ಈ ಸಲ ನಿಮ್ಮ ಮತ ಭೂತಾಯಿಗಿರಲಿ,

ಈ ಸಲ ನಿಮ್ಮ ಮತ ಭೂತಾಯಿಗಿರಲಿ,

ಅದ್ಯಾರು ಡೆಮಾಕ್ರಸಿ ಅಂತ ಮಾಡಿದರೋ ಪುಣ್ಯಾತ್ಮರು, ನಮ್ಮ ಜನ ಎಲ್ಲದಕ್ಕೂ ಮತ ಕೇಳಲು
ಆರಂಭಿಸಿಬಿಟ್ಟಿದ್ದಾರೆ. ರಿಯಾಲಿಟಿ ಶೋಗಳಂತೂ ಮತ ಚಲಾವಣೆ ಇಲ್ಲದೆ ನಡೆಯುವುದೇ ಇಲ್ಲ.
ಇನ್ನು ಮ್ಯೂಸಿಕ್ ಚಾನಲ್ ಗಳು, ನಿಮಗೆ ಬೇಕಾದ ಹಾಡಿಗೆ ತಕ್ಷಣ ಮತ ಚಲಾಯಿಸಿ, ಮರುಕ್ಷಣ
ಹಾಡು ಕೇಳಿ ಎಂದು ರೇಡಿಯೋನಲ್ಲಿ ಟಿ.ವಿ ನಲ್ಲಿ ಕಿರುಚುತ್ತಿವೆ. ಒಟ್ಟಿನಲ್ಲಿ
ಮೆಜಾರಿಟಿ ವಿನ್ಸ್... ಮೆಜಾರಿಟಿ ಪ್ರೂವ್ ಮಾಡಲು ವಿ ನೀಡ್ ವೋಟ್ಸ್.
ನಿನ್ನೆ ರಂಜಿತ್ ಜೊತೆ ಮಾತಾಡುತ್ತಿದ್ದಾಗ ಅವರು ಹೇಳಿದ ಎನ್.ಜಿ.ಸಿ. ಚಾನಲ್ಲಿನ
ಒಂದು ಕಾರ್ಯಕ್ರಮ ತಟ್ಟನೆ ಗಮನ ಸೆಳೆಯಿತು. ’ವೋಟ್ ಫಾರ್ ಅರ್ಥ್’ ಅಂತ ಅದರ ಹೆಸರು.
ಗ್ಲೋಬಲ್ ವಾರ್ಮಿಂಗ್ ಬಗ್ಗೆ ಜಾಗೃತಿ ಮೂಡಿಸಲು ಶುರುಮಾಡಿರುವ ಕಾರ್ಯಕ್ರಮ. ಇದೇ ಮಾರ್ಚ್ ಇಪ್ಪತ್ತೆಂಟರಂದು ರಾತ್ರಿಎಂಟೂವರೆ ಇಂದ ಒಬ್ಬತ್ತೂ ಮೂವತ್ತರವರೆಗೆ ಎನ್.ಜಿ.ಸಿ. ಯಾವುದೇ ಕಾರ್ಯಕ್ರಮ
ಪ್ರಸಾರ ಮಾಡುತ್ತಿಲ್ಲ, ಅಲ್ಲದೆ ಜನರನ್ನು ಒಂದು ಗಂಟೆ ಕಾಲ ವಿದ್ಯುತ್ ಬಳಸದೆ ಇರುವಂತೆ ವಿನಂತಿಸುತ್ತಿದೆ.
ಕೇಳುತ್ತಿದ್ದಂತೆ ನಿಜಕ್ಕೂ ಪ್ರಶಂಸನೀಯ ಕಾರ್ಯಕ್ರಮವೆನಿಸಿತು.

ಕೊಳವೆಬಾವಿಯಲ್ಲಿ ಬಿದ್ದಿರುವ ಮಗುವನ್ನು ತಮ್ಮ ಲಾಭಕ್ಕಾಗಿ ಬಳಸುವ, ಮಗುವಿನ ಪ್ರಾಣ
ಉಳಿಸಲು ನಿಮ್ಮ ಪ್ರಾರ್ಥನೆಯನ್ನು ಈಗಲೇ ಈ ನಂಬರಿಗೆ ಎಸ್. ಎಮ್. ಎಸ್. ಮಾಡಿ ಎಂದು
ತಮ್ಮ ನೈತಿಕತೆಯನ್ನು ಮಾರಾಟಕ್ಕಿಟ್ಟುರುವ ಅಸಂಖ್ಯಾತ ಚಾನಲ್ಲುಗಳ ನಡುವೆ,
ಎನ್.ಜಿ.ಸಿ. ಯ ಪ್ರಯತ್ನ ಮೆಚ್ಚುವಂತದ್ದಲ್ಲವೇ? ನಾನಂತೂ ಅದಕ್ಕೆ ಮತ
ಚಲಾಯಿಸುವವಳಿದ್ದೀನಿ. ಇಪ್ಪತೆಂಟರ ರಾತ್ರಿ ಎಂಟುವರೆ ಇಂದ ಒಂಭತ್ತು ಮೂವತ್ತರವರೆಗೆ
ವಿದ್ಯುತ್ ಬಳಸದೇ ಈ ಕಾರ್ಯಕ್ರಮಕ್ಕೆ ನನ್ನ ಬೆಂಬಲ ಸೂಚಿಸುವವಳಿದ್ದೇನೆ. ಇಷ್ಟೆಲ್ಲ ಸವಲತ್ತುಗಳನ್ನು
ನಮಗೆ ನೀಡಿರುವ ಭೂತಾಯಿಯ ಬಗ್ಗೆ ನಿಮಗೂ ಕಾಳಜಿಇದ್ದಲ್ಲಿ ಇದಕ್ಕೆ ಬೆಂಬಲಿಸಿ.

ಗ್ಲೋಬಲ್ ವಾರ್ಮಿಂಗ್ ನಿಂದಾಗುವ ಮಾರಕ ಪರಿಣಾಮಗಳ ಬಗ್ಗೆ ನಿಮಗೆ ಮಾಹಿತಿ
ಇರಲಿ, ಹಾಗೂ ಇದೊಂದು ಬಾರಿ ಬೇರೆ ಯಾವುದಕ್ಕೂ ಅಲ್ಲದೆ ನಿಮ್ಮ ಮತ ಭೂತಾಯಿಗಿರಲಿ.

Rating
No votes yet

Comments