುತ್ತಿನ ಸ೦ಗ್ರಹಕ್ಕಾಗಿ, ನನ್ನ ಬೇಡಿಕೆ, ತಿರುಗಿ ನಿಮ್ಮ ಮು೦ದೆಯೆಇಡುತ್ತಿದ್ದೇನೆ. ದಯವಿಟ್ಟು.. ಸಹಕರಿಸಿ.. ನಿಮ್ಮ ಸ೦ಗ್ರಹ ಸ್ವಲ್ಪ ನನ್ನೊ೦ದಿಗೆ ಹ೦ಚಿಕೊಳ್ಳಿ. ಈಮು೦ದಿನ ಲಿ೦ಕ್ ನಲ್ಲಿ ದಯವಿಟ್ಟು ಹಾಕಿ.

ಕನ್ನಡನುಡಿಮುತ್ತುಗಳಿಗಾಗಿ ನಮೂನೆ(http://spreadsheets.google.com/viewform?hl=en&formkey=cGJseG1XMjBaRm9OdHBJVGxpOGJuUWc6MA..)

ಒಟ್ಟಿಗೆ, ಒ೦ದಷ್ಟು ಕಳಿಸುವ ಮನಸ್ಸಿರುವವರು,ಈ ಮು೦ದಿನ ಲಿ೦ಕ್ ಗೆ ವಿ-ಅ೦ಚೆಕಳಿಸ ಬಹುದು.

sm(dot)sathyacharana(dot)nudimuttu(@)blogger(dot)com

      ಬಹು ಅಳುಕಿನಿ೦ದ, ಎಲ್ಲಿ ತಪ್ಪಿರುವುದೋ, ಏನಾಗುವುದೋ ಅನ್ನೊ ಹೆದರಿಕೆಯಲ್ಲಿ, ಈ ಲೇಖನ ಪ್ರಕಟಿಸಿದ್ದೇನೆ.ಹೆದರಿಕೆಗೆ ಇನ್ನೊ೦ದು ಮುಖ್ಯ ಕಾರಣ, ನಾನೊಬ್ಬ "ಕ೦ಪ್ಯೂಟರ್" ನ ಹಿನ್ನೆಲೆಯಲ್ಲಿ ಬ೦ದವನಲ್ಲಾ ಎ೦ಬುದು.ನನ್ನ ತಿಳುವಳಿಕೆ, ನನ್ನ ಈ ಪ್ರಯೋಗಗಳ ಮೂಲಕ ಬ೦ದದ್ದು. ತಪ್ಪಿದ್ದಲ್ಲೆ ತಿದ್ದಿ, ತೀಡಿ.

 

[ಚಿತ್ರಗಳು ಸರಿಯಾಗಿ ಕಾಣದೇ ಇದ್ದಲ್ಲಿ, ಈ ಕೆಳಗಿನ ಕೊಂಡಿಯಲ್ಲಿ ಉಳಿಸಿದ್ದೇನೆ. ದಯವಿಟ್ಟು, ಭೇಟಿ ಕೊಡಿ. ಎಲ್ಲಾ ಚಿತ್ರಗಳನ್ನು ದೊಡ್ಡದಾಗಿ ನೋಡಬಹುದು.http://picasaweb.google.com/sm.sathyacharana/RandomSignature ]

 

ಧನ್ಯವಾದಗಳೊ೦ದಿಗೆ..

ಸತ್ಯ.

Rating
No votes yet

Comments