ಎಮ್.ಎನ್.ಪಿ ಬಗ್ಗೆ ನಿಮ್ಮ ಅಭಿಪ್ರಾಯ

ಎಮ್.ಎನ್.ಪಿ ಬಗ್ಗೆ ನಿಮ್ಮ ಅಭಿಪ್ರಾಯ

Comments

ಬರಹ

ಮೊನ್ನೆ ಆಕಾಶವಾಣಿಯಲ್ಲಿ ಮೊಬೈಲ್ ನಂಬರ್ ಪೊರ್ಟಬಿಲಿಟಿ [MNP] ಬಗ್ಗೆ ಜಾಹೀರಾತು ಕೇಳಿದೆ. ಅಂದರೆ ನಿಮ್ಮ ಮೊಬೈಲ್ ನಂಬರನ್ನು ಬೇರೆ ಯಾವುದೆ service providerಗೆ ಮಾರ್ಪಾಡಿಸಬಹುದು. ಇದಕ್ಕೆ ಸೇವಾ ಶುಲ್ಕ ಕೂಡ ಇಲ್ಲವಂತೆ. ಇದು ಒಂದು ಉತ್ತಮ ಸೌಲಭ್ಯ ಎಂಬ ಅನಿಸಿಕೆ ನನ್ನದು. ಸ್ನೇಹಿತನನ್ನು ಕೇಳಿದಾಗ "ಕೆಲವೊಮ್ಮೆ service provider ತನ್ನ ಗ್ರಾಹಕರಿಗೆ ಉಚಿತ ಮೊಬೈಲ್ ಕರೆಗಳನ್ನು ನೀಡುತ್ತಾನೆ. ಆಗ ಸಂಖ್ಯೆಯ ಮಧ್ಯೆ ಗೊಂದಲಗಳು ಕಾಣಿಸಿಕೊಳ್ಳಬಹುದು" ಎಂದನು. ಅಂದರೆ ೯೮೪೫... ಯವನು ಮತ್ತೊಬ್ಬ ೯೮೪೫... ಯವನಿಗೆ ಕರೆ ಮಾಡಿದರೆ service provider ಬೇರೆ ಇರಬಹುದು. ಗೊತ್ತಿಲ್ಲದೆ ಸುಮಾರು ಬಾರಿ ಕರೆ ಮಾಡಬಹುದು. ಆಗ ಬಿಲ್ಲುಗಳು ಸಿಕ್ಕಾಪಟ್ಟೆ ಬರುವ ಸಾಧ್ಯತೆ ಇರುತ್ತದೆ[ಪೊಸ್ಟ್-ಪೇಯ್ಡ್ ಸಂಪರ್ಕ]. ಈ ತರಹದ ಗೊಂದಲಗಳು ಹೋಗಲು ಸ್ವಲ್ಪ ಸಮಯ ಹಿಡಿಯಬಹುದು.

ಈ ಸೇವೆಯ ಬಗ್ಗೆ ನಿಮ್ಮ ಅನಿಸಿಕೆ ಏನು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet