ತ್ಯಾಗ ರಾಗ ಸಂಯೋಗ

ತ್ಯಾಗ ರಾಗ ಸಂಯೋಗ

ಹೋದ ವರ್ಷ ಒಂದು ಅತ್ಯಂತ ಅಪರೂಪದ ಹಾಗು ನನಗೆ ತಿಳಿದಿರುವಂತೆ ನಡೆದ ಪ್ರಥಮ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಇದರ ಬಗ್ಗೆ ಯಾರದರೂ ಸಂಪದದಲ್ಲಿ ಬರೆದಿದ್ದಾರೇನೋ ನನಗೆ ಗೊತ್ತಿಲ್ಲ.

ಸಂಗೀತ ರೋಗಗಳನ್ನು ಗುಣಪಡಿಸುತ್ತದೆಯೆಂಬ ಸಿದ್ಧಾಂತ ವೈಗ್ನಾನಿಕವಾಗಿ, ಈಗ ಎಲ್ಲರೂ ಒಪ್ಪಿಕೊಂಡಿರುವ ವಿಷಯವೇ ಆದರು, ಈ ಥರಹದ ಪ್ರಯೋಗಳು ಹೆಚ್ಚು ಹೆಚ್ಚು ನಡೆದಷ್ಟೂ, ನಮ್ಮ ಸಂಗೀತ ಪ್ರಚಾರ ಹಾಗೂ ಪ್ರಚಲಿತವಾಗತ್ತೆ ಎಂಬುದು ನನ್ನ ಅನಿಸಿಕೆ.

ಈ ತ್ಯಾಗ ರಾಗ ಸಂಯೋಗ ಕಾರ್ಯಕ್ರಮ ಶ್ರೀ ನಿಮಿಷಾನಂದ ಗುರೂಜಿಯವರ ವಿಷಯ ವಿವರಣೆಯೊಂದಿಗೆ, ವಿದ್ವಾನ್ ಶ್ರೀ ಆರ್ ಕೆ ಪದ್ಮನಾಭ ಮತ್ತು ತಂಡದವರಿಂದ ಧ್ಯಾನಕ್ಕೆ ಸಮಂಜಸವಾದ ಸಂಗೀತದ ಜೊತೆ ನಡೆಯಿತು. ಪೂರ್ಣಕುಂಭದ ಸ್ವಾಗತದೊಂದಿಗೆ ಸ್ವಾಮೀಜಿಯವರ ಆಗಮನವಾಯಿತು. ಗುರುಗಳ ಶಿಷ್ಯರ ಭಜನೆಯ ನಂತರ ಗುರೂಜಿಯವರು ಪ್ರವಚನ ಆರಂಭಿಸಿದರು. ಮೊದಲು "ತ್ಯಾಗ" ಎಂದರೇನು ಮತ್ತು ಮನುಷ್ಯ ಏನನ್ನು ತ್ಯಾಗ ಮಾಡಬೇಕು ಎಂದು ತಿಳಿಸಿದರು. ಶ್ರೀ RKP ಯವರು ಪಹಾಡಿ ರಾಗದಲ್ಲಿ ಶ್ರೀ ಗುರುನಾಪಾಲಿತೋ ಶ್ರೀ ಸಚ್ಛಿದಾನಂದನಾಥೇನ ಹಾಡಿದರು. ಜೊತೆಗೆ ಶ್ರುಂಗಪುರಾಧೀಶ್ವರಿ ಶಾರದೆ - ಪದ್ಮ ಚರಣ ರಚನೆ, ಪಂಚಾಷಟ್ಪೀಟ ರೂಪಿಣಿ - ದೇವಗಾಂಧಾರಿ or ಅಭೇರಿ or ಭೀಮಪಲಾಸ್ ಕೂಡ ಹಾಡಿದರು. ಮಧ್ಯೆ ಮಧ್ಯೆ ಗುಗುಗಳ ಪ್ರವಚನ ನಡೆಯುತ್ತಿತ್ತು. ಬಾಕಿ ವಿಷಯಗಳ ಬಗ್ಗೆ ನಾನಿಲ್ಲಿ ವಿವರವಾಗಿ ಏನನ್ನೂ ಬರೆಯುತ್ತಿಲ್ಲ ಏಕೆಂದರೆ ನಾನು ಬರೀ ಸಂಗೀತ ಅದಕ್ಕೆ ಸಂಬಂಧ ಪಟ್ಟ ಮಾತುಗಳನ್ನು ಮಾತ್ರ ಹೇಳುತ್ತಿದ್ದೇನೆ. ಗುರೂಜಿಯವರು ಸಂಗೀತದ ಸಪ್ತ ಸ್ವರಗಳು ನಮ್ಮ ದೇಹದಲ್ಲಿನ ಚಕ್ರಗಳಿಗೆ ನೇರವಾಗಿ ಸಂಬಂಧಿಸಲ್ಪಟ್ಟವು - ಉದಾ. ಸ - ಮೂಲಧಾರ ಚಕ್ರ, ರ - ಸ್ವಾದಿಷ್ಟಾನ ಮತ್ತು ಗ ಮಣಿಪುರ....... ಕೇವಲ ಈ ಮೂರೇ ಮೂರು ಸ್ವರಗಳನ್ನು ನಾವು ಆಲಿಸಿ ನಮ್ಮ ಜೀವನಕ್ಕೆ ಅಳವಡಿಸಿಕೊಂಡರೆ, ನಮ್ಮಲ್ಲಿರುವ "ಅಹಂ" ಅನ್ನು ಕಳೆದುಕೊಂಡು ಬಿಡಬಹುದು ಎಂದರು. "ತ್ಯಾಗ" ಇಲ್ಲಿ ಅಹಂ ತ್ಯಜಿಸುವುದು ಎಂಬರ್ಥದಲ್ಲಿದೆ. ಅಹಂ ಬಿಡುವುದು or ತ್ಯಜಿಸುವುದು ಎಂದರೆ loosing our name identity and recognising HIM as supreme ಎಂದು ತಿಳಿಸಿದರು. ಈ ಹಂತದಲ್ಲಿ ಶ್ರೀ RKP ಯವರು ಬಿಂದುಮಾಲಿನಿ ರಾಗದಲ್ಲಿ - ಎಂಥಮುದ್ದೋ ಎಂಥ ಸೊಗಸೋ, ಪ್ರಾರ್ಥಿಪೆ ವಾದಿರಾಜರ - ನಠಭೈರವಿಯಲ್ಲಿ (ಸ್ವಂತ ರಚನೆ), ವರಲಕ್ಶ್ಮೀ ನಮೋಸ್ತುತೆ - ಗೌರಿಮನೋಹರಿಯಲ್ಲಿ, ತಮಿಳು ಚಿತ್ರದ ಅತ್ಯಂತ ಜನಪ್ರಿಯ ಹಾಡು ಪಾಟ್ಟುಂ ನಾನೆ... ಪಾಡವುಂ ನಾನೆ... ಹಾಡಿದರು.

