ರೆವೊಲುಶನರಿ ರೋಡ್

ರೆವೊಲುಶನರಿ ರೋಡ್

ಒವರ್ ಆಲ್ ಸಿನಿಮಾ ಅಂತ ಪೊಸಿಟಿವ್ ಏನಲ್ಲ, ಆದರೆ ಕೇಟ್ ವಿನ್ಸಲೆಟ್ ಪರ್ಫಾರ್ಮನ್ಸ್ ಸಕ್ಕತ್ ಇದೆ.

ಪ್ಯಾರಿಸ್‍ನಲ್ಲಿ ಬದುಕೋದು ತನ್ನ ಜೀವನದ ಮಹದಾಸೆ ಅಂತ ಹುಡುಗ ಹೇಳಿಕೊಂಡಿರುತ್ತಾನೆ. ಮದ್ವೆ ಆಗ್ತಾರೆ. ಇದ್ದಕ್ಕಿದ್ದಂತೆ ಹೆಂತಿಗೆ ಒಂದಿನ ಐಡಿಯ ಬರುತ್ತೆ, ತಾವು ಪ್ಯಾರಿಸ್ಗೋಗಿ ಬದುಕೋದು ಅಂತ. ತಾನು ಕೆಲ್ಸ ಮಾಡೋದು, ಗಂಡನಿಗೆ ಬೇರೆ ಕೆಲ್ಸ ಸಿಗೋ ವರೆಗೂ ಅವನು ಮನೆಲಿರೋದು ಅಂತ. ಗಂಡನಿಗೆ ಹೇಳುತ್ತಾಳೆ, ಹೂಂ ಅಂತಾನೆ, ಅವನಿಗೆ ನಿಜವಾಗಿಯೂ ಅಂತ ಯಾವ ಆಸೆನೂ ಇರಲ್ಲ, ಅವಳ ಮನ ನೋಯಿಸಬಾರದು ಅಂತ ಹೂಂ ಅಂದಿರ್ತಾನೆ. ಅಸ್ಟರಲ್ಲಿ ಅವಳು ಹೊಟ್ಟಿಲೆ ಆಗ್ತಾಳೆ. ಅವನು ಪ್ಯಾರಿಸ್ಗೋಗೋದು ಬೇಡ ಅನ್ನೋಕೆ ಶುರು ಮಾಡ್ತಾನೆ. ಹೆಂತಿ ಜಗಳ ಮಾಡ್ತಾಳೆ, ಅದನ್ನೇ ಹಿಡಕೊಂಡು ಎಳದಾಳ್ತಾಳೆ. ಕೊನೆಗವಳು ತಾನೇ ಮಗುನ ಅಬಾರ್ಸನ್ ಮಾಡ್ಕೊಳ್ಳೋಕೆ ಹೋಗಿ, ಕೊನೆಯುಸಿರೆಳೀತಾಳೆ. ಇಸ್ಟು ಕತೆ!

ನನಗೆ ಈ ಸಾಲುಗಳು ಇಸ್ಟ ಆದವು,

----

ಕೇಟ್ : ಅದು ಪ್ಯಾರಿಸ್ಸೇ ಆಗಬೇಕೆಂದಿರಲಿಲ್ಲ.

ಫ್ರೆಂಡ್ : ನಿನಗೆ ಒಟ್ಟಿನಲ್ಲಿ "ಹೊರ" ಹೋಗಬೇಕಿತ್ತಲ್ಲವ?

ಕೇಟ್ : ನನಗೆ "ಒಳ" ಹೋಗಬೇಕಿತ್ತು, ನಾವು ಮತ್ತೆ ಬದುಕಬೇಕಿತ್ತು ನನಗೆ, ವರುಶಗಟ್ಟಲೆಯಿಂದ ಈ ಗುಟ್ಟನ್ನ ನಾವು ಕಾದುಕೊಂಡು ಬಂದಿದ್ದೆವು ಅಂದಿಕೊಂಡಿದ್ದೆ ನಾನು, "ನಾವಿಬ್ಬರೂ ಜಗತ್ತೇ ಬೆರಗುಗೊಳ್ಳುವಂತಿರುತ್ತೇವೆ" ಅಂತ. ಹೇಗೆ ಅಂತ ಎಗ್ಜಾಕ್ಟ್ ಗೊತ್ತಿರಲಿಲ್ಲ ನನ್ಗೆ, ಆದ್ರೆ, ಆ ಸಾಧ್ಯತೆ ನನ್ನನ್ನ ಆಸೆಪಡುತ್ತ ಇರುವಂತೆ ಮಾಡಿತು.

----(ಕೊಂಚ ಮೌನ)----

ಎಸ್ಟೊಂದು ಪಿಚ್ಚೆನಿಸುವಂತದಲ್ಲಾ ಅದು!, ಎಂತ ಸ್ಟುಪಿಡ್,.. ಎಂದೂ ಮಾಡದೇನೇ ಇರುವ ಆಣೆನ ನಂಬಿ, ಅದರ ಮೇಲೆ ನಿಮ್ಮ ಎಲ್ಲಾ ಆಸೆ,ಭರವಸೆಗಳನ್ನಿರಿಸಿ ಕನಸು ಹೆಣೆಯೋದು!!

-----

ಇದರಲ್ಲಿ ಆ ಪಾರ್ಟ್ ಅಸ್ಟೇ ಇಸ್ಟ ಆಗಿದ್ದು, ಯಾಕೆ ಅಂತ ನನಗೂ ಗೊತ್ತಿಲ್ಲ, ಕೇಳಬೇಡಿ :[:)]

Rating
No votes yet

Comments