ನಾವು ಆಡುತ್ತಿದ್ದ ಆಟಗಳು

ನಾವು ಆಡುತ್ತಿದ್ದ ಆಟಗಳು

ನಮ್ಮತನದ ಆಟಗಳು ಎಸೊಂದು ಇವೆ. ನಾನು ಹೀಗೆ ಸುಮ್ಮನೆ ಪಟ್ಟಿ ಮಾಡ್ದೆ. ಪಟ್ಟಿ ಮಾಡುವಾಗ ಅವುಗಳನ್ನು ಬಾರಿ ಉತ್ಸಾಹದಿಂದ ಆಡುವ ಚಿತ್ರಗಳು ನನ್ನ ಕಣ್ಣ ಮುಂದೆ ಹಾದು ಹೋದವು.

೧) ಚಿನ್ನಿ(ಗಿಲ್ಲಿ) -ದಾಂಡು

೨) ಗೋಲಿ

     --> ಕಾಲಿ ಪೇಂದ ಉಡೀಸ್ ( ಒಂದು ಚೌಕಾಕಾರದ ಎಲ್ಲೆಗೆ ಗೋಲಿ ಎಸೆದು ನಂತ ಗೋಲಿಗಳನ್ನು ಚದುರಿಸುವುದು...ಸಕ್ಕತ್ ಸ್ಕಿಲ್ ಬೇಕಪ್ಪ ಇದಕ್ಕೆ :) )

     --> ಹಿಂತಿ-ಮುಂತಿ ( ಎರಡು ಸಣ್ಣ ಗೋಲಿಗಳನ್ನು ಒಂದು ಆಯತಾಕಾರದ ಎಲ್ಲೆ(boundary) ಮಾಡಿ, ಎಸೆದು, ದಪ್ಪ ಗೋಲಿಯಿಂದ ಗುರಿಯಿಟ್ಟು ಹೊಡೆಯೋದು)

೩) ಬುಗುರಿ ( ಬುಗುರಿ ಮೇಲೆ ಗುನ್ನ ಬಿದ್ರೆ ಅಳೋದು ಬಾಕಿ :) )

೪) ರಾಮ ಬೀಮ ಸೋಮ --- ೧, ೨, ೩ ಪುಟ ಬರ್ಸಿ ಸಿಕ್ದವ್ರಿಗೆ ಚೆಂಡಲ್ಲಿ ಹೊಡ್ಯೋದು

೫) ಲಗೋರಿ - ಈ ಆಟದ concept ಸಕ್ಕತ್ತಾಗಿದೆ.. ನೀವು ಆಡಿದ್ರೆ ನೆನೆಸಿಕೊಳ್ಳಿ.

೬) ಬಸವನ ಕಲ್ಲು - ಒಂದು ಚಪ್ಪಟ್ಟೆ ಆಕಾರದ ಕಲ್ಲಿನ ಬಿಲ್ಲೆಯಿಂದ ಮೊದಲೆ ಮಾಡಿರುವ ಗುಳಿಯಿಂದ ದುಂಡುಗಿರುವ ಕಲ್ಲನ್ನು(ಬಸವನ ಕಲ್ಲು) ಹೊಡೆದು ದೂರ ತಳ್ಳುವುದು.. ದೂರ ಹೋದಷ್ಟು ಅದನ್ನು ಮುಟ್ಟಲು ಕಷ್ಟಾ ...ಒಬ್ಬರು ಸೋಲಲೇಬೇಕು

....

....

ಇನ್ನು ಎಷ್ಟೋ ...ಈ ತರ...?  ಎಲ್ಲ ಕ್ರಿಕೆಟ್ ನಿಂದ ಮೂಲೆಗೆ ಸರಿದಿವೆ... ಈ ಆಟಗಳಿಂದ ಸಿಗುವ ಕುಸಿ ಮುಂದಿನವರಿಗೆ ಸಿಗುತ್ತೊ ಇಲ್ವೊ? :(

Rating
No votes yet

Comments