ಗುರೂಜಿಗಳು ಮುಂದುವರಿದು ನಾನು, ನನ್ನಿಂದ, ನನ್ನದು ಎಂಬುದು ನಾಶವಾದಾಗಲೇ ನಮಗೆ ಪರಮಾನಂದ ಸಿಗೋದು. ಯಾರಿಗೆ ಸಂಪೂರ್ಣ ಅಹಂ ಹೋಗಿರತ್ತೋ ಅವನೇ ’ಸತ್ಯಂ’, ಯಾವಾಗ ಅಹಂ ತ್ಯಾಗ ಆಗತ್ತೋ, ಆಗ "ರಾಗ" ಶುರುವಾಗತ್ತೆ. If a humanbeing cannot inspire himself, he cannt inspire others. what is that inspires life? - ಅದು "ಶಿವಂ" ಮತ್ತೇನೂ ಅಲ್ಲ. ಪ್ರತಿಯೊಬ್ಬನೂ ತನ್ನ ಶ್ವಾಸವನ್ನು ಸ್ವರಗಳ ಜೊತೆಗೆ ಸೇರಿಸಿಕೊಂಡಾಗ ಸತ್ಯಂ, ಶಿವಂ ಎಲ್ಲಾ ಪ್ರಾಪ್ತ್ಗವಾಗಿ ಜೀವನ ಸುಂದರವಾಗತ್ತೆಂದು ಹೇಳಿದರು. ಸಂಗೀತ ಎಲ್ಲಾ ತರಹದ ರೋಗಗಳನ್ನೂ ಮನಸ್ಸಿನ ವಿಕಾರಗಳನ್ನೂ ವಾಸಿ ಮಾಡತ್ತೆ ಆದರೆ ನಾವು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿಲ್ಲ. Infact we are more interested in the beat of the music rather than melody. DISEASE means what - DIS = mind and the mind which is not at ease is called Disease. ದೇಹ ಇರೋದೇ ಆತ್ಮ ಸಾಧನೆಗಾಗಿ. ಅಂತರಂಗ ಎಷ್ಟು ವಿಸ್ತಾರ ಮಾಡುತ್ತೇವೋ, ಅಷ್ಟೂ ಆರೋಗ್ಯ ಮತ್ತು ಪರಮಾನಂದ ನಮ್ಮದಾಗುತ್ತದೆ. ಸಪ್ತ ಸ್ವರಗಳಿಂದ ನಮ್ಮ ಶ್ವಾಸ ಸಂಪೂರ್ಣ ನಿಯಂತ್ರಣವಾಗತ್ತೆ. ತಾಳ ಮೇಳಗಳು ಬರೀ ಯೌವನಕ್ಕೆ ಉಪಯೋಗವೇ ಹೊರತು ಮುದಿತನಕ್ಕಲ್ಲ. "ರಾಗ" ಬುದ್ಢಿಗೆ ಚೇತಕ - ಎಲ್ಲಾ ವಯಸ್ಸಿಗೂ, ಜೀವನದುದ್ದಕ್ಕೂ ಸಂಗೀತ ಎಲ್ಲರಿಗೂ ಬೇಕೇ ಬೇಕು.

