ನಮ್ಮ ವಸಂತ

ನಮ್ಮ ವಸಂತ

ವಸಂತನ ಕವನ
ಚೈತ್ರದ ಆಗಮನ
ಪ್ರತಿ ವರ್ಷವು ನೂತನ
ನಿರಂತರ ಸಾಗಲಿ ನಮ್ಮ ಪಯಣ

ನವ ವಸಂತದ ಗಾಳಿಬೀಸಲು
ಮಕ್ಕಳಿಗೆ ಶಾಲೆಗಳೆಲ್ಲ ಮುಗಿಯುತ ಬರಲು
ಅವರೆಲ್ಲ ಹರುಷದಿಂದ ಕೂಡಿರಲು,
ಬರುವ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲು

ಮಾವು ಚಿಗುರಲು
ಕೋಗಿಲೆ ಹಾಡುತಿರಲು
ಮನೆಗೆ ತೋರಣ ಕಟ್ಟಲು
ಎಲ್ಲರ ಮನೆಯಲ್ಲು ಹಬ್ಬದ ವಾತಾವರಣವಿರಲು
ಬರುತಿಹನು ವಸಂತ ಎಲ್ಲರ ಮನವನ್ನು ಒಂದಾಗಿಸಲು

Rating
No votes yet

Comments