ಈ ಪ್ರಶ್ನೆಗೆ ಉತ್ತರ/ಟೀಕೆ/ ಟಿಪ್ಪಣಿಗೆ ಒಂದು ವಾರ ಅವಕಾಶ!

ಈ ಪ್ರಶ್ನೆಗೆ ಉತ್ತರ/ಟೀಕೆ/ ಟಿಪ್ಪಣಿಗೆ ಒಂದು ವಾರ ಅವಕಾಶ!

ಈ ತರಹ ಕಲ್ಪನೆ ಮಾಡಿಕೊಳ್ಳಿ .

ನೀವು ನಿಮ್ಮ ಊರು ಬಿಟ್ಟು ಯಾವ್ದೋ ಮಹಾನಗರಕ್ಕೋ , ವಿದೇಶಕ್ಕೋ ಹೋಗಿ ಏನೋ ಮಹಾನ್ ಸಾಧನೆ ಮಾಡಿ , ಸಿಕ್ಕಾಪಟ್ಟೆ ಜನಪ್ರಿಯರೂ , ಶ್ರೀಮಂತರೂ , ಸುಪ್ರಸಿದ್ಧರೂ ಆಗಿ ನಿಮ್ಮ ಊರಿಗೆ ಬಂದಿಳಿತೀರಾ . ಆ ಊರಿಗೆ ಊರೇ ಸಂಭ್ರಮ ಪಟ್ಟು ನಿಮ್ಮನ್ನು ಎದಿರುಗೊಳ್ಳುತ್ತದೆ . ನಿಮ್ಮ ಸ್ವಂತ ವಾಹನ ಅಲ್ಲಿಲ್ಲ ; ಅಲ್ಲಿರುವ ಟ್ಯಾಕ್ಸಿ , ಆಟೋ , ಜಟಕಾ ಇತ್ಯಾದಿ ಬಾಡಿಗೆ ವಾಹನಚಾಲಕರು, ಪ್ರತಿಯೊಬ್ಬರೂ , ನನ್ನ ವಾಹನದಲ್ಲಿ ಬನ್ನಿ ಎನ್ನುತ್ತಿದ್ದಾರೆ . ಆಗ ನೀವು ಏನು ಮಾಡ್ತೀರಿ ? ಏನು ಮಾಡಬಹುದು ?

ಇಂಥ ಒಂದು ಪ್ರಸಂಗವನ್ನು ಎಲ್ಲೋ ಓದಿದೆ . ಎಲ್ಲಿ, ಏನು, ಯಾರು, ಎತ್ತ ಅಂತ ಆಮೇಲೆ ಹೇಳ್ತೀನಿ .

Rating
No votes yet

Comments