ನನ್ನ ಧ್ವನಿಮಾವಿಜ್ಞಾನದಲ್ಲಿ ಸಣ್ಣಮಕ್ಕಳ ಕೊಡುಗೆಗಳು
ಸಣ್ಣ ಮಕ್ಕಳು ಮಾತು ಕಲಿಯುವಾಗ ಕೆಲವು ಧ್ವನಿಗಳನ್ನು ಉಚ್ಚರಿಸಲಾಱರು. ಸಾಮಾನ್ಯವಾಗಿ ಕವರ್ಗ ಮಕ್ಕಳಿಗೆ ಕಷ್ಟ. ಕಕಾರಕ್ಕೆ ಚಕಾರವನ್ನೊ ತಕಾರವನ್ನೋ ಹೇೞುತ್ತಾರೆ. ನನ್ನ ಮಗ ಗ್ಲಾಸ್ ಅನ್ನುವುದನ್ನು ತಾಸ್ ಅನ್ನುತ್ತಾನೆ. ನನ್ನ ಮಗಳು ಸಣ್ಣವಳಿದ್ದಾಗ ಕಪ್ಪೆಗೆ ಚಪ್ಪೆ, ಕಲ್ಲು=ಚಲ್ಲು ಎನ್ನುತ್ತಿದ್ದಳು. ಇದಕ್ಕೆ ಕಾರಣ ಕವರ್ಗ ಉಚ್ಚರಿಸುವಾಗ ನಾಲಿಗೆಯ ಬುಡ ಮೆದುವಂಗಳನ್ನು ಮುಚ್ಚಿ ಉಸಿರನ್ನು ತಡೆಯುತ್ತದೆ. ಇದು ಮಕ್ಕಳಿಗೆ ಕಷ್ಟ. ರಕಾರವನ್ನು ಮಕ್ಕಳು ಉಚ್ಚರಿಸಲಾಱರು. ಬದಲಿಗೆ ದಕಾರ ಹೇೞುತ್ತಾರೆ. ದಂತಮೂಲೀಯದ ರಕಾರದ ಸರಿಯಾದ ಉಚ್ಚಾರಸ್ಥಾನವನ್ನು ಕಲಿಯುವಾಗ ಉಚ್ಚರಿಸುವುದು ಅವರಿಗೆ ಕಷ್ಟ. ನನ್ನ ಮಗ ಅಂಬಾ=ಹಸು ಎನ್ನಲು ಅಬ್ಬ ಎನ್ನುತ್ತಾನೆ. ಅಂಕಲ್=ಅಗ್ಗ ಎನ್ನುತ್ತಾನೆ. ಇದಕ್ಕೆ ಕಾರಣ ಮಧ್ಯದ ಅನುನಾಸಿಕ ಉಚ್ಚರಿಸುವಾಗ ಮೂಗಿನಲ್ಲಿ ಉಸಿರನ್ನು ಸ್ವಲ್ಪ ಬಿಡುವುದು ಮಾತು ಕಲಿಯುವ ಮಕ್ಕಳಿಗೆ ಕಷ್ಟ. ಹಾಗೆಯೇ ಸಕಾರಕ್ಕೆ ತಕಾರ. ಇಲ್ಲಿ ಸಕಾರಕ್ಕೆ ಉಸಿರನ್ನು ದಬ್ಬಿ ಹೇೞುವುದು ಮಕ್ಕಳಿಗೆ ಕಷ್ಟ. ಹಾಗಾಗಿ ಮಕ್ಕಳ ಬಾಯಲ್ಲಿ ಸುಮ=ತುಮ. ಹಾಗೆಯೆ ಹಕಾರಕ್ಕೆ ಕಕಾರವನ್ನೊ ಗಕಾರವನ್ನೊ ಮಕ್ಕಳು ಹೇೞುವುದನ್ನು ಕಾಣಬಹುದು. ಹೋಮ್ವರ್ಕ್=ಕೋಮಕ್ ಅಥವಾ ಇನ್ನೇನೋ ಅಸ್ಪಷ್ಟ.
Comments
ಉ: ನನ್ನ ಧ್ವನಿಮಾವಿಜ್ಞಾನದಲ್ಲಿ ಸಣ್ಣಮಕ್ಕಳ ಕೊಡುಗೆಗಳು
ಉ: ನನ್ನ ಧ್ವನಿಮಾವಿಜ್ಞಾನದಲ್ಲಿ ಸಣ್ಣಮಕ್ಕಳ ಕೊಡುಗೆಗಳು
In reply to ಉ: ನನ್ನ ಧ್ವನಿಮಾವಿಜ್ಞಾನದಲ್ಲಿ ಸಣ್ಣಮಕ್ಕಳ ಕೊಡುಗೆಗಳು by aniljoshi
ಉ: ನನ್ನ ಧ್ವನಿಮಾವಿಜ್ಞಾನದಲ್ಲಿ ಸಣ್ಣಮಕ್ಕಳ ಕೊಡುಗೆಗಳು