ಇದು ನ್ಯಾಯಾನಾ ನೀವೇ ಹೇಳಿ ? ಇವರುಗಳ ಅನ್ಯಾಯಕ್ಕೆ ಕಡಿವಾಣ ಎಂದು?

ಇದು ನ್ಯಾಯಾನಾ ನೀವೇ ಹೇಳಿ ? ಇವರುಗಳ ಅನ್ಯಾಯಕ್ಕೆ ಕಡಿವಾಣ ಎಂದು?

ನಮ್ಮೂರಲ್ಲಿ ಅಂದ್ರೆ ಕೋನಪ್ಪನ ಅಗ್ರಹಾರದಲ್ಲಿ (ಎಲೆಕ್ಟ್ರಾನಿಕ್ ಸಿಟಿ ಅಂತಾ್ನೆ ಅಂದ್ಕೋಳಿ) ಈ ಮನೆ ಮಾಲೀಕರ ಕಿರುಕುಳ ಹೇಳಲಾಗುತ್ತಿಲ್ಲ
ಮನೆ ಮಾಲೀಕರು ಅಂದರೆ ಎಲ್ಲರೂ ಅಲ್ಲ ಆಂಧ್ರದಿಂದ ನಮ್ಮ ಕರ್ನಾಟಕಕ್ಕೆ ವಲಸೆ ಬಂದು ಇಲ್ಲಿಯ ನೆಲ ಜಲವನ್ನೆಲ್ಲ (ಹೌದು ರೀ ನೀರನ್ನೂ ನುಂಗುವವರು ಇವರು) ನುಂಗಿ ಸುಮಾರು ಎಕರೆ ಜಮೀನನ್ನು ಹೊಂದಿರುವ ಒಂದು ವರ್ಗ .
ಬಂದವರು ಐಟಿ ಕಂಪೆನಿಗಳ ದಯದಿಂದ ಒಂದಷ್ಟು(ಅಲ್ಲಲ್ಲ ಸಾಕಷ್ಟು ) ಹಣ ಆಸ್ತಿ ಮಾಡಿಕೊಂಡದಷ್ಟೇ ಅಲ್ಲ ಒಬ್ಬೊಬ್ಬರು ನೂರರ ಲೆಕ್ಕದಲ್ಲಿ ಮನೆಗಳನ್ನು ಕಟ್ಟಿ ಲಕ್ಷಾಂತರ ಜನರಿಗೆ ಬಾಡಿಗೆ ಮನೆ ಕೊಡುತ್ತಿದ್ದಾರೆ. ಬೇರೆ ಬೇರೆ ಊರಿನಿಂದ ಬಂದ ಜನರು ಇವರುಗಳು ಕಟ್ಟಿದ ಮನೆಗಳಲ್ಲೇ ವಾಸವಾಗಿದ್ದಾರೆ
ಸರಿ ಬರಿ ಅಷ್ಟೆ ಆಗಿದ್ದರೆ ಇವರನ್ನು ಆಶ್ರಯದಾರಿಗಳು, ಇನ್ನೂ ಎಂತೆಂತಹದೋ ದಾರಿಗಳ ಪಟ್ಟ ಕಟ್ಟಬಹುದು.
ಆದರೆ ಇವರ ಆಟಾಟೋಪ ಎಂತಹದು . ಬಾಡಿಗೆಗೆ ಬಂದವರನ್ನು ರಕ್ತ ಪೀಪಾಸುಗಳಂತೆ ಹಣ ಹೀರಿ ಪ್ರಾಣ ಹೋದರೂ ದುಡ್ಡು ಕೀಳುವವರು..
ಇಂತಹ ಕೆಲವಾರು ಅನುಭವಗಳಲ್ಲಿ ಒಂದಂತೂ ತುಂಬಾ ಅನ್ಯಾಯ ಅದು ನಮಗೇ ಆಗಿದ್ದು ದುರಂತ.
ನಾವು ಮುಂಚಿದ್ದ ಮನೆಯ ಮಾಲೀಕ ಆಗಲೇ ಹೇಳಿದಂತೆ ಬಹಳ ಕಿರುಕುಳ ನೀಡುತ್ತಿದ್ದ
ನಮ್ಮ ಸ್ವಂತ ಮನೆಯಿದ್ದರೂ ಬಹಳ ದೂರವೆನ್ನುವ ಕಾರಣದಿಂದ ಹೋಗಲಾಗಿಲ್ಲ.
ನಮ್ಮ ಮನೆಯಲ್ಲಿ ಎರೆಡು ಬೆಡ್ರೂಮ್ ಹಾಗು ಸಾಕಷ್ಟು ವಿಶಾಲವಾಗಿದ್ದರೂ ನಮ್ಮ ಮನೆ ಮಾಲೀಕ ತಾತ ಹೆಚ್ಚು ಮನೆ ಸಾಮಾನಿಡಲು ಬಿಡುತ್ತಿರಲಿಲ್ಲ
ಒಂದು ಗಿಡ ಬೆಳೆಸುವುದಕ್ಕೂ ಅವನಿಂದ ಮಾತು ಕೇಳಬೇಕಿತ್ತು
ಕೊನೆಗೆ ನಮ್ಮ ತಾಯಿ ನಮ್ಮ ಮನೆಗೆ ಬಂದಿರುವುದನ್ನು ಆತ ವಿರೋಧಿಸಲಿಲ್ಲವಾದರೂ ಅವರ ಮಂಚ ಮತ್ತಿತರರ ದಿನ ಬಳಕೆಯ ಸಾಮನುಗಳನ್ನು ಇಡಲು ಒಪ್ಪಲಿಲ್ಲ
ಕೊನೆಗೆ ವಿಧಿ ಇಲ್ಲದೆ ನಮ್ಮ ಮನೆಯ ಎದುರಿಗಿದ್ದ ಇನ್ನೊಂದು ಚಿಕ್ಕ ಮನೆಯನ್ನು ಬಾಡಿಗೆ ತೆಗೆದುಕೊಂಡು ಅಲ್ಲಿ ಸಾಮಾನುಗಳನ್ನು ಹಾಕುವದಾಗಿ ನಿರ್ಧರಿಸಿ ಆ ಮನೆಗೆ ಆಡ್ವಾನ್ಸ್ ಸಹಾ ಕೊಟ್ಟೆವು (ಮೊತ್ತ ಚಿಕ್ಕದೇ ಹತ್ತು ಸಾವಿರ) . ನಮ್ಮ ತಾಯಿ ಈ ನವೆಂಬರ್‌ಗೆ ಬರುವುದಾಗಿ ತಿಳಿಸಿದರು.
