ನನ್ನ ಕಚ್ತೀಯಲ್ಲಾ

ನನ್ನ ಕಚ್ತೀಯಲ್ಲಾ

ನೆನ್ನೆ ಸಾಯಂಕಾಲ ಮನೇಲಿದ್ದು ಬೋರ್ ಆಗಿತ್ತು (ಒಮ್ಮೊಮ್ಮೆ ಆಗತ್ತಲ್ಲಾ) ನಡೀರಿ ಹೊರಗಡೆ ಎಲ್ಲಾದರೂ ಸುತ್ತಾಡಿ ಬರೋಣವೆಂದು ನಮ್ಮೆಜಮಾನರ ಜೊತೆ ಹೊರಟೆ. ಎಲ್ಲಿ ಹೋಗುವುದು ನಮ್ಮೂರಲ್ಲೋ ವಿಪರೀತ ಟ್ರಾಫಿಕ್ (ಈಗ ಎಲ್ಲಾ ಸಿಟಿ ಹಣೇಬರಹ ಇದೆ) ರಸ್ತೆ ಪಕ್ಕದಲ್ಲಿ ಹೋಗುತ್ತಿದ್ದಾಗ ಮಧ್ಯದಲ್ಲಿ ದೊಡ್ಡ ನಾಯಿಯೊಂದು ನಿಂತಿತ್ತು. ನಾನು ಹೋಗುವುದಕ್ಕೂ ಅದು ನನ್ನತ್ತ ತಿರುಗುವುದಕ್ಕೂ ಸರಿಹೋಯಿತು. ದೊಡ್ಡ ಗಾತ್ರ, ದೊಡ್ಡಬಾಯಿ ಒಂದು ಕ್ಷಣ ಭಯವಾಯಿತು. ಅಷ್ಟೊತ್ತಿಗೆ ನಮ್ಮನೆಯವರು ಈ ಕಡೆ ಬಾ ಅದು ಕಚ್ಚಿದರೆ?
ನಾನು:- ಕಚ್ಚುದ್ರೆ ಏನಾಗತ್ತೆ?
ಯಜಮಾನರು:- ನಿನ್ನನ್ನು ಆಸ್ಪತ್ರೆಗೆ ಕರ್ಕೊಂಡು ಹೋಗ್ಬೇಕಲ್ಲಾ
ಅಬ್ಬ ನಾನಂದ್ರೆ ಎಷೋಂದು ಕಾಳಜಿ ಮನಸ್ಸಿನಲ್ಲೇ ಉಬ್ಬಿದೆ
ರಸ್ತೆ ದಾಟಿದಮೇಲೆ ಕೇಳಿದೆ ಏನ್ರೀ ಇಷ್ಟೊಂದು ಕಾಳಜಿ ಇದೆ ನನ್ನಮೇಲೆ
ಇಲ್ಲದೇ ಇರತ್ಯೇ ಮೊದ್ಲು ನನ್ನ ಕಚ್ತೀಯಲ್ಲ
ಬಲೂನಿಗೆ ಪಿನ್ನು ಚುಚ್ಚಿದಂತಾಯ್ತು ನನ್ನಸ್ಥಿತಿ
ಹಾಸ್ಯ

ಸೀತ ಆರ್. ಮೊರಬ್

Rating
No votes yet

Comments