ಪ್ರೀತಿಯ ದೃಶ್ಯ ..... ನಿನಗೆ ಜನುಮದಿನದ ಶುಭಾಶಯಗಳು

ಪ್ರೀತಿಯ ದೃಶ್ಯ ..... ನಿನಗೆ ಜನುಮದಿನದ ಶುಭಾಶಯಗಳು

ನಲ್ಮೆಯ ಸಂಪದಿಗರೇ, ನಾಳೆ ನನ್ನ ಒಲವಿನ ತಂಗಿ ದೃಶ್ಯಳ ಹುಟ್ಟುಹಬ್ಬ . ನಿಮಗೆಲ್ಲಾ ತಿಳಿದಿರುವ ಹಾಗೇ ಅವಳೊಂದು ಚೈತನ್ಯದ ಚಿಲುಮೆ . ಸದಾ ಚಟುವಟಿಕೆಯ ಪಾದರಸ.... ತನ್ನ ಮಾತುಗಳಲ್ಲೇ ಸೆಳೆಯುವ ಕಾಂತೀಯ ವ್ಯಕ್ತಿತ್ವ. ಹೇಳಿದಷ್ಟೂ ಸಾಲದು . ಇರಲಿ , ನಿಮ್ಮೆಲ್ಲರ ಉಪಸ್ಥಿತಿಯಲ್ಲಿ ನಾನೇ ಮೊದಲಿಗೆ ಅವಳಿಗೆ ಶುಭಾಶಯಗಳನ್ನು ಹೇಳಬೇಕೆನ್ನಿಸಿತು ಅದಕ್ಕಾಗಿ ಈ ಪತ್ರ.......

ಮುದ್ದಿನ ತಂಗೀ ,

ಜನುಮದಿನವಿದು ನಿನದು ಬರಲಿ ನೂರ್ಬಾರಿ
ನಿನ್ನೆಲ್ಲ ಕಾರ್ಯದಲಿ ಸಿಗಲಿ ಜಯಭೇರಿ
ವಸಂತಕಾಲದಿ ಜನ್ಮ , ಇದು ನಿನ್ನ ಪುಣ್ಯ
ದಿನದಿನವು ಹೊಸತನವು ನೀ ರಮ್ಯ ಕಾವ್ಯ
ನಾ ನಿನ್ನ ಸೋದರಿಯು ಅದು ನನ್ನ ಭಾಗ್ಯ
ನೀ ನನ್ನ ಜೊತೆಗಿರಲು ಅನಿಸುತಿದೆ ಧನ್ಯ
ಬರೆದಿರುವೆ ಜೀವನಕೆ ಹೊಸದೊಂದು ಭಾಷ್ಯ
ಅದಕೆಂದೆ ಶುಭಾಶಯವು ಓ ನಲ್ಮೆಯ ದೃಶ್ಯ

Rating
Average: 5 (1 vote)

Comments