LG ಗ್ರಾಹಕ ಸೇವಾ ಕೇಂದ್ರದ ಭಾಷಾ ಆಯ್ಕೆಗಳು

LG ಗ್ರಾಹಕ ಸೇವಾ ಕೇಂದ್ರದ ಭಾಷಾ ಆಯ್ಕೆಗಳು

ನೆನ್ನೆ ನಾನು LG Customer Careಗೆ ಕರೆ ಮಾಡಿದ್ದೆ. ನಮ್ಮ ಮನೆಯ Washing machine ಸ್ವಲ್ಪ ಕೆಟ್ಟಿತ್ತು, ಹಾಗಾಗಿ ದೂರು ದಾಖಲಿಸಲು ಕರೆ ಮಾಡಿದ್ದೆ. ರೆಕಾರ್ಡೆಡ್ ಮೆಸೇಜ್ನಲ್ಲಿ ೩ ಭಾಷಾ ಆಯ್ಕೆಗಳಿದ್ದವು, ಅವು ಯಾವ್ಯಾವು ಗೊತ್ತ???

 

೧. ಇಂಗ್ಲಿಷ್

೨. ಹಿಂದಿ, ಮತ್ತು

೩. ಬೆಂಗಾಲಿ

ಇಲ್ಲಿ ಕನ್ನಡದ ಆಯ್ಕೆಯೇ ಇಲ್ಲ! ಕರ್ನಾಟಕದಲ್ಲೇಕೆ ಬೆಂಗಾಲಿ???

ನಾನು ಇಂಗ್ಲಿಷ್ ಆಯ್ಕೆ ಮಾಡಿ Customer care executiveನ ಕನ್ನಡದ ಆಯ್ಕೆ ಏಕಿಲ್ಲ ಎಂದರೆ ಸಮರ್ಪಕ ಉತ್ತರವಿಲ್ಲ, ನಂತರ ಅವನು ಕನ್ನಡ ಮಾತನಾಡುವವರಿಗೆ ಕನೆಕ್ಟ್ ಮಾಡ್ದ.

ಸಂಪದಿಗ ಮಿತ್ರರೇ, ಇದರ ಬಗ್ಗೆ ಹೇಗೆ ದೂರು ನೀಡಿ ಸರಿಪಡಿಸಬಹುದು???, ಗೊತ್ತಿರುವವರು ತಿಳಿಸಬೇಕಾಗಿ ವಿನಂತಿ. ಹೀಗಾದರೂ ನಾವು ನಮ್ಮ ಭಾಷೆಯನ್ನೂ ಉಳಿಸಿಕೊಳ್ಳಬಹುದು.

 

Rating
No votes yet

Comments