ಒಂದು ಕಾದಂಬರಿ
ಇತ್ತೀಚೆಗೆ ಈ ಕಾದಂಬರಿ ಓದಿ ಮುಗಿಸಿದೆ. "ಬೇರೆಯವರು ಸತ್ಯವನ್ನು ನಿಮ್ಮಿಂದ ಮುಚ್ಚಿಟ್ಟಿದ್ದಾರೆ; ಬನ್ನಿ ನಾನು ಅದನ್ನು ತೆರೆದು ತೋರಿಸುತ್ತೇನೆ" ಎಂಬ ಅಹಂಕಾರದಿಂದ ನಡುಹಗಲಲ್ಲಿ ಕೈಯಲ್ಲೊಂದು ಆರುತ್ತಿರುವ ದೀಪ ಹಿಡಿದು ದಾಪುಗಾಲಿಟ್ಟು ನಡೆದಿರುವ ಕಾದಂಬರಿಕಾರ. ಯಾವುದೂ ಪೂರ್ಣಸತ್ಯವಲ್ಲದ ಕಾರಣ ಇಲ್ಲಿರುವ ಸಂದೇಶಗಳನ್ನು ಅರ್ಧಸತ್ಯ ಎಂದು ಕರೆದು ಒಳ್ಳೆಯತನ ತೋರಬಹುದಷ್ಟೆ. ಇನ್ನು ಇದರಲ್ಲಿನ ಸಂದೇಶಗಳು ಎಷ್ಟು ಬಾಲಿಶ ಮತ್ತು ಕುಟಿಲತೆಯಿಂದ ಕೂಡಿದೆಯೆಂದರೆ ಅದರ ಬಗ್ಗೆ ಯೋಚಿಸುವುದು, ಚರ್ಚಿಸುವುದು ಪಾಪದಂತೆ ಕಾಣುತ್ತದೆ.
ಪೂರ್ವನಿರ್ಧಾರಿತ ಸಂಘರ್ಷಗಳಲ್ಲಿ ತೊಡಗಿಕೊಂಡು ಎಡವುತ್ತಾ ಹಿಂದು ಹಿಂದಕ್ಕೆ ಸರಿಯುವ ಏಕಮುಖ ಪಾತ್ರಗಳು ಎಲ್ಲೂ ಸೋಜಿಗವನ್ನು ಉಂಟುಮಾಡದೇ ತೆವಳುತ್ತವೆ. ಯಾಕೋ ಇಲ್ಲಿಯ ಜೀವಹೀನ ಪಾತ್ರಗಳ ಬಗ್ಗೆ ಚಿಂತಿಸುವ ಬದಲು stereotype ಮತ್ತು archetype ಪಾತ್ರಗಳ ನಡುವಿನ ವ್ಯತ್ಯಾಸವೇನು ಎಂದು ಚಿಂತಿಸುವುದು ಒಳ್ಳೆಯದೆನಿಸಿತು. ಮೊದಲ ರೀತಿಯ ಪಾತ್ರಗಳು ಮಾನವೀಯ ವಿವರಗಳ ಸಾಂದ್ರತೆಯಿಲ್ಲದೆ ಕಟ್ಟಿದ, ಒಂದು ಗುಂಪನ್ನು ಸುಲಭಮಾದರಿಯಾಗಿ ಪ್ರತಿನಿಧಿಸುವ, ನಾವಂದುಕೊಂಡಂತೆ ನಡೆದುಕೊಳ್ಳುವ ಸಾಮಾನ್ಯಗಳಾದರೆ, ಎರಡನೇ ರೀತಿಯ ಪಾತ್ರಗಳು ಮಾನವೀಯ ವಿವರಗಳ ಸಾಂದ್ರತೆಯ ಬುನಾದಿಯ ಮೇಲೆ ನಿಂತಿದ್ದು, ತನ್ನ ಗುಂಪಿನ ಎಲ್ಲ ತವಕ, ತಲ್ಲಣ, ಓರೆಕೋರೆಗಳೊಡನೆ ಪ್ರಾತಿನಿಧಿಕವಾಗಿಯೂ ಅಪ್ಪಟ ಮನುಷ್ಯನಾಗಿ ಉಳಿದು ಸೋಜಿಗ ಹುಟ್ಟಿಸುವ ರೀತಿಯವು. ಕಾದಂಬರಿ ಓದಿದ ಮೇಲೆ ಯಾಕೋ ಮೇಲಿನ ಅಂತರ ನಿಚ್ಚಳವಾಗಿ ಕಣ್ಣಿಗೆ ಹೊಡೆದಂತೆ ಕಾಣತೊಡಗಿತು. ಚೋಮನದುಡಿಯ ಚೋಮ ಮತ್ತು ಶಿಕಾರಿಯ ನಾಗಪ್ಪ ಹೆಚ್ಚು ಪ್ರಖರವಾದರು, ಮುಖ್ಯವಾದರು.
ಪುಟಗಟ್ಟಲೆ ಪಾತ್ರಗಳ ಮೂಲಕ ಭಾಷಣ ಬಿಗಿಯುವ ಕಾದಂಬರಿಕಾರ ಓದುಗರನ್ನು ದಡ್ಡ ಮಂದೆಯಂತೆ ನಡೆಸಿಕೊಳ್ಳುವ ರೀತಿಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಓದುಗನ ಜಾಣತನವನ್ನು ಹೆಜ್ಜೆಹೆಜ್ಜೆಗೂ ಅನುಮಾನಿಸುವ ಈ ಕಾದಂಬರಿ ಯಾಕೆ ಸಮಯೋಚಿತ ಎಂದು ಚಿಂತಿಸುತ್ತಾ ಕಾದಂಬರಿಯ ಹೆಸರು ಕೂಡ ಹೇಳಬಾರದು ಎಂದು ನಿರ್ಧರಿಸಿದೆ.
Comments
Re: ಕಾದಂಬರಿ ಹೆಸರಿಗೆ "ಆವರಣ"?
Re: ಒಂದು ಕಾದಂಬರಿ
Re: ಒಂದು ಕಾದಂಬರಿ
ಉ: ಒಂದು ಕಾದಂಬರಿ
In reply to ಉ: ಒಂದು ಕಾದಂಬರಿ by hpn
Re: ಉ: ಒಂದು ಕಾದಂಬರಿ
In reply to Re: ಉ: ಒಂದು ಕಾದಂಬರಿ by ವೈಭವ
ಉ: ಒಂದು ಕಾದಂಬರಿ
In reply to ಉ: ಒಂದು ಕಾದಂಬರಿ by hpn
Re: ಉ: ಒಂದು ಕಾದಂಬರಿ
Re: ಒಂದು ಕಾದಂಬರಿ
Re: ಒಂದು ಕಾದಂಬರಿ
ಉ: ಒಂದು ಕಾದಂಬರಿ
In reply to ಉ: ಒಂದು ಕಾದಂಬರಿ by srimanmohan
ಉ: ಒಂದು ಕಾದಂಬರಿ
In reply to ಉ: ಒಂದು ಕಾದಂಬರಿ by anivaasi
ಉ: ಒಂದು ಕಾದಂಬರಿ
In reply to ಉ: ಒಂದು ಕಾದಂಬರಿ by anivaasi
ಉ: ಒಂದು ಕಾದಂಬರಿ
In reply to ಉ: ಒಂದು ಕಾದಂಬರಿ by srimanmohan
ಉ: ಒಂದು ಕಾದಂಬರಿ
In reply to ಉ: ಒಂದು ಕಾದಂಬರಿ by anivaasi
ಉ: ಒಂದು ಕಾದಂಬರಿ