ಸುಸ್ಥಿರ ಕೃಷಿಯೆಡೆಗೆ ಸಮಗ್ರ ಹೆಜ್ಜೆ

ಸುಸ್ಥಿರ ಕೃಷಿಯೆಡೆಗೆ ಸಮಗ್ರ ಹೆಜ್ಜೆ

ಐಡಿಎಫ್ ಸಂಸ್ಥೆಯು ಒಂದು ಸಾರ್ವಜನಿಕ ಧತ್ತಿ ಸಂಸ್ಥೆಯಾಗಿದ್ದು. ಕಳೆದ ಏಳು ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಲವಾರು ಅಭಿವೃದ್ಧಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಪ್ರಸ್ತುತ ಸಂಸ್ಥೆಯು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಹಲವು ಹಳ್ಳಿಗಳಲ್ಲಿ ಒಂದು ಹೊಸ ಪ್ರಯೋಗಕ್ಕೆ ಅಡಿ ಇಕ್ಕಿದೆ. ರೈತರನ್ನು ಅದರಲ್ಲೂ ಸಣ್ಣ ಮತ್ತು ಅತಿಸಣ್ಣ ರೈತರನ್ನು ಜಂಟಿ ಬಾಧ್ಯತಾ ಗುಂಪುಗಳಾಗಿ ಸಂಘಟಿಸಿ ಅವರಿಗೆ ರೈತ ಕ್ಷೇತ್ರ ಪಾಠಶಾಲೆಗಳ ಮೂಲಕ ಕಡಿಮೆ ಖರ್ಚಿನ ಸುಸ್ಥಿರ ಕೃಷಿ ತಂತ್ರಜ್ನಾನವನ್ನು ಪಸರಿಸಲಾಗುತ್ತಿದೆ. ಹಾಗೆಯೇ ಗ್ರಾಮೀಣ ಮಹಿಳೆಯರನ್ನು ಸ್ವಸಹಾಯ ಸಂಘಗಳಾಗಿ ಸಂಘಟಿಸಿ ಆ ಮೂಲಕ ಅವರು ಹಲವು ಬಗೆಯ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ. ಈ ಎರಡೂ ರೀತಿಯ ಚಟುವಟಿಕೆಗಳಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಐ.ಡಿ.ಎಫ್.ಎಂ.ಎನ್.ಎಫ್. ಹಣಕಾಸು ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಾಲ ಮತ್ತಿತರ ಹಣಕಾಸು ನೆರವನ್ನು ನೀಡಲಾಗುತ್ತಿದೆ. ಸುಜೀವನ ಹೆಸರಿನಲ್ಲಿ ಅನುಷ್ಠಾನ ಮಾಡಲಾಗುತ್ತಿರುವ ಈ ಯೋಜನೆಯಿಂದ ಸುಭದ್ರ ಸುಲಲಿತ ಗ್ರಾಮೀಣ ಜೀವನಕ್ಕೆ ದಾರಿಯಾಗಬೇಕು ಎಂಬುದು ಇದರ ಆಶಯವಾಗಿದೆ.

Rating
No votes yet

Comments