ಚರ್ಚೆಗಳನ್ನು ಗೆಲ್ಲಲು ಸುಲಭ ಸೂತ್ರಗಳು

ಚರ್ಚೆಗಳನ್ನು ಗೆಲ್ಲಲು ಸುಲಭ ಸೂತ್ರಗಳು

Comments

ಬರಹ

ಚರ್ಚೆ ಮಾಡಿ ಗೆಲ್ಲುವುದು ಬಹಳ ಕಷ್ಟ. ಅದರಲ್ಲೂ ನಾವು ನಂಬಿರುವ (ಆದರೆ ತಪ್ಪಾಗಿರುವ)
ವಿಶಯಳಲ್ಲಂತೂ ಇನ್ನು ಕಷ್ಟ. ಆದರೆ ಎಲ್ಲ ಕಷ್ಟಗಳಿಗೂ ಮದ್ದು ಇರುವ ಹಾಗೆ ಇದಕ್ಕೂ ಇದೆ.
ಚರ್ಚೆ ಮಾಡುವಾಗ ಈ ಕೆಳಗಿನ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಆಯಿತು ಅಷ್ಟೇ!

* ವಿಶಯಾಂತರ: ಯಾವಾಗ ನಮ್ಮ ವಿಚಾರ ತಪ್ಪು ಎಂದು ಒಪ್ಪಿಕೊLLಉವ ಪರಿಸ್ಥಿತಿ ಬರುತ್ತದೆಯೋ, ಆಗ ತಕ್ಷಣ ವಿಶಯಾಂತರ ಮಾಡಿ.
ಉದಾ:
ನಾನು: ೧=೨ ಎಂಬುದನ್ನು ಗಣಿತದ ಮೂಲಕ prove ಮಾಡಿದ್ದೇನೆ. ಆದ್ದರಿಂದ ನಾನು ಹೇಳುವುದು ಸರಿ.
ಪ್ರತಿವಾದಿ: ನಿಮ್ಮ proof ನಲ್ಲಿ ತಪ್ಪಿದೆ. Equation ನ ಎರಡೂ ಕಡೆ ಸೊನ್ನೆಯಿಂದ ಭಾಗಿಸಿದ್ದೀರಿ.
ನಾನು: ಗಣಿತಕ್ಕೆ ನಿಲುಕದೇ ಇರುವ ನಿಯಮಗಳು ಇರಬಹುದಲ್ಲವೇ?
ಪ್ರತಿವಾದಿ : (ದಂಗು!!)

* ಹಿರಿತನ : ಎಲ್ಲವನ್ನೂ ತಿಳಿದಂತೆ ಮಾತಾಡಿ. ತಿಳಿದಿರಲೇ ಬೇಕೆಂದು ಇಲ್ಲ,
ತೋರಿಸಿಕೊಂಡರೆ ಸಾಕು. ಎದುರಿನವರನ್ನು ಏಕವಚನದಲ್ಲಿ ಸಂಬೋಧಿಸಿ, ವಯಸ್ಸಿನಲ್ಲಿ
(ಆದ್ದರಿಂದ ತಿಳುವಳಿಕೆಯಲ್ಲಿ) ಕೀಳು ಎನ್ನುವಂತೆ ಮಾಡಿದರೆ ಬೋನಸ್ ಅಂಕಗಳು.
ಉದಾ:
ಪ್ರತಿವಾದಿ: ಇಲ್ಲಿ ನೋಡಿ ನೀವೇ ಹಿಂದೆ ಒಪ್ಪಿಕೊಂಡಂತೆ ನೀವು ಎಲ್ಲರೂ ಗಂಜಿ ಹಾಕಿದ
ಪಂಜಿ ಉಡಬೇಕೆಂದು ಅಪೇಕ್ಷಿಸುವುದಿಲ್ಲ ಆದರೆ ಈಗ ನೋಡಿದರೆ ಗಂಜಿ ಇಲ್ಲದ ಪಂಜಿ
ಉಟ್ಟವರೆಲ್ಲರೂ ಹುಚ್ಚರು ಎನ್ನುತ್ತಿದ್ದೀರಲ್ಲ?
ನಾನು: ನೋಡು ತಮ್ಮಾ, ಪಂಜಿ ಎನ್ನುವುದು ನಿಮಿತ್ತ ಮಾತ್ರ. ನಿನ್ನಂತೆ ಸಣ್ಣ
ವಯಸ್ಸಿನಲ್ಲಿ ಇದ್ದಾಗ ನಾನು ಕೂಡ ಇದರ ಬಗ್ಗೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದೆ.
ಆದರೆ ವಯಸ್ಸಿನಿಂದ ಬರುವ ಅನುಭವವೇ ಬೇರೆ. ನನ್ನಷ್ಟು ತಲೆ ನೆರೆತ ಮೇಲೆ ನಿನಗೆ
ತಿಳಿಯುತ್ತದೆ. ನಿನ್ನ ಯೌವನವನ್ನು ಕ್ಷುಲ್ಲಕ ಪಂಜಿಯ ಬಗ್ಗೆ ತಲೆ ಕೆಡಿಸಿಕೊಂಡು
ವ್ಯರ್ಥ ಮಾಡಬೇಡ.
ಪ್ರತಿವಾದಿ : (ತಲೆ ಕೆರೆದು ಕೊLLಉವನು)