ದೇವಿ ಸರಸ್ವತಿ ನಮ್ಮ ಆತ್ಮವನ್ನು ಶ್ರುತಿ ಸೇರಿಸುವವಳು. ನಮ್ಮಲ್ಲಿ creativity ಹುಟ್ಟಿಸುವವಳು. ಸರಸ್ವತಿ ಎಂದರೆ ಐಂ - AIM ಬೀಜಾಕ್ಷರ. when you are in tune with your breath, you will achieve your AIM - ಐಂ. ಸ್ಥೂಲ + ಸೂಕ್ಷ್ಮ ಸ್ಥಿತಿ ಸೇರಿಸುವುದೇ ಸಂಗೀತ ಅಥವಾ ಸರಸ್ವತಿ. ಸಂಗೀತ ಮನೋರಂಜನೆ ಅಲ್ಲ - ಆತ್ಮ ವಂದನೆ. Music is not entertainment but enlightenement. ತೆಲುಗಿನಲ್ಲಿ "ಸ ರೀ ಗೆ ಮಾ.... ಪಾಡೆ ನೀ... ಸಾಧಿಸಬಹುದು ಸಾಕ್ಷಾತ್ಕಾರ. ’ಸ’ ನಾವು ’ನಿ’ ಒಡೆಯ ಅರ್ಥಾತ್ ಪರಮಾತ್ಮ. ಎಲ್ಲವೂ ನೀ, ನೀನು, ನೀನೇ, ನಿನಗೇ, ನಿನ್ನಿಂದಲೇ - ನಾ ಅಲ್ಲ (ನಾ ಅಹಂ ಇಲ್ಲ) ಎಂದಾಗ ಪರಮಾನಂದ ಹಾಗೂ ಪರಮಾತ್ಮನ ಸಾಕ್ಷಾತ್ಕಾರ.

ಶ್ರೀ RKP ಯವರು, ಹಿಂದೋಳ, ತೋಡಿ, ಷಣ್ಮುಖಪ್ರಿಯ, ಶುಭ ಪಂತುವರಾಳಿ ರಾಗಗಳ ಆಲಾಪನೆ ಮಾಡಿದರು. ಅಂಬಾ ಜಗದಂಬಾ ಕ್ರುತಿ ತಾಯಿ ನಿಮಿಷಾಂಬ ಮೇಲೆ ಶುಭ ಪಂತುವರಾಳಿರಲ್ಲಿ ಹಾಡಿದರು. ತೋಡಿ ರಾಗ ಹಾಡಿದರೆ ಆತ್ಮ ವಂದನೆ ಆಗುತ್ತದೆಂದು ಹೇಳಿದರು.

"ತ್ಯಾಗ - ರಾಗ - ಸಂಯೋಗ" ಎಂದರೆ ಅಹಂ ತ್ಯಾಗ ಮಾಡಿದ ಮೇಲೆ ರಾಗ ಸಂಯೋಗ ಆಗತ್ತೆ. ಸಂಯೋಗ ಎಂದರೆ ಸಂಪೂರ್ಣ ಶುತಿ ಸೇರುವುದು ಎಂದರ್ಥ. ಕೊನೆಗೆ ರೇವತಿ ರಾಗದ ಭೋ ಶಂಭೋ.....ಹಾಡಿ, ಸಿಂಧು ಭೈರವಿಯ ತಿಲ್ಲಾನದಲ್ಲಿ ಕಾರ್ಯಕ್ರಮ ಮುಕ್ತಾಯವಾಯಿತು.

ತುಂಬಾ ಪ್ರಗ್ನಾಪೂರಕ, ವಿಚಾರವಂತ, ಕಾರ್ಯಕ್ರಮ, ಯಾವುದೋ ಬೇರೆಯದೇ ಲೋಕದಲ್ಲಿದ್ದಂತಹ ಅನುಭವವಾಗಿತ್ತು.

Rating
No votes yet

Comments