ಒಂದು ಖಾಸ್ ಅನಿಸಿಕೆ - ಸಿಟ್ಟಿಗೇಳದೆ, ಸಿಟ್ಟಿಗೆಬ್ಬಿಸದೇ ಬರೆಯುವ ಬಗ್ಗೆ

ಒಂದು ಖಾಸ್ ಅನಿಸಿಕೆ - ಸಿಟ್ಟಿಗೇಳದೆ, ಸಿಟ್ಟಿಗೆಬ್ಬಿಸದೇ ಬರೆಯುವ ಬಗ್ಗೆ

ಯಾವುದೇ ವಿಷಯವನ್ನು ಸಮಾಧಾನಚಿತ್ತದಿಂದ, ಸಿಟ್ಟಿಗೇಳದೆ ಕೇಳುವ (ಅಥವಾ ಸಂಪದ ದಲ್ಲಿ ಬರುವ ಬರಹ, ಪ್ರತಿಕ್ರಿಯೆಗಳ ಮಟ್ಟಿಗೆ ಹೇಳುವದಾದರೆ 'ಓದುವ ಅಥವಾ ಬರೆಯುವ ') ಸಾಮರ್ಥ್ಯವುಳ್ಳವರೇ ನಿಜವಾದ ವಿದ್ಯಾವಂತರು.

(ಅಮೆರಿಕದ ಕವಿ ರಾಬರ್ಟ್ ಫ್ರಾಸ್ಟ್ (೧೮೭೪-೧೯೬೩): Education is the ability to listen to almost anything without losing your temper or your self-confidence.)

ಈ ಅಳತೆಗೋಲಿನಿಂದ ನೋಡಿದರೆ ಸಂಪದಿಗರಲ್ಲೊಬ್ಬನಾದ ನಾನು ಕೂಡ ಇನ್ನೂ ಅವಿದ್ಯಾವಂತನೇ ಸರಿ.
ಯಾವುದೇ ಉದ್ವೇಗಕ್ಕೊಳಗಾಗದೆ, ಇನ್ನೊಬ್ಬರನ್ನು ಕೆರಳಿಸದೇ ಬರೆಯಲು, ಪ್ರತಿಕ್ರಿಯಿಸಲು ಕಲಿಯುತ್ತಿದ್ದೇನೆ.

ಈ ಬಗ್ಗೆ ಸಂಪದದಲ್ಲಿ ನಾನು ಮೆಚ್ಚಿಕೊಂಡಿರುವ ಇಬ್ಬರು ಮಹನೀಯರು: ಶ್ರೀ ಅಶೋಕ್ ಕುಮಾರ್ ಹಾಗೂ
ಸಂಪದದಲ್ಲಿ ಎರಡು ವರ್ಷ ಮುಗಿಸಿದ ಶ್ರೀ ಹಂಸಾನಂದಿಯವರುಗಳು. ಇಬ್ಬರಿಗೂ ನನ್ನ ಕೃತಜ್ಞತೆಗಳು.
ಇನ್ನೂ ಅನೇಕರು ಖಂಡಿತವಾಗಿಯೂ ಇದ್ದಾರೆ, ನೆನಪು ಮಾಡಿಕೊಳ್ಳಬೇಕು ಅಷ್ಟೇ!

Rating
No votes yet

Comments