* ಉದ್ಧರಿಸುವುದು: ಗಾದೆಗಳು, ಶ್ಲೋಕಗಳು ಇತ್ಯಾದಿಗಳನ್ನು ಯಥೇಚ್ಚವಾಗಿ ಉಧ್ಧರಿಸಿ.
ಅವು ಸಂದರ್ಭಕ್ಕೆ ಸೂಕ್ತವಾಗಿರಲೇ ಬೇಕು ಎಂದು ಇಲ್ಲ. (ಉದಾ: ಆಕಳು ಕಪ್ಪಾದರೆ ಹಾಲು
ಕಪ್ಪೇ ಅಂದಹಾಗೆ ನಮ್ಮ ಪಕ್ಕದ ಮನೆಯ ಹಸು ೧೦ ಲೀಟರ್ ಹಾಲು ಕೊಡುತ್ತದೆ). ಇದರಿಂದ ೩
ವಿಧದಲ್ಲಿ ಉಪಯೋಗ ಇದೆ. ಒಂದು, ನೀವು ಜ್ನಾನಿಗಳು ಎಂದು ನೋಡುವವರಿಗೆ ಅನಿಸುತ್ತದೆ,
ಎರಡು, ಏನನ್ನೂ ತಿಳಿಯದ ಅಮಾಯಕರಿಗೆ ನೀವು ಈಪಾಟಿ ಶ್ಲೋಕ ಹೇಳುವುದು ನೋಡಿದರೆ
ನಿಜವನ್ನೇ ಹೇಳುತ್ತಿರಬೇಕು ಅನಿಸುತ್ತದೆ ಮತ್ತು ಕೊನೆಯದಾಗಿ ಪ್ರತಿವಾದಿಗೆ ನಿಮ್ಮ
ಶ್ಲೋಕದ ಅರ್ಥ ಮತ್ತು context ಸರಿಯಾಗಿ ಗೊತ್ತಿಲ್ಲದಿದ್ದರೆ ಆತ/ಆಕೆ ಸೋಲನ್ನು
ಒಪ್ಪಿಕೊLLಅಲೇ ಬೇಕಾಗುತ್ತದೆ.
ಉದಾ:
ಪ್ರತಿವಾದಿ: ಹಾಗಾದರೆ ನಾವು ದೇವರನ್ನು ವಾರಕ್ಕೊಮ್ಮೆ ನೆನೆಸಿಕೊಂಡರೆ ಸಾಕೆ?
ನಾನು: ಖಂಡಿತ. ಶಂಕರಾಚಾರ್ಯರು ಭಜಗೋವಿಂದಂ ನಲ್ಲಿ ಹೇಳಿಲ್ಲವೇ 'ಮನಸಿ ವಿಚಿಂತ್ಯಾ
ವಾರಂ ವಾರಂ' ಅಂತ? ಅಂದರೆ ಪ್ರತಿ ವಾರವೂ ದೇವರ ಕುರಿತು ಮನಸ್ಸಿನಲ್ಲಿ ಚಿಂತಿಸು ಅಂತ
ಪ್ರತಿವಾದಿ : (ಬಟ್ಟೆಯನ್ನು ಹರಿದುಕೊLLವನು)

