Helvetica ಫಾಂಟಿಗೆ ೫೦ ವರುಷ

Helvetica ಫಾಂಟಿಗೆ ೫೦ ವರುಷ

Comments

ಬರಹ

ವಿಶ್ವದಲ್ಲಿ ಅತಿ ಹೆಚ್ಚಾಗಿ ಬಳಸಲ್ಪಡುವ ಫಾಂಟುಗಳಲ್ಲೊಂದಾದ ಹೆಲ್ವೆಟಿಕ ಫಾಂಟು ಹೊರಬಂದು [:http://www.washingtonpost.com/wp-dyn/content/article/2007/04/06/AR2007040601986.html|ಈ ವರ್ಷಕ್ಕೆ ಸರಿಯಾಗಿ ೫೦ ವರ್ಷಗಳಾಗಲಿದೆಯಂತೆ]. ಓದಲು ಬಹಳ ಸುಲಭವಾದ ಈ ಫಾಂಟು ಅಮೇರಿಕದ ಸಬ್-ವೇ ಗಳಿಂದ ಹಿಡಿದು ಬಿ ಎಮ್ ಡಬ್ಲು ನಂತಹ ಕಂಪೆನಿಗಳ ಲೋಗೋಗಳಲ್ಲೂ ಬಳಕೆಯಾಗಿದೆಯಂತೆ.

ಸ್ವಿಟ್ಸರ್ ಲ್ಯಾಂಡಿನಿಂದ ಹೊರಬಂದ ಈ ಸುುಂದರ ಫಾಂಟ್ ಬಗ್ಗೆ [:http://www.helveticafilm.com/|ಒಂದು ಡಾಕ್ಯುಮೆಂಟರಿ ಸಿನಿಮಾ] [:http://typographi.com/001071.php|ಕೂಡ ಹೊರತಂದುಬಿಟ್ಟಿದ್ದಾರೆ]. ೫೦ ವರ್ಷ ಸಂದ ಸಂದರ್ಭದಲ್ಲಿ ಇನ್ಯಾವ ಫಾಂಟಿಗೂ ಇಂತಹ ಗೌರವ ಲಭಿಸಿರಲಿಕ್ಕಿಲ್ಲ.

ಮೈಕ್ರೊಸಾಫ್ಟಿನ ತಂತ್ರಾಂಶಗಳೊಂದಿಗೆ ನೀಡಲಾಗುವ Arial ಇತ್ತೀಚೆಗೆ ಜನಪ್ರಿಯತೆ ಪಡೆದಿರುವ ಫಾಂಟು - ಇದು ಹೆಲ್ವೆಟಿಕ ಹೋಲಿಕೆಯದ್ದೇ ಎಂದು ಹಲವರ ಅಭಿಪ್ರಾಯ. ಇವೆರಡರ ಮಧ್ಯೆ ಇರುವ ಚಿಕ್ಕ ಪುಟ್ಟ ವ್ಯತ್ಯಾಸಗಳ [:http://www.ms-studio.com/articlesarialsid.html|ಪಟ್ಟಿ ಇಲ್ಲಿದೆ].

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet