ಆನಂದಭೈರವಿ - ಚಲನಚಿತ್ರ

ಆನಂದಭೈರವಿ - ಚಲನಚಿತ್ರ

ಆನಂದ ಭೈರವಿ ಚಿತ್ರ ೧೯೮೨ರಲ್ಲಿ ಬಿಡುಗಡೆಯಾಯಿತು.

ಸಂಗೀತಕ್ಕೆ ಮತ್ತು ನೃತ್ಯಕ್ಕೆ ಹೆಚ್ಚು ಮಹತ್ವವಿದ್ದ ಚಿತ್ರವಿದು.

ಈ ಚಿತ್ರವನ್ನು "ಕನ್ನಡಚಿತ್ರರಂಗದ ಕುಳ್ಳ" ಎಂಬ ಖ್ಯಾತಿ ಪಡೆದಿರುವ ದ್ವಾರಕೀಶ್ ಅವರು ನಿರ್ಮಿಸಿದರು.

ಈ ಚಿತ್ರದ ಎಲ್ಲಾ ಹಾಡುಗಳು ತುಂಬಾ ಸೊಗಸಾಗಿವೆ.

ಈ ಚಿತ್ರಕ್ಕೆ ಸೋರಟ್ ಅಶ್ವಥ್ ಅವರ ಸಾಹಿತ್ಯ ಹಾಗೂ ರಮೇಶ್ ನಾಯ್ಡು ಅವರ ಸಂಗೀತವಿದೆ.

ಹಿನ್ನೆಲೆಗಾಯನದಲ್ಲಿ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ವಾಣಿ ಜಯರಾಂ ರಾರಾಜಿಸಿದ್ದಾರೆ.

ಈ ಚಿತ್ರದಲ್ಲಿ ಗಿರೀಶ್ ಕಾರ್ನಾಡ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಬರುವ ಮೊದಲ ಹಾಡು ಇದು.

"ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ
ದಿನವೆಲ್ಲಾ ಹೋರಾಟ ಲೋಕದಲ್ಲಿ
ದಿನವೆಲ್ಲಾ ಹೋರಾಟ ಲೋಕದಲ್ಲಿ..." 

ಈ ಹಾಡಿನಲ್ಲಿ ಭೈರವಿ ದೊಂಬರಾಟ ಆಡ್ತಿರ್ತಾಳೆ.

ಮುಂದಿನ ಹಾಡು
"ಬ್ರಹ್ಮಾಂಜಲಿ..."(ಮುಂದೆ ಗೊತ್ತಿಲ್ಲ). :(

ಈ ಹಾಡಿನಲ್ಲಿ ಭೈರವಿಗೆ ಗಿರೀಶ್ ಕಾರ್ನಾಡ್ ನೃತ್ಯಾಭ್ಯಾಸ ಪ್ರಾರಂಭ ಮಾಡ್ತಾರೆ.

ಈ ಹಾಡಿನ ನಂತರ ಬರುವ ಹಾಡು

"ಚೈತ್ರದ ಕುಸುಮಾಂಜಲಿ
ಚೈತ್ರದ ಕುಸುಮಾಂಜಲಿ
ಪಂಚಮ ಸ್ವರದಲಿ ಪ್ರೌಢ ಕೋಗಿಲೆಯ
ಪಂಚಮ ಸ್ವರದಲಿ ಪ್ರೌಢ ಕೋಗಿಲೆಯ
ಕರೆಯೇ ಮನೋಲ್ಲಾಸ ಅಮೃತವರ್ಷಿಣಿ
ಕರೆಯೇ ಮನೋಲ್ಲಾಸ ಅಮೃತವರ್ಷಿಣಿ..."

ಈ ಹಾಡಿನಲ್ಲಿ ಗಿರೀಶ್ ಕಾರ್ನಾಡ್ ಅವರ ನೃತ್ಯ ತುಂಬಾ ಚೆನ್ನಾಗಿದೆ.
ಗಿರೀಶ್ ಕಾರ್ನಾಡರ ನರ್ತನಾ ಸಾಮರ್ಥ್ಯ ಇದರಲ್ಲಿ ನೋಡಬಹುದು.

ನಂತರ ಬರುವುದು ಈ ಯುಗಳ ಗೀತೆ

"ಹಾಡುವ ಮುರಳಿಯ ಕುಣಿಯುವ ಗೆಜ್ಜೆಯ
ಎದೆಯಲಿ ಒಂದೇ ರಾಗ
ಅದು ಆನಂದ ಭೈರವಿ ರಾಗ
ಕರೆಯುವ ಕೊಳಲಿನ ನಲಿಯುವ ಗೆಜ್ಜೆಯ
ಎದೆಯಲಿ ಪ್ರೇಮ ಪರಾಗ
ಅದು ಆನಂದ ಭೈರವಿ ರಾಗ..."

ಈ ಹಾಡು ಆನಂದ ಹಾಗು ಭೈರವಿ ಅವರ ಮೇಲೆ ಚಿತ್ರಿತವಾಗಿದೆ.

ನಂತರ ಬರುವ ಹಾಡು
"ಮಲಗಿರುವೆಯಾ ರಂಗನಾಥ..." (ಮುಂದೆ ಗೊತ್ತಿಲ್ಲ). :(

ಮಾಳವಿಕಾ ಅವರ ನರ್ತನಾ ಸಾಮರ್ಥ್ಯ ಈ ಹಾಡಿನಲ್ಲಿ ನೋಡಬಹುದು.

ಇನ್ನು ಕ್ಲೈಮ್ಯಾಕ್ಸ್.
ಕ್ಲೈಮ್ಯಾಕ್ಸಿನಲ್ಲಿ ಬರುವ ಹಾಡು ಇದು.

"ಬಾ ಬಾ ಬಾ ರಾಗವಾಗಿ
ಸೇರೆನ್ನ ನಾದವಾಗಿ
ನಮ್ಮಿಂದಿನ ಮಿಲಿನ ರಾಗ ಸಂಭ್ರಮ
ನೀನಾಡುವ ನಾಟ್ಯ ನಾದ ಸಂಗಮ..."

ಈ ಹಾಡಂತೂ ತುಂಬಾ ಸುಮಧುರವಾಗಿದೆ.
ಕೊನೆಯಲ್ಲಿ ಬರುವ ವೇಣುವಾದನ ಅದ್ಬುತವಾಗಿದೆ.

ಈ ಚಿತ್ರದಲ್ಲಿರುವ ಎಲ್ಲಾ ಹಾಡುಗಳು ನನಗಿಷ್ಟ.

ಈ ಚಿತ್ರ ದ್ವಾರಕೀಶ್ ಅವರು ನಿರ್ಮಿಸಿದ ೧೯ನೇ ಚಿತ್ರ.

-------------------------------------------------------
ಇಂದು ಮನೆಗೆ ಬಂದಾಗ ಟಿವಿಯಲ್ಲಿ ಈ ಚಿತ್ರ ಬರ್ತಿತ್ತು.
ಹಾಗಾಗಿ ಈ ಬರಹ. :)

Rating
No votes yet

Comments