* ಒಗ್ಗಟ್ಟಿನಲ್ಲಿ ಬಲವಿದೆ: ಒಬ್ಬರಿಗಿಂತ ಇಬ್ಬರು ಲೇಸು. ಇಬ್ಬರು ಸೇರಿದರೆ
ಪ್ರತಿವಾದಿಯ ಜಂಘಾಬಲವೇ ಉಡುಗಿಸಬಹುದು. ನೀವು ಮತ್ತು ನಿಮ್ಮ ಸಹಾಯಕ ಇಬ್ಬರೂ ಪರಸ್ಪರ
ವಿದ್ವತ್ತು, ವಿವೇಕ ಇವನ್ನು ವಾಚಾಮಗೋಚರವಾಗಿ ಹೊಗಳ ಬೇಕು. ಪರಸ್ಪರ ಬೆನ್ನು ಕೆಂಪು
ಆಗುವಷ್ಟು ತಟ್ಟಿಕೊLLಅ ಬೇಕು.
ಉದಾ:
ಪ್ರತಿವಾದಿ: ಹಾಗಾದರೆ ನೀವು ಹೇಳುತ್ತಿರುವುದು ತಪ್ಪು ಎಂದಾಯಿತು
ನನ್ನ ಸಹಾಯಕ: (ನನ್ನ ಕುರಿತು) ನೀನು ಇದಕ್ಕೆಲ್ಲ ಅಂಜಬೇಡ ಮಾರಾಯ. ನೀನು ಎಂತಹ ಮೇಧಾವಿ ಎಂದು ನಮಗೆಲ್ಲ ಗೌರವ ಇದೆ.
ನಾನು: ಸಹಾಯಕ, ನಿನ್ನಂತಹ ಮಹಾ ಪಂಡಿತನೇ ಈ ಮಾತು ಹೇಳಿದಮೇಲೆ ನಾನು ಮಹಾನ್ ಮೇಧಾವಿಯೇ ಇರಬೇಕು. ನನಗೆ ಯಾಕೆ ಏ ಕೀಳು ಮಟ್ಟದ ಜಗಳ? ನಾನು ಇಲ್ಲಿಂದ ಹೊರಟೆ.
ಪ್ರತಿವಾದಿ: (!!!???)

* ವೈಜ್ನಾನಿಕತೆ: ಈ ದಿನಗಳಲ್ಲಿ ವೈಜ್ನಾನಿಕ ವಿಚಾರಗಳಿಗೆ ಮಾತ್ರ ಬೆಲೆ. ಆದ್ದರಿಂದ
ವೈಜ್ನಾನಿಕ ಅಥವ pseudo-ವೈಜ್ನಾನಿಕ ಮಾತುಗಳನ್ನು ಚರ್ಚೆಯಲ್ಲಿ ಸೇರಿಸಿ. ಇದು ಕೂಡ
ಗಾದೆ/ಶ್ಲೋಕಗಳಂತೆಯೇ ಮೂರು ರೀತಿಯ ಲಾಭವನ್ನು ಕೊಡುತ್ತದೆ.
ಉದಾ:
ಪ್ರತಿವಾದಿ: ನೀವು ಹೇಳುವುದು ಸರಿಯಾದರೆ ನಮ್ಮ ಕೈ ಕಾಲುಗಳು ಸೆಟೆದುಕೊLLಅ ಬೇಕಿತ್ತಲ್ಲ?
ನಾನು: ಆಹಾ! ನಿಮಗೆ ವಿಜ್ನಾನದ ಪರಿಚಯವಿಲ್ಲ ಅನಿಸುತ್ತದೆ. ಪ್ರತಿ ಜೀವಕೋಶದಲ್ಲೂ
ಅಡಿನೋಸಿನ್ ಟ್ರೈ ಫಾಸ್ಪೇಟ್ ಅನ್ನುವ ರಸಾಯನಿಕ ಇರುತ್ತೆ. ಅದನ್ನ ಎಟಿಪಿ ಅಂತ ಕೂಡ
ಕರೀತಾರೆ. ಅದರಿಂದಲೇ ಕೈ ಕಾಲುಗಳು ಸೆಟೆಯೊಲ್ಲ.
ಪ್ರತಿವಾದಿ: ಅದು ಸರಿ ಆದರೆ ಈ ವಿಶಯ ಜಿರಲೆ ಔಶದಿ ಕುಡಿದರೆ ಮನುಶ್ಯ ಸಾಯುವುದಿಲ್ಲ ಎಂದು ನೀವು ಹೇಳುತ್ತಿರುವುದಕ್ಕೆ ಹೇಗೆ ಪೂರಕವಾಗುತ್ತದೆ?
ನಾನು: ಹೈಸೆನ್ ಬರ್ಗ್ uncertainty principle ಪ್ರಕಾರ ಆಗುತ್ತದೆ!
ಪ್ರತಿವಾದಿ : (ಸಂಪೂರ್ಣ ಸಮಾಧಿ ಸ್ಥಿತಿ ತಲುಪುವನು).

ಇನ್ನೂ ಯಾವುದಾದರು ವಿಧಾನಗಳಿದ್ದಲ್ಲಿ ಉದಾಹರಣೆ ಸಮೇತವಾಗಿ ಕಮೆಂಟುಗಳಲ್ಲಿ ಬರೆಯುವುದು.

ಗಮನಿಸಿ: ಇದು ಹಾಸ್ಯ ಬರಹ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet