ಲವೇರಿಯಾ..ಪಬೇರಿಯಾ..

ಲವೇರಿಯಾ..ಪಬೇರಿಯಾ..

‘ಸರ್ದಿ ಖಾಂಸೀ ನ ಮಲೇರಿಯಾ ಹುವಾ..
ಲವೇರಿಯಾ ಹುವಾ..ಲವೇರಿಯಾ ಹುವಾ..’
ಹಾಡು ನೆನಪಿದೆಯಾ?

ಮಲೇರಿಯಾ- ಒಂದು ರೋಗ.
ಲವೇರಿಯಾ?-ಲವ್ ಮಾಡುವವರನ್ನು ಬಿಟ್ಟು ಉಳಿದವರಿಗೆ ಅದು ರೋಗದಂತೆ ಕಾಣುವುದು.
ಮಗ/ಮಗಳು ಲವ್ ಮಾಡುವುದು ಗೊತ್ತಾದ ಕೂಡಲೇ ‘ಕ್ರಿಮಿ’ ತರಹ ನೋಡುವರು.
ಅಪ್ಪ, ಅಮ್ಮ, ಆಂಟಿಬಯೋದಿ(ಟಿ)ಕ್ ಸುರು..

ನಾವೇನೋ ಸಿನಿಮಾದಲ್ಲಿ ಖರ್ಚು ಕಮ್ಮಿ ಮಾಡಲು ಹೀರೋ ಅಥವಾ ಹೀರೋಯಿನ್ ಅಪ್ಪನನ್ನ ವಿಲನ್ ಆಗಿ ತೋರಿಸುತ್ತೇವೆ. ಇಂತಹ ಸಿನೆಮಾ ನೋಡೀ, ನೋಡೀ ಜನ ಸಹ ಹಾಗೇ ಆಗಿದ್ದಾರೆ.
ಮಗ/ಮಗಳ ಲವ್ ಗೊತ್ತಾದ ಕೂಡಲೇ ‘…ಕಾಲು ಮುರೀತೇನೆ’, ‘ಮದುವೆಯಾಗುವುದಿದ್ದರೆ ನನ್ನ ಹೆಣದ ಮೇಲೇ.. ..’ಡಯಲಾಗ್ ಹೊಡೆದದ್ದೇ ಹೊಡೆದದ್ದು. ಕಾಲು ಬಿಡಿ ಕೋಲೂ ಮುರಿಯುವುದಿಲ್ಲ. ಒಂದು ವರ್ಷದಲ್ಲಿ ಹೆಣ ತೊಡೆಯಲ್ಲಿ ಮೊಮ್ಮಗುವನ್ನು ಆಡಿಸುತ್ತಿರುತ್ತದೆ! :)

ಇದೇ ರೀತಿ ಸಿನೆಮಾದಲ್ಲಿ ವಿಲನ್‌ಗಳ ಕುಡಿತ ನೋಡೀ, ನೋಡೀ, ಕುಡಿತದ ಬಗ್ಗೆಯೂ ಜನರಿಗೆ ತಪ್ಪು ಕಲ್ಪನೆ ಇದೆ.
ಕುಡೀಬೇಕು ಅಂತಾ ನಮ್ಮ ಮನದಲ್ಲಿ ಇರೋದೇ ಇಲ್ಲ. ಡ್ಯೂಟಿ ಮುಗಿದು ಮನೆಗೇ ಹೊರಟಿರುತ್ತೇವೆ.
‘ಪಬ್’ ಹತ್ತಿರ ಬಂದಾಗ ಕೈಕಾಲು ನಡುಗಲು ಸುರುವಾಗುವುದು. ಮೈಬಿಸಿಯೇರುವುದು.
ಇನ್ನೊಂದು ಹೆಜ್ಜೆ ಮುಂದಿಡಲೂ ಆಗುವುದಿಲ್ಲ.
ಇದೇ ಲವೇರಿಯಾದಂತೆ-‘ಪಬೇರಿಯಾ’.
ರೋಗಾನಾ?
ಊಹೂಂ..ರಾಗ..ಅನುರಾಗ.. :)
ನಿಮ್ಮೇರಿಯಾದಲ್ಲಿ ರೋಡ್ ಸರಿ ಇಲ್ಲ, ಕೆರೆ ಸರಿ ಇಲ್ಲಾ, ಬೋರ್ ಸರಿ ಇಲ್ಲಾ, ನೀರು ಸರಿ ಇಲ್ಲಾ..ಇಲ್ಲಾ..ಇಲ್ಲಾ..

ನಮ್ಮ್ ಪಬೇರಿಯಾದಲ್ಲಿ,
ಇಲ್ಲ ಎಂಬುದೇ ಇಲ್ಲ,
ಎಲ್ಲಾ ಪ್ಯೂರ್,
ಆರೋಗ್ಯ ಸೂಪರ್ರು.

‘ಹಬ್ಬದ ದಿನವೂ ಸುರು ಮಾಡಿದ, ಪಬ್, ಬಾರ್ ಎಂದು., ಇದನ್ನು ಬಿಟ್ಟು ಬೇರೆ ವಿಷಯವೇ ಇಲ್ಲ..’ ಎಂದು ಬೈಯಲು ಸುರುಮಾಡಿದಿರಾ?
ನೀವೇ ಹೇಳಿ- ಇತ್ತೀಚೆಗಿನ ದೇವರು, ಧರ್ಮದ ಅಮಲಿಗಿಂತ ನಮ್ಮ ಅಮಲು ವಾಸಿ ಅಲ್ವಾ?

ಹೋಗಲಿ. ನಿಮಗೆ ಬೇಜಾರು ಆಗುವುದಾದರೆ ಪಬ್ ವಿಷಯ ಬಿಟ್ಟೆ.
‘ಮುತಾಲಿಕ್ ಮೇಲಾಣೆ’ ಪಬ್ ವಿಷಯ ಇನ್ನು ಮಾತನಾಡುವುದಿಲ್ಲ.
*******
ಬೇರೇ ಟಾಪಿಕ್-
‘ಮಾರ್ಚ್ ೧೪’- ಏನು ವಿಶೇಷ ಹೇಳಿ?
ಆಗಲೇ ಮರೆತು ಬಿಟ್ಟಿರಾ?
ವ್ಯಾಲಂಟೈನ್ಸ್ ಡೇ!!?
ಅರೆರೆ.. ಸ್ಸಾರೀ.. ಹೌದೂ, ಹಾಗಾದರೆ ಮಾರ್ಚ್ ೧೪ಕ್ಕೆ ‘ಹ್ಯಾಪಿ ವ್ಯಾಲಂಟೈನ್ಸ್ ಡೇ’ ಎಂದು ಹೂ ಕೊಟ್ಟದ್ದು ಯಾರೂ..? ಇರಲಿ. ಅವರನ್ನು ಮತ್ತೆ ನೋಡಿಕೊಳ್ಳುತ್ತೇನೆ.
ಈಗ ಪೆಬ್ರವರಿ ೧೪ರ ವಿಷಯಕ್ಕೆ ಬರುವೆ..
ಆದಿನ ‘ನೇರ’ ಮನೆಗೆ ಬಂದೆ..

ಸಸೇಸ,
ಗನೇಸ.
*********
ಯುಗಾದಿಯ ಶುಭಾಶಯಗಳು,
ಗಣೇಶ.

Rating
No votes yet

Comments