ಒಂದುವರೆ ತಿಂಗಳು ಮನೆ ಖಾಲಿ ಇತ್ತು ನಾವು ಖಾಲಿ ಮನೆಗೆ ಬಾಡಿಗೆಯನ್ನೂ ಕೊಟ್ಟೆವು
ಹೋದ ತಿಂಗಳು ನಮ್ಮ ಅದೃಷ್ಟಕ್ಕೆ ಒಂದು ಮೂರು ಬೆಡ್ ರೂಮ್ ಹಾಗು ಇನ್ನಷ್ಟು ವಿಶಾಲ ವಿತ್ ಕಾರ್ ಪಾರ್ಕಿಂಗ್ ಫ್ಲಾಟ್ ಕಣ್ಣಿಗೆ ಬಿತ್ತು ಅದಕ್ಕೆ ಅಡ್ವಾನ್ಸ್ ಮಾಡಿದೆವು ಅಂದೇ ನಮ್ಮ ನಮ್ಮ ಮನೆಯ ಮಾಲೀಕ ತಾತನಿಗೆ ವಿಷ್ಯ ತಿಳಿಸಿದೆವು ಆತ ಅಡ್ವಾನ್ಸ್ ಈ ತಿಂಗಳ ೮ರಂದು ಕೊಡುವುದಾಗಿ ಹೇಳಿದ
ಆಗಲೆ ನಮ್ಮ ಇನ್ನೊಂದು ಮನೆಯ ಓನರ್‌ಗೂ ವಿಷ್ಯ ತಿಳಿಸಿದೆವು . ಅವನಂತೂ ಜಗಳಕ್ಕೇ ಬಂದ. ನಾನು ಆಮೇಲೆ ನೋಡೋಣ ಎಂದು ಸುಮ್ಮನಾದೆ
ಹೋದ ಶುಕ್ರವಾರ ನಾವು ಹೊಸ ಮನೆಗೆ ಬಂದೆವು .
ಆಯಾ ಮನೆಯ ಕೀ ಆಯಾ ಮನೆ ಮಾಲೀಕರಿಗೆ ಕೊಟ್ಟು ಬಂದೆವು.
ನೆನ್ನೆ ನನ್ನ ಮಗಳ ಹುಟ್ಟುಹಬ್ಬ . ಅದರ ತಯಾರಿಯಲ್ಲಿ ನಾವು ತೊಡಗಿದ್ದೆವು.
ಆ ಚಿಕ್ಕ ಮನೆಯ ಮಾಲೀಕ ನಾರಾಯಣರೆಡ್ಡಿ ಎಂದು ಅವನ ಹೆಸರು. ಬಂದ
ಬಂದವನು ಈ ತಿಂಗಳ ಬಾಡಿಗೆ ಕೇಳಿದ ನಮ್ಮ ಅಡ್ವಾನ್ಸ್ ನಿಮ್ಮ ಬಳಿಯಲ್ಲೇ ಇದೆಯಲ್ಲ ಅದರಲ್ಲೇ ಹಿಡಿದುಕೊಂಡು ನಮ್ಮ ಅಡ್ವಾನ್ಸ್ ಮರಳಿಸಿ ಎಂದಿದ್ದಕ್ಕೆ
ಅವನು ಹೇಳಿದ ಲೆಕ್ಕ ಹೀಗಿದೆ
"
ಒಂದು ತಿಂಗಳ ಬಾಡಿಗೆ 2500
ನೀವು ಒಂದು ತಿಂಗಳ ನಂತರ ಒಂದು ದಿನ ಎಕ್ಸ್ಟಾ ಇದ್ದಿರಿ ಹಾಗಾಗಿ ಮತ್ತೊಂದು ತಿಂಗಳ ಬಾಡಿಗೆ 2500 (ಒಂದು ದಿನಕ್ಕೆ ಒಂದು ತಿಂಗಳ ಬಾಡಿಗೆ )
ಮತ್ತೆ ಅಗ್ರೀಮೆಂಟ್ ಪ್ರಕಾರ ಒಂದು ತಿಂಗಳ ಬಾಡಿಗೆ ಹಿಡಿಯಬೇಕು ಅದಕ್ಕೆ ಮತ್ತೆ ಎರೆಡು ಸಾವಿರ
ಮತ್ತೆ ಮನೆ ಪೈಂಟಿಂಗ್ ಕ್ಲೀನಿಂಗ್‌ಗೆ ಮತ್ತೆ ಎರೆಡುವರೆ ಸಾವಿರ ನಿಮ್ಮ ಹತ್ತು ಸಾವಿರ ಮುಗಿದೇ ಹೋಯ್ತು (ನಾವು ಆ ಮನೆಗೆ ಹೆಜ್ಜೆಯೂ ಇಟ್ಟಿಲ್ಲ)
ಮನೆಗೆ ಯಾರೂ ಬರದೇ ಇದ್ದರೆ ಮತ್ತೆ ಮುಂದಿನ ತಿಂಗಳ ಬಾಡಿಗೆ ಕೊಡಬೇಕು ಇಲ್ಲವಾದರೆ ಮನೆ ಹತ್ತಿರ ಬರುತ್ತೇನೆ ಎಂದು ಹೆದರಿಸಿದ
"
ನನಗಂತೂ ಮನಸ್ಸು ರೋಸಿ ಹೋಯ್ತು . "ಸರಿ ಅದ್ಯಾವ ಜನ್ಮದಲ್ಲೂ ನಿಮ್ಮ ಋಣ ನಾನಿಟ್ಟುಕೊಂಡಿದ್ದೆ . ಅದು ತೀರಿತು ಹೋಗಲಿ ನಮ್ಮ ಹಣ ಇಟ್ಟುಕೊಂಡು ಸಂತೋಷವಾಗಿರು . ಹತ್ತು ಸಾವಿರ ಕಳೆದುಕೊಂಡು ನಾವು ಬಡವಾರಾಗುವುದಿಲ್ಲ. ನಮಗೆ ಮೋಸ ಮಾಡಿ ನೀವು ಬಂಗ್ಲೆ ಕಟ್ಟುವುದಿಲ್ಲ . ಇನ್ನೊಮ್ಮೆ ಮನೆ ಹತ್ತಿರ ಬರಬೇಡಿ ಎಂದು ಹೇಳಿ ಕೈ ಮುಗಿದೆ.
ನಮ್ಮ ಯಜಮಾನರು ಕೇಸ್ ಹಾಕುವ ಅದೂ ಇದೂ ಎಂದೆಲ್ಲಾ ಹೇಳಿದರು .
ನಾನೇ ಬೇಡ ಎಂದೆ .

ಈ ರೀತಿಯ ಲೆಕ್ಕ ಎಲ್ಲಾದರೂ ಕೇಳಿದ್ದೀರಾ
ನಂತರ ತಿಳಿಯಿತು ಇದು ನನಗಷ್ಟೆ ಅಲ್ಲ ಈ ರೀತಿಯ ಕಹಿ ಅನುಭವ ಅನ್ಯಾಯಗಳು ನಮ್ಮೂರಲ್ಲಿ ಸಾಮಾನ್ಯ. ರೆಡ್ದಿಗಳ (ಎಲ್ಲರೂ ಅಲ್ಲ ಕೆಲವರನ್ನು ಬಿಟ್ಟು)ಅನ್ಯಾಯಕ್ಕೆ ಕೊನೆ ಇಲ್ಲವೇ?
ಮನೆ ಮಾಲೀಕರ ಈ ದೌರ್ಜನ್ಯಕ್ಕೆ ಕಡಿವಾಣ ಹೇಗೆ . rent control ನೀತಿ ನಮ್ಗೆ ಅನ್ವಯಿಸುವುದಿಲ್ಲವೇ? ತಿಳಿದವರು ಹೇಳಿ
ನಿಮ್ಮಲ್ಲಿ ಹೀಗೆ ಮಾಲೀಕರ ದೌರ್ಜನ್ಯಕ್ಕೆ ಒಳಗಾಗಿದ್ದೀರಾ? ?

Rating
No votes yet

Comments