ಆಡು ಆಟ ಆಡು

ಆಡು ಆಟ ಆಡು

ಆಡು ಆಟ ಆಡು

ಸಂಜೆ ಆಫೀಸಿನಿಂದ ಮನೆಗೆ ಬಂದಾಗ ಈ ಹಾಡು ಟಿವಿಯಲ್ಲಿ ಬರುವ ಯಾವುದೋ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತಿತ್ತು. ಆ ಚಿತ್ರದ ಹಾಡು ನನ್ನ ಬಳಿ ಇಲ್ಲದಿದ್ದರಿಂದ ಗೂಗಲ್ ಸರ್ಚ್ ಮಾಡುವ ಯೋಚನೆ ಮನಸ್ಸಿಗೆ ಬಂತು.
ನನಗೆ ಯೂಟ್ಯೂಬ್.ಕಾಂ ಮೂಲಕ ಈ ಹಾಡಿನ ವೀಡಿಯೋ ಲಿಂಕ್ ದೊರೆಯಿತು.

’ಆಡು ಆಟ ಆಡು...’ ಅಂತ "ಕುಳ್ಳ ಏಜೆಂಟ್ ೦೦೦" ಚಲನಚಿತ್ರದ ಹಾಡು.
ಹೆಸರಾಂತ ಹಿಂದಿ ಚಲನಚಿತ್ರ ಗಾಯಕ ಕಿಶೋರ್ ಕುಮಾರ್ ಕನ್ನಡದಲ್ಲಿ ಹಾಡಿದ ಏಕೈಕ ಗೀತೆ.

ಈ ಹಾಡನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ ಆಯಿತು.

ಈ ಹಾಡನ್ನು ನೀವೆಲ್ಲರೂ ಕೇಳಿರ್ತೀರಾ ಅಂತ ಅಂದ್ಕೊಂಡಿದ್ದೀನಿ.

ಹಾಡಿನ ವೀಡಿಯೋ ಇಲ್ಲಿದೆ.

ಈ ಹಾಡಿನ ಗೀತ ರಚನಿಕಾರರು ಚಿ.ಉದಯಶಂಕರ್. ಸಂಗೀತ ಸಂಯೋಜಿಸಿರುವವರು ರಾಜನ್-ನಾಗೇಂದ್ರ.

ಹಾಡಿನ ಸಾಹಿತ್ಯ ಇಲ್ಲಿದೆ.

ಆಡು ಆಟ ಆಡು
ನೀ ಆಡು ಆಡು ಆಡಿ ನೋಡು
ಹಾ ರಾಜ ಹೇ ರಾಣಿ
ಹೇ ಜಾಕಿ ಹೋ ಜೋಕರ್
ಎದುರಲ್ಲಿ ನಿಗಾ ಇಡು

ರಾಜ ಬೇಕೆ ರಾಣಿ ಬೇಕೆ
ಆಟದಲ್ಲಿ ಗೆಲ್ಲಬೇಕೆ
ಗೊತ್ತೇನು ಹಣೆಯಬರಹ ಎಲ್ಲ

ಸೋಲಿಗಾಗಿ ರೋಷವೇಕೆ
ಗೆಲುವಿಗಾಗಿ ಮೋಸವೇಕೆ
ಇಲ್ಲೆಲ್ಲ ಈ ವೇಷ ಆ ವೇಷ ಅಲ್ಲ

ನಿನ್ನಾಟ ಜೋಕೆ ಜೋಕು
ಗೆಲ್ಲಾಟ ಬೇಕೆ ಬೇಕು
ಸಾಕು ಸಾಕು ಶೋ ಮಾಡು
ಜಿಗಿ ಜಿಗಿ ಸ್ಟಾರ್ಟ್

ಆಡು ಆಟ ಆಡು
ನೀ ಆಡು ಆಡು ಆಡಿ ನೋಡು
ಎದುರಲ್ಲಿ ನಿಗಾ ಇಡು

ನಿನ್ನ ಕಣ್ಣು ಹೆಣ್ಣ ಮೇಲೆ
ನೂರು ಕಣ್ಣು ನಿನ್ನ ಮೇಲೆ
ಜೋಪಾನ ಜಾರಿಯೆ ಬಿದ್ದೀಯೆ ಜೋಕೆ

ಮೈಯನ್ನು ಕುಣಿಸು ಕುಣಿಸು
ಕಣ್ಣನ್ನು ತಣಿಸು ತಣಿಸು
ಅತ್ತಾ ಇತ್ತಾ ಸುತ್ತಾಡು
ಬೇಗ ಬೇಗ ಬೇಗ

ಆಡು ಆಟ ಆಡು
ನೀ ಆಡು ಆಡು ಆಡಿ ನೋಡು
ಹಾ ರಾಜ ಹೇ ರಾಣಿ
ಹೇ ಜಾಕಿ ಹೋ ಜೋಕರ್
ಎದುರಲ್ಲಿ ನಿಗಾ ಇಡು

Rating
No votes yet

Comments