ಮೂಢ (ವಲ್ಲದ) ನಂಬಿಕೆಗಳು...!

ಮೂಢ (ವಲ್ಲದ) ನಂಬಿಕೆಗಳು...!

ಯೋಗದ ಕುರಿತಾಗಿ ನಾನು ಬರೆದಿದ್ದ ಲೇಖನಕ್ಕೆ ಬಂದ ಉತ್ತಮ ಪ್ರತಿಕ್ರಿಯೆಗಳು, ನಡೆದ ಸಂವಾದ-ಚರ್ಚೆಗಳು ಇವೆಲ್ಲದಕ್ಕೂ ಪೂರಕವಾಗುವಂತೆ, ಸಂಪದಿಗ ಮಿತ್ರರ ಹಾಗೂ ನನ್ನ ವೈಯುಕ್ತಿಕ ಬಯಕೆಯಂತೆ ಈ ಒಂದು ಬ್ಲಾಗ್ ಬರಹವನ್ನು ಆರಂಭಿಸುತ್ತಿದ್ದೇನೆ. ತೆರೆದ ಮನಸಿನ, ಯಾರನ್ನೂ ನೋಯಿಸದ ಮತ್ತು ಕಲಿಯುವ-ತಿಳಿಯುವ ಉದ್ದೇಶದಿಂದ ಚರ್ಚೆ, ವಿಚಾರ ವಿನಿಮಯ ನಡೆಯುತ್ತದೆಂದು ಆಶಿಸುತ್ತೇನೆ.

ಈ ಮೂಢ (ವಲ್ಲದ) ನಂಬಿಕೆಗಳ ಬಗ್ಗೆ ನನ್ನ ವಿಚಾರಗಳನ್ನು ಹೇಳುವ ಮೊದಲು ಅವುಗಳನ್ನೊಂದು ಪಟ್ಟಿ ಮಾಡೋಣ. ನಂತರ ಎಲ್ಲರೂ ಅವುಗಳ ಬಗ್ಗೆ ತಮ ತಮಗೆ ಗೊತ್ತಿರುವ ವಿಚಾರಗಳನ್ನೂ, ಅಭಿಪ್ರಾಯಗಳನ್ನೂ ವಿನಿಮಯ ಮಾಡಿಕೊಳ್ಳೋಣ. ಸರಿಯಲ್ಲವೇ? ಈ ಪಟ್ಟಿಗೆ ನೀವುಗಳೂ ಸೇರಿಸಬಹುದು. ಹಾಗೆಯೇ, ನನ್ನ ಅಭಿಪ್ರಾಯದಲ್ಲಿ, ಯಾವುದೇ ಆಚರಣೆಯನ್ನೂ ’ಮೂಢ’ ಎನ್ನುವ ಮೊದಲು ಅಥವಾ ’ಮೂಢವಲ್ಲ’ ಎನ್ನಲು, ಸರಿಯಾದ ಕಾರಣ, ಮಾಹಿತಿಗಳನ್ನು ಹುಡುಕುವುದು ಒಳಿತು.

೧. ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಹಾಕುವುದು ಒಳ್ಳೆಯದು.

  • ಕಾರಣ: ಇದು ಅತ್ಯುತ್ತಮವಾದ ಆಮ್ಲಜನಕವನ್ನು ನೀಡುತ್ತದೆ ಹಾಗೂ ಇವುಗಳನ್ನು ಪೂಜಾದೃಷ್ಟಿಯಿಂದ ನೋಡುವುದರಿಂದ ಇಂತಹ ಮಹತ್ತ್ವದ ಸಂಪತ್ತಿನ ರಕ್ಷಣೆ ಆಗುತ್ತದೆ. (ಒಂದು ಉದಾಹರಣೆ ಮಾತ್ರ, ಹೀಗೆ ಮುಂದುವರಿದರೆ ಆಗಬಹುದಲ್ಲವೇ?)

೨.  ಆಯುರ್ವೇದ ಮತ್ತು ಯೋಗ ಕೇವಲ ಹಿಂದುಗಳ ಶಾಸ್ತ್ರ.

೩.  ೧೩ ಎಂಬುದು ಅಶುಭ ಸಂಖ್ಯೆ.

೪. ಮಂಗಳವಾರ ಕ್ಷೌರಕ್ಕೆ ಅಪ್ರಶಸ್ತ.

೫. ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಬಾರದು.

೬. ಎಡದ ಮಗ್ಗುಲಲ್ಲಿ ಮಲಗಿದವರು ಏಳಬಾರದು.

೭. ಬಲದ ಕೈ ಶ್ರೇಷ್ಠ

೮. ಊಟವಾದ ಕೂಡಲೇ ಸ್ನಾನ ಮಾಡಬಾರದು

೯. ಪ್ರಯಾಣಕ್ಕೆ ಬೆಕ್ಕು ಅಡ್ಡ ಬಂದರೆ ಅಪಶಕುನ ( ಯಾರಿಗೆ?!)

೧೦. ಕಾಗೆ, ಗೂಬೆ, ನಾಯಿ, ನರಿಗಳ ಕೂಗು / ಊಳಿಡುವಿಕೆ ಅಶುಭ ಸೂಚಕ

೧೧. ರಜಸ್ವಲೆ ಸ್ತ್ರೀಯನ್ನು ಮುಟ್ಟಬಾರದು, ಪ್ರತ್ಯೇಕವಾಗಿರಿಸಬೇಕು.

೧೨. ಮಡಿ, ಶುದ್ಧ, ಎಂಜಲು, ಮುಸುರೆ ಇತ್ಯಾದಿ ಆಚರಣೆಗಳು.

೧೩. ಮಂತ್ರಗಳಿಗೆ ವಿಶೇಷ ಶಕ್ತಿಯಿದೆ.

೧೪. ದೇವರನ್ನು ನಂಬಬೇಕೇಕೆ?

೧೫. ವಿಗ್ರಹಾರಾಧನೆ ಏಕೆ ಬೇಕು?

ಸದ್ಯಕ್ಕೆ ಇಷ್ಟು ಸಾಕು ಎನಿಸುತ್ತಿದೆ.

ನಿಮ್ಮ ಸ್ನೇಹಪೂರ್ಣ ಚರ್ಚೆಯನ್ನು ಇದಿರು ನೋಡುತ್ತೇನೆ.

 

Rating
No votes yet